ಎಚ್.ಪಿ.ಆರ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ಎ.ಹರಿಪ್ರಸಾದ್‌ರಾವ್ ಅವರು ನಿರ್ಮಿಸುತ್ತಿರುವ ನೂತನ ಚಿತ್ರಕ್ಕೆ ‘ಜಂಬೂಸವಾರಿ‘ ಎಂದು ನಾಮಕರಣ ಮಾಡಲಾಗಿದೆ.
ಈ ಚಿತ್ರಕ್ಕಾಗಿ ಎಸ್.ಎಲ್.ಚಂದ್ರು ಅವರು ಬರೆದಿರುವ ‘ತುಸುಮೆಲ್ಲನೆ ಕೊಂಚ ದೂರ ಜೊತೆಯಾಗಿ ಸಾಗುವ ಬಾರಾ‘ ಎಂಬ ಹಾಡಿನ ಚಿತ್ರೀಕರಣ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆದಿದೆ. ಪ್ರಜ್ವಲ್, ನಿಕ್ಕಿ ಅಭಿನಯಿಸಿದ ಈ ಹಾಡಿಗೆ ಹರಿಕೃಷ್ಣ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಈ ಭೂಮಿ ಆ ಭಾನು‘ ಚಿತ್ರ ನಿರ್ದೇಶಿಸಿ ಅನುಭವವಿರುವ ವೇಣುಗೋಪಾಲ್.ಕೆ.ಸಿ ಈ ಚಿತ್ರದ ನಿರ್ದೇಶಕರು. ಎಸ್.ಪ್ರೇಮಕುಮಾರ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪ್ರತಾಪ್ ಅವರ ಚಾಯಾಗ್ರಹಣವಿದೆ. ರಮೇಶ್‌ಬಾಬು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಚಂದ್ರು.ಎಸ್.ಎಲ್ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್, ನಿಕ್ಕಿ, ಶೊಭರಾಜ್, ಅಚ್ಯುತರಾವ್, ಚೈತ್ರಾರೈ, ಮಿತ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.