ರಾಮಚಂದ್ರಾಪುರಮಠಕ್ಕೆ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಭೇಟಿ
ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು, ಪದ್ಮಭೂಷಣ ಪುಲ್ಲೇಲ್ ಗೋಪೀಚಂದ್, ಅರವಿಂದ್ ಭಟ್ ಬೆಂಗಳೂರಿನ ಶ್ರೀರಾಮಚಂದ್ರಾಪುರಮಠಕ್ಕೆ ಕುಟುಂಬ ಸಹಿತರಾಗಿ ಆಗಮಿಸಿ ಶ್ರೀಸಂಸ್ಥಾನದವರಿಂದ ಅನುಗ್ರಹ ಪಡೆದರು.
ರಾಮಚಂದ್ರಾಪುರಮಠಕ್ಕೆ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಭೇಟಿ : ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು, ಪದ್ಮಭೂಷಣ ಪುಲ್ಲೇಲ್ ಗೋಪೀಚಂದ್, ಅರವಿಂದ್ ಭಟ್ ಬೆಂಗಳೂರಿನ ಶ್ರೀರಾಮಚಂದ್ರಾಪುರಮಠಕ್ಕೆ ಕುಟುಂಬ ಸಹಿತರಾಗಿ ಆಗಮಿಸಿ ಶ್ರೀಸಂಸ್ಥಾನದವರಿಂದ ಅನುಗ್ರಹ ಪಡೆದರು. ದೇಶಕ್ಕೆ ಗೌರವ ತಂದುಕೊಟ್ಟವರು ಶ್ರೀಮಠಕ್ಕೆ ಆಗಮಿಸಿರುವುದು ಸಂತಸದ ವಿಚಾರ, ಇವರುಗಳಲ್ಲಿರುವ ಸರಳತೆ, ವಿನಯ ಶ್ಲಾಘನೀಯ. ಸಿಂಧು, ಗೋಪೀಚಂದ್, ಅರವಿಂದ್ ಭಟ್ ಇವರು ತಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ, ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಶ್ರೀ ರಾಘವೇಶ್ವರ ಸ್ವಾಮೀಜಿ ಆಶಿಸಿದರು.
Share :
1/1
Featured Picture Galleries