Untitled Document
Sign Up | Login    
Dynamic website and Portals
  
Home >> Movie Home >> Reviews >> ಸಚಿನ್... ತೆಂಡೂಲ್ಕರ್ ಅಲ್ಲ
Movie Review
ಸಚಿನ್... ತೆಂಡೂಲ್ಕರ್ ಅಲ್ಲ
ಅನುಕಂಪದ ಸಚಿನ್...
Rating :
Hero :
ಸ್ನೇಹಿತ್
Heroine :
-
Other Cast :
ಸುಹಾಸಿನಿ,ವೆಂಕಟೇಶ್ ಪ್ರಸಾದ್,ಸ್ನೇಹಿತ್
Director :
ಮೋಹನ್
Music Director :
ರಾಜೇಶ್ ರಾಮನಾಥ
Producer :
ಗಂಗಾಧರ್, ಶ್ರೇಯಸ್.
Release Date :
11-07-2014
ಚಿತ್ರರಂಗದಲ್ಲಿ ಹಲವಾರು ವರ್ಷಗಳಿದ ದುಡಿದು, ಬಹಳಷ್ಟು ಚಿತ್ರಗಳಿಗೆ ಕತೆ ಚಿತ್ರಕತೆ ಬರೆದ ಅನುಭವ ಹೊಂದಿರುವ ಮೋಹನ್ ’ಸಚಿನ್’ ಎನ್ನುವ ಚಿತ್ರವನ್ನು ಮಾಡಿರುವುದು ನಿಜಕ್ಕೂ ಶೋಚನೀಯ. ಏಕೆಂದರೆ ಸದಭಿರುಚಿಯ ಚಿತ್ರಗಳನ್ನು ಹಾಸ್ಯದ ಚಿತ್ರಗಳನ್ನು ಕಟ್ಟಿಕೊಡಬಲ್ಲ ಮೋಹನ್ ಎಮೋಷನ್ ಹಿಡಿಯುವ ಪ್ರಯತ್ನದಲ್ಲಿ ಎಡವಿದ್ದಾರೆ. ಆದರೂ ಒಳ್ಳೆಯ ಪ್ರಯತ್ನ.

ಸಿನಿಮಾದ ಕತೆಯ ವಿಷಯಕ್ಕೆ ಬರುವುದಾದರೆ ಸಚಿನ್ ಹೆಸರಿನ ಮೆಂಟಲಿ ಚಾಲೆಂಜ್ ಹುಡುಗ. ಅವನಿಗೆ ಕ್ರಿಕೆಟ್ ಎಂದರೆ ಎಲಿಲ್ಲದ ಪ್ರೀತಿ. ಎಷ್ಟೆಂದರೆ ಟಿವಿಯಲ್ಲಿ ಕ್ರಿಕೇಟ್ ನೋಡುವಾಗಲೂ ಪ್ಯಾಡ್, ಗೌಸ್ ಹಾಕಿಕೊಂಡು ಕೂರುವಷ್ಟು. ಹೀಗಿರುವ ಹುಡುಗನಿಗೆ ಇಬ್ಬರು ಅಕ್ಕಂದಿರು. ಮೊದಲನೆಯವಳು ಒಂದು ಕಂಪನಿಯ ಉಸ್ತುವಾರಿ ನೋಡಿಕೊಂಡು ಹೋಗುತ್ತಿರುವ ಹೆಣ್ಣು.(ಸುಹಾಸಿನಿ) ಮತ್ತೊಬ್ಬಳು ಕಾಲೇಜ್ ಜೀವನ ಮುಗಿಸಿ ಮದುವೆಯಾಗದೆ ಇರುವ ಹುಡುಗಿ. ಈ ಮೂವರ ಜೊತೆ ಅವರ ಅಮ್ಮ. ನೆಪ ಮಾತ್ರದ ಅಮ್ಮ. ಇಲ್ಲಿ ಸುಹಾಸಿನಿ ಮತ್ತು ಸಚಿನ್ ಮೂಲಕವೇ ಸಿನಿಮಾ ಓಡುತ್ತದೆ.

ಆತನ ಕ್ರಿಕೇಟ್ ಟ್ಯಾಲೆಂಟ್ ಗುರುತಿಸಿ ಅದರಲ್ಲೇ ಮುಂದುವರೆಸುವಂತೆ ಒಬ್ಬ ಶಿಕ್ಷಕಿ ಹೇಳುವುದರಿಂದ ಸುಹಾಸಿನಿ ಒಬ್ಬ ವ್ಯಕ್ತಿಯ ಅಶ್ರಯ ಕೇಳುತ್ತಾಳೆ. ಅದು ಯಾರೆಂದರೆ ಸುಹಾಸಿನಿಯ ಪಾತ್ರವನ್ನು ಮೆಚ್ಚುವ ಕ್ರಿಕೇಟ್ ಕೋಚರ್ ವೆಂಕಟೇಶ್ ಪ್ರಸಾದ್. ಅವರು ಆಕೆಗಾಗಿ ಮತ್ತು ಸಚಿನ್ ಅನ್ನು ಸಮಾಜವು ಒಪ್ಪುವ ಹಾಗೆ ಮಾಡುವುದಕ್ಕಾಗಿ ಚಾಲೆಂಜ್ ಆಗಿ ತೆಗೆದುಕೊಳ್ಳುತ್ತಾನೆ. ಹೀಗೆ ಕತೆ ಸಾಗುತ್ತದೆ. ಇಷ್ಟೆಲ್ಲದರ ಮಧ್ಯೆ ಸಚಿನ್‌ಗೆ ಬ್ರೈನ್ ಟ್ಯೂಮರ್ ಇರುವುದು ಗೊತ್ತಾಗುತ್ತದೆ. ಈ ಎಲ್ಲದರ ನಡುವೆ ಅವನಿಗೆ ಟೂರ್ನಿಮೆಂಟ್ ಆಡುವ ಆಸೆ. ಎಲ್ಲವೂ ಸಾಕಾರವಾಗುವುದೇ..? ಸಚಿನ್ ರನ್ ಹೊಡೆಯುತ್ತಾನಾ..? ಚಿತ್ರ ನೋಡಿ.

ಸಿನಿಮಾದಲ್ಲಿ ಮೋಹನ್ ಎಲ್ಲಾ ಕೆಲಸ ಮಾಡಲು ಹೋಗಿ ಯಾವುದನ್ನು ಸರಿಯಾಗಿ ಮಾಡಿಲ್ಲ ಎನ್ನಿಸುತ್ತದೆ. ಯಾವುದೇ ಪಾತ್ರಕ್ಕೂ ಸರಿಯಾದ ಕನ್‌ಕ್ಲೂಷನ್ ಕೊಡುವುದೇ ಇಲ್ಲ. ಸಮಾಜ ಸಚಿನ್ ಟ್ಯಾಲೆಂಟ್ ಒಪ್ಪಬೇಕು ಎನ್ನುವುದು ಒಂದು ಒಳ್ಳೇಯ ಉದ್ದೇಶವಾದರೆ ಅದೇ ಸಮಾಜ ಅತನ ಬಗ್ಗೆ ತೋರಿಸುವ ಕರುಣೆ. ಅವನ ಟ್ಯಾಲೆಂಟನ್ನು ಒಪ್ಪದಹಾಗೆ ಮಾಡಿದ್ದಾರೆ.

ಹಾಡುಗಳು ಕೆಟ್ಟದಾಗಿದೆ. ಅದೇಕೆ ಹಾಗೆ ಮಾಡಿಸಿದರೋ ಗೊತ್ತಿಲ್ಲ. ಅದನ್ನು ದೃಶೀಕರಿಸುವುದು ಕಹಿಯಾಗಿದೆ. ಸಂಕಲನ ಅಷ್ಟಕಷ್ಟೆ. ಮೋಹನ್ ಯಾರ ಕಡೆಯಿಂದಲೂ ಹೇಳಿಕೊಳ್ಳುವಂತಹ ಕೆಲಸವನ್ನು ತೆಗೆಸಿಲ್ಲ. ತಮ್ಮ ಸಂಭಾಷಣೆಯಲ್ಲೂ ಚಾಕ ಚಾಕ್ಯತೆ ಮೆರೆದಿಲ್ಲ.

ಅಭಿನಯದ ಮಟ್ಟಿಗೆ ಬಂದರೆ ಮೊಟ್ಟಮೊದಲ ಬಾರಿಗೆ ಅಭಿನಯಿಸಿರುವ ವೆಂಕಟೇಶ್ ಪ್ರಸಾದ್ ಪರವಾಗಿಲ್ಲ. ಅವರ ಅನುಭವಕ್ಕೆ ಚೆಂದ ಎನ್ನಿಸುತ್ತದೆ. ಸುಧಾರಾಣಿ ಮತ್ತು ಸುಹಾಸಿನಿಯವರ ಬಗ್ಗೆ ಮಾತಾಡುವಂತೆ ಇಲ್ಲ. ತಮ್ಮ ಪಾತ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಮಾಸ್ಟರ್ ಸ್ನೇಹಿತ್ ಹಿಂದಿನ ಚಿತ್ರದ ಹಾಗೆ ನಿರ್ವಸಿದ್ದಾರೆ. ಏನೂ ಬೆಳವಣಿಗೆ ಇಲ್ಲ.

ವರದಿ: ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited