Untitled Document
Sign Up | Login    
Dynamic website and Portals
  
Home >> Movie Home >> ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ
ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ
ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ
ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ

ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ. ಬ್ಯೂಟಿಫುಲ್ ಚಿತ್ರ ಈ ಹಿನ್ನೆಲೆಯಲ್ಲಿ ಕೊಂಚ ಮುಂದುವರಿದು ಪೂರ್ಣಪ್ರಮಾಣದ ಚಲನಚಿತ್ರವೊಂದರ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿರುವ ಅಷ್ಟೂ ಹಾಡುಗಳು ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ ಎಂದು ಉದ್ಯಮಿ ಪೂರಣ್ ವರ್ಮ ಹೇಳಿದರು. ಅವರು ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ ಹಾಗೂ ಫಸ್ಟ್ ಹ್ಯಾಂಡ್ ಪ್ರೋಡಕ್ಷನ್ ನಿರ್ಮಿಸಿರುವ ಬ್ಯೂಟಿಫುಲ್ - ಕಥೆ ಒಂದು... ಕಥೆ ಹಲವು ಎಂಬ ಪೂರ್ಣ ಪ್ರಮಾಣದ ಚಲನಚಿತ್ರದ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಈ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕ-ನಟ ಚೇತನ್ ಕೆ. ಸಿ ಸದಾ ಒಂದಿಲ್ಲೊಂದು ಹೊಸ ಪ್ರಯೋಗಗಳ ಮೂಲಕ ಸುದ್ದಿಯಾಗುವ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ನೂತನ ಸಾಹಸದ ಫಲವಾಗಿ ಮೂಡಿಬಂದಿರುವ ಬ್ಯೂಟಿಫುಲ್ ಚಲನಚಿತ್ರ 90 ನಿಮಿಷಗಳ ಪರಿಪೂರ್ಣ ಚಲನಚಿತ್ರ. ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾಗಿದ್ದ ಚೇತನ್ ಕೆ. ಸಿ, ಎಂ. ದಾನೀಶ್ ಮತ್ತು ಮಾಧವ ಹೊಳ್ಳ ನಿರ್ದೇಶನ ಈ ಚಿತ್ರಕ್ಕಿದ್ದು ಯುವ ಮನಸ್ಸು, ಸಂಬಂಧಗಳ ಸೂಕ್ಷ್ಮತೆಯನ್ನು ಅತ್ಯಂತ ನವಿರಾಗಿ ಹೇಳುವ ಪ್ರಯತ್ನವನ್ನು ಬ್ಯೂಟಿಫುಲ್ ಚಿತ್ರದಲ್ಲಿ ಮಾಡಲಾಗಿದೆ ಎಂದರು.

ಅತಿಥಿಗಳಲ್ಲೊಬ್ಬರಾದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ ಹೆಗಡೆ ಮಾತನಾಡಿ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಇಂಜಿನಿಯರಿಂಗ್, ನ್ಯಾಚುರೋಪತಿ, ಪದವಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಜೊತೆಗೆ ಈಗಾಗಲೇ ನೂರಕ್ಕೂ ಅಧಿಕ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಮಂಜು ಸಹ ಈ ಬ್ಯೂಟಿಫುಲ್ ಚಿತ್ರದಲ್ಲಿ ನಟಿಸಿದ್ದು ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಕಾಲೇಜು-ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಈ ರೀತಿಯ ಪರಿಪೂರ್ಣ ಚಿತ್ರ ನಿರ್ಮಾಣದ ಸಾಹಸ ಮಾಡಿರುವುದು ಇದೇ ಮೊದಲುತ್ಯಿ ಚಲನಚಿತ್ರದ ನಿರ್ದೇಶನ, ಸಂಗೀತ ನಿರ್ದೇಶನ, ನಟನೆ, ಛಾಯಾಗ್ರಹಣ, ಹಿನ್ನೆಲೆ ಗಾಯನ, ಸಾಹಿತ್ಯ, ಸಂಕಲನ ಸೇರಿದಂತೆ ಎಲ್ಲಾ ತಂತ್ರಜ್ಞರೂ ವಿದ್ಯಾರ್ಥಿಗಳೇ ಆಗಿರುವುದು ವಿಶೇಷ ಎಂದರು.

ಬ್ಯೂಟಿಫುಲ್ಚಲನಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ವಿದ್ಯಾರ್ಥಿಗಳಾದ ದಾನೀಶ್ ಹಾಗೂ ಚೇತನ್ ಕೆ. ಸಿ ಸಾಹಿತ್ಯ ಒದಗಿಸಿದ್ದಾರೆ. ಪವನ್ ಕೆ. ಬಿ, ಪೃಥ್ವಿ, ನಾಗೇಂದ್ರ ನಾಯಕ್, ಪ್ರೀತಿ, ಸುಪ್ರಿಯಾ ಆಚಾರ್ಯ ಹಿನ್ನೆಲೆ ಗಾಯನ ಮಾಡಿದ್ದು ಮಂಗಳೂರಿನ ಕ್ಯಾಡ್ ಮೀಡಿಯಾದಲ್ಲಿ ರೆಕಾರ್ಡಿಂಗ್ ಮಾಡಲಾಗಿದೆ ಎಂದು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಚಿತ್ರದ ಸಂಗೀತ ನಿರ್ದೇಶಕ ಸಾಕೇಶ್ ವಿಶ್ವಕರ್ಮ ನುಡಿದರು.

ಇನ್ನು ಕೆಲವೇ ದಿನಗಳಲ್ಲಿ ಬ್ಯೂಟಿಫುಲ್ ಚಿತ್ರ ತೆರೆಕಾಣಲಿದೆ. ಧ್ವನಿ ಸುರುಳಿ ಬಿಡುಗಡೆಯ ನಂತರ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ ವೇಕ್ ಅಪ್ಬ್ಯಾಂಡ್ ತಂಡದ ಅದ್ದೂರಿ ಬ್ಯಾಂಡ್ ಪ್ರದರ್ಶನ ನೆರೆದಿದ್ದವರಿಗೆ ಸಂಗೀತದ ರಸದೌತಣ ನೀಡಿತು. ಕಲರ್ಸ್ ಕನ್ನಡ ಚಾನಲ್‌ನ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಸನಲ್ ನಾಯರ್ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸಮಾರಂಭದಲ್ಲಿ ಪ್ರಾಧ್ಯಾಪಕ ಶೈಲೇಶ್ ಕುಮಾರ್, ಸುನಿಲ್ ಹೆಗ್ಡೆ, ಶ್ರುತಿ ಜೈನ್, ಕಿರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆತ್ಮೀಯ ಕಾರ್ಯಕ್ರಮವನ್ನು ನಿರೂಪಿಸಿದರು.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited