Untitled Document
Sign Up | Login    
Dynamic website and Portals
  
Home >> Movie Home >> Reviews >> ಬಹುಪರಾಕ್
Movie Review
ಬಹುಪರಾಕ್
ಸೌಂಡ್ ಲೆಸ್ ಬಹುಪರಾಕ್...
Rating :
Hero :
ಶ್ರೀನಗರ ಕಿಟ್ಟಿ
Heroine :
ಮೇಘನಾರಾಜ್
Other Cast :
ಭಾವನಾರಾವ್, ಸುಂದರ್‌ರಾಜ್, ಪ್ರಮಿಳ ಜೋಷಿ, ಮಾನಸ, ಸುಕೃತಾವಾಗೈ, ರಕ್ಷಿತ್ ಶೆಟ್ಟಿ, ಪವನ್ ಮತ್ತು ಮುಂತಾದವರು
Director :
ಸುನಿ
Music Director :
ಭರತ್ ಬಿಜೆ
Producer :
ಸುರೇಶ್ ಭೈರಸಂದ್ರ, ಅಭಿ
Release Date :
25-07-2014
ಸಿಂಪಲಾಗ್ ಒಂದ್ ಲವ್ ಸ್ಟೋರಿ ನಂತರ ನಿರ್ದೇಶಕ ಸುನಿ ತುಂಬಾ ನಿರೀಕ್ಷೆಯ ನಿರ್ದೇಶಕರಾಗಿ ಬಿಟ್ಟರು, ಅವರ ಸಿನಿಮಾ ಬರುತ್ತದೆ ಎಂದರೆ ಪಡ್ಡೆ ಹುಡುಗರ ಮನಸ್ಸಿನಲ್ಲಿ ಏನೋ ಒಂಥರ ಖುಷಿ ಇರುತ್ತದೆ. ಆದರೆ ಅದೆಲ್ಲವನ್ನು ಸುನಿ ಬಹುಪರಾಕ್ ಟೈಲರ್‌ನಲ್ಲೆ ನಿರಾಸೆಗೊಳಿಸಿದ್ದರು. ಸಿನಿಮಾ ಇಂದು ಚಿತ್ರ ಮಂದಿರಕ್ಕೆ ಬಂದಿದೆ. ಆದರೂ ಆತನ ಮೇಲಿರುವ ಒಂದು ನಂಬಿಕೆ ಇಂದಾಗಿ ಸಿನಿಮಾ ನೋಡಲು ಯುವಕರ ದಂಡೇ ನೆರೆದ್ದರೂ ಆಶ್ಚರ್ಯವಿಲ್ಲ. ಆದರೆ ಅವರ ಆಸೆಗೆ ಸುನಿ ಸಣ್ಣ ಮಟ್ಟಿಗೆ ತಣ್ಣೀರು ಸಿಂಚಿಸಿದ್ದಾರೆ. ಆದರೆ ಕನ್ನಡದ ಇತ್ತೀಚಿನ ಯುವ ಪೀಳಿಗೆ ನಿರ್ದೇಶಕರಲ್ಲಿ ಪ್ರಯೋಗಾತ್ಮಕವಾಗಿ ಜನರಿಗೆ ಮನರಂಜನೆಯ ಜೊತೆ ಜೊತೆಗೆ ಯೋಚನೆಗೆ ಹಚ್ಚುವ ಕೆಲಸ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಒಂದೇ ಫಾರ್ಮಲ ನೋಡಿ ಬೇಸತ್ತಿರುವ ಮನಸ್ಸಿಗೆ ಸ್ವಲ್ಪ ವಿಭಿನ್ನ ಎನ್ನಿಸುವ ಚಿತ್ರ ಬಹುಪರಾಕ್.
ಬಹುಪರಾಕ್ ಯಾರಿಗೆ ಎನ್ನುವುದು ಇಲ್ಲಿಯ ಪ್ರಶ್ನೆ. ಸಿನಿಮಾದ ಕತೆ ಸುಮಾರಾಗಿದ್ದು ಅದನ್ನು ಚಿತ್ರಕತೆ ಮಾಡುವಲ್ಲಿ ಉಲ್ಟ ಪಲ್ಟ ಮಾಡಿಕೊಳ್ಳುತ್ತಾ ಹೋಗಿದ್ದಾರೆ.

ಕತೆಯ ವಿಷಯಕ್ಕೆ ಬಂದರೆ ಸಿನಿಮಾದ ರಹಸ್ಯ ತೆರೆದಿಡಬೇಕಾಗುತ್ತದೆ. ರನ್ನಿಂಗ್ ಟೈಂ ನಂತೆ ಹೇಳುವುದಾದರೆ.. ಸಿನಿಮಾದ ಮೊದಲಿನಲ್ಲಿ ಪ್ರಾರಂಭವಾಗುವ ಬಹುಪರಾಕ್ ಎನ್ನುವ ನಾಟಕದ ಮೂಲಕ ಸಿನಿಮಾದ ಮೂರು ಪಾತ್ರಗಳನ್ನು ಪರಿಚಯ ಮಾಡಿಕೊಡಲಾಗುತ್ತದೆ. ಮೊದಲನೆಯದು ಮನಸ್ಸ್-ಸ್ವಚ್ಚಂದ ಮನಸ್ಸಿನ ವ್ಯಕ್ತಿ. ಅವನ ಜೀವದಲ್ಲಿ ಬರುವ ಪ್ರೀತಿ ಮತ್ತು ಸ್ನೇಹ ಎನ್ನುವ ಅವಳಿ ಹುಡುಗಿಯರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದರೆ, ಎರಡನೆ ಪಾತ್ರ ಮಣಿ ಅಲಿಯಾಸ್ ಮನಿ ಯಾರೋ ಮಾಡಿದ ತಪ್ಪಿಗೆ ಜೈಲು ಸೇರಿ ಭೂಗತ ಜಗತ್ತಿನಲ್ಲಿ ದುಡ್ಡು ಮತ್ತು ಹೆಸರು ಮಾಡಲು ಹೊರಡುತ್ತಾನೆ. ಮತ್ತೊಬ್ಬ ಮೌನಿ ತನ್ನ ಪತ್ನಿ ಮಗಳೊಂದಿಗೆ ರಾಜಕೀಯದಲ್ಲಿ ಏನಾದರು ಸಾಧನೆ ಮಾಡಿ ಜನರಿಗೆ ಸಹಾಯ ಮಾಡಲು ಹೋಗಿ ತನ್ನತನ ಕಳೆದುಕೊಳ್ಳುತ್ತಾ ಕತೆಯು ಸಾಗುತ್ತದೆ. ಆದರೆ ಯಾವುದು ಮೊದಲು..? ಯಾವುದು ಅಂತ್ಯ..? ಯಾರಿಗೆ ಯಾರು ಹೇಗೆ ಸಂಬಂಧ..? ಎಲ್ಲರೂ ತಮ್ಮ ತಮ್ಮ ಗುರಿಯನ್ನು ಮುಟ್ಟುತ್ತಾರಾ..? ಯಾರಿಗೆ ಬಹುಪರಾಕ್.. ? ಯಾವ ಕತೆಗೆ ಹೇಗೆ ಮುಕ್ತಿಸಿಗುತ್ತದೇ..? ಎಲ್ಲವನ್ನು ಸಿನಿಮಾ ಮಂದಿರದಲ್ಲಿ ನೋಡಿ.

ಸಾಮಾನ್ಯ ನೋಡುಗರ ಮನಸ್ಸನ್ನು ಕೆಣಕುತ್ತದೆ. ತಲೆ ಕೆಡಿಸುತ್ತದೆ. ಕೌತುಕತೆ ಇರುವ ನೋಡುಗನಿಗೆ ಸಿನಿಮಾದಲ್ಲಿ ಆಗಾಗ ಬೇರೆ ಬೇರೆ ಕತೆಗಳು ಬಂದು ಹೋಗುವುದರಿಂದ ಒಂದು ಕ್ಷಣ ಬೇರೆ ಕಡೆ ಗಮನ ಹರಿಸಿದರೂ ಏನಾಯಿತು ಎಂದು ತಿಳಿಯುವುದಿಲ್ಲ. ಆದರೆ ಸಾಮಾನ್ಯ ಮೊದಲ ನೋಟದಲ್ಲೇ ಆತನಿಗ ಬೋರಿಂಗ್ ಎನ್ನಿಸಿ ಬಿಟ್ಟರೆ ಸಿನಿಮಾದಿಂದ ಎದ್ದು ಹೋಗುವುದಂತು ಕಂಡಿತ. ಯಾಕೆಂದರೆ ಸಿನಿಮಾದಲ್ಲಿ ತೋರಿಸಲಾಗಿರುವ ಮೂರು ಆಯಾಮಗಳು ನಿಧಾನಗತಿಯಲ್ಲಿ ಸಾಗಿರುವುದು ಮತ್ತು ಕ್ಯೂರಿಯಸ್ ಅನ್ನಿಸದ ಸಂಗತಿಗಳು. ಪಾತ್ರಗಳಲ್ಲಿ ನಾನಾ ಎಂಬುದು ನಾನಲ್ಲ.. ಎನ್ನುವ ಸಾರದೊಂದಿಗೆ ಕಳೆದು ಹೋಗಿರುವ ತನ್ನತನವನ್ನು ಹುಡುಕುತ್ತಾ ಸಾಗುವ ವಿಷಯ ಚೆನ್ನಗಿದೆ.

ನೋಡುಗರ ತಾಳ್ಮೆಯನ್ನು ಕೆಣಕಿದ್ದಾರೆ ಸುನಿ. ಅಂತಿಮತೆಯವರೆಗೂ ಚಿತ್ರವನ್ನು ನೋಡಿದರೆ ಸಿನಿಮಾವನ್ನು ಒಪ್ಪಿಕೊಳ್ಳುತ್ತಾನೆ. ಅಂದರೆ ಇದೊಂದು ಕತ್ತಿಯ ಹಲಗಿನ ಮೇಲೆ ನಡೆಯುವ ಮತ್ತು ನಡೆಸುವ ಪ್ರಯತ್ನ. ಸ್ವಲ್ಪ ಆಯ ತಪ್ಪಿದರೂ ನಿರ್ಮಾಪಕನಿಗೆ ಮತ್ತು ನಿರ್ದೇಶಕನಿಗೆ ಅಪಾಯ.

ಸಿನಿಮಾದಲ್ಲಿ ಹಾಡುಗಳು ಆ ಕ್ಷಣಕ್ಕೆ ಚೆಂದ ಎನ್ನಿಸುತ್ತದೆ. ಮನಸ್ಸಿನಲ್ಲಿ ಉಳಿಯುವುದಿಲ್ಲ. ಸುನಿ ಮತ್ತು ಹರಿ ಸಂಭಾಷಣೆ ಸ್ವಲ್ಪ ಮಟ್ಟಿಗೆ ಕೆಲಸ ಮಾಡುತ್ತದೆ. ಜನರನ್ನು ಕೂರಿಸುತ್ತದೆ. ಆದರೂ ಉಪಮೇಯಗಳು ಹೆಚ್ಚಾದವು. ಕನ್ನಡ ಸಾಹಿತಿಗಳ ಸಾಹಿತ್ಯವನ್ನು ಸಾಂದರ್ಭಿಕವಾಗಿ ಬಳಸಿರುವುದು ಒಳ್ಳೆಯ ಪ್ರಯತ್ನ. ಮನೋಹರ್ ಜೋಷಿ ಛಾಯಾಗ್ರಹಣ ಮತ್ತು ಸಚಿನ್ ಸಂಕಲನ ಕತೆಗೆ ಪೂರಕವಾಗಿದೆ. ಚಿತ್ರಕತೆಯಲ್ಲಿ ಸ್ವಲ್ಪ ಮಟ್ಟಿನ ವೇಗ ಹೆಚ್ಚಿಸಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು.

ಅಭಿನಯದಲ್ಲಿ ಶ್ರೀನಗರ ಕಿಟ್ಟಿ ಇನ್ನೂ ಒಳ್ಳೆಯ ಪ್ರಯತ್ನ ಮಾಡಬಹುದಿತ್ತು. ಪಾತ್ರಗಳಿಗೆ ನ್ಯಾಯ ಒದಗಿಸಿಲ್ಲ. ನಾಯಕಿ ಮೇಘನಾರಾಜ್ ಅಭಿನಯ ಓಕೆ. ಸಿನಿಮಾ ಪೂರಾ ಕಿಟ್ಟಿಯ ಮೇಲೆ ಓಡುವುದರಿಂದ ಮಿಕ್ಕ ಪಾತ್ರಗಳು ಗೌಣ. ಎಲ್ಲರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಒಟ್ಟಾರೆ ಸಿನಿಮಾವನ್ನು ಒಮ್ಮೆ ನೋಡಿ ಆನಂದಿಸಬಹುದು. ಆದರೆ ಕಡೆವರೆಗೂ ಕಾಯುವ ತಾಳ್ಮೆ ನಿಮ್ಮಲ್ಲಿರಲಿ.

ವರದಿ:ನಟರಾಜ್ ಎಸ್ ಭಟ್
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited