Untitled Document
Sign Up | Login    
Dynamic website and Portals
  
Home >> Movie Home >> Reviews >> ರೋಜ್
Movie Review
ರೋಜ್
ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Rating :
Hero :
ಅಜಯ್ ರಾವ್
Heroine :
ಶ್ರಾವ್ಯ
Other Cast :
ಸಾಧು ಕೋಕಿಲ, ಬುಲೇಟ್ ಪ್ರಕಾಶ್, ವಿಕ್ಟರಿ ವಾಸು, ಉಮೇಶ್, ವೆಂಕಟೇಶ್, ಸುಧೀರ್, ರೋಹನ್, ಚಂದ್ರಶೇಖರ್ ಮುಂತಾದವರು
Director :
ಸಹನ ಹೆಚ್ ಎಸ್
Music Director :
ಅನುಪ್ ಸೀಳಿನ್
Producer :
ತರುಣ್ ಶಿವಪ್ಪ
Release Date :
04-07-2014
ತುಂಬಾ ಹಿಂದೆ ಬರಬೇಕಾದ ಸಿನಿಮಾದ ಕತೆ. ಅಂದರೆ ಸುಮಾರು ವರ್ಷಗಳ ಹಿಂದೆ ಬಂದುಹೋಗಿರುವ ಸಿನಿಮಾದ ಕತೆಯ ಹೊಸ ಅವತರಣಿಕೆಯಂತೆ ಭಾಸವಾಗುತ್ತದೆ. ಆದರೆ ನಾಯಕ ನಾಯಕಿ ಬೇರೆ. ಈಗಲೂ ಇಷ್ಟು ದುಡ್ಡು ಕರ್ಚುಮಾಡಿ ಹಳೆಯ ರೀತಿಯ ಸಿನಿಮಾ ಮಾಡುವುದು ಶೋಚನೀಯ.

ಕತೆಯ ಹೇಳುವ ವಿಷಯ ಅಂತಹದೇನು ಇಲ್ಲ. ಒಂದು ಏರಿಯದಲ್ಲಿ ಆಲ್ರೆಡಿ ಪ್ರೀತಿ ಆಗಿರುವ ಜೋಡಿ. ನಾಯಕ(ಅಜಯ್) ಮತ್ತು ತನ್ನ ಸ್ನೇಹಿತರು ಸುಮ್ಮನೆ ಕಟ್ಟಿಕೊಂಡು ಓಡಾಡಿಕೊಂಡಿರುತ್ತಾನೆ. ಜೊತೆಗೆ ನಾಯಕಿಯ(ಶ್ರಾವ್ಯ) ಸಂಗಡ ಸುತ್ತಾಡಿಕೊಂಡಿರುತ್ತಾನೆ. ಆಗ ಸ್ನೇಹಿತನ ತಂಗಿಯ ಮೇಲೆ ನಡೆಯುವ ಒಂದು ಘಟನೆಯಿಂದ ಮತ್ತು ಸ್ನೇಹಿತರನ್ನು ಉಳಿಸುವ ನೆಪದಿಂದ ಜೈಲು ಸೇರುತ್ತಾನೆ. ಮತ್ತು ಅಲ್ಲಿದ್ದು ಒಬ್ಬನೆ ಕೊರಗುವುದಲ್ಲದೆ ತನ್ನ ಕುಟುಂಬಕ್ಕೆ, ಸ್ನೇಹಿತರ ಕುಟುಂಬಕ್ಕೆ, ಪ್ರೇಯಸಿಗೆ ಎಲ್ಲರಿಗೂ ಕೊರಗುವಂತೆ ಮಾಡಿ ಒಟ್ಟಾರೆ ದುಃಖತ ದೃಶ್ಯಗಳಿಂದ ತುಂಬಿಸಿ ಬಿಟ್ಟಿದ್ದಾರೆ. ಪ್ರತಿದಿನ ನಾಯಕಿ ಗುಲಾಬಿ ಇಟ್ಟುಕೊಂಡು ಪ್ರೇಮವನ್ನು ಕೇಳುತ್ತಾಳೆ. ಈ ಎಲ್ಲದರ ಮಧ್ಯೆ ಗಣೇಶೋತ್ಸವ, ೫ ಹಾಡುಗಳು, ಸಾಧು ಕೋಕಿಲರ ಸಹಿಸಲಾಗದ ಹಾಸ್ಯ, ಹೀಗೆ ಹಲವಾರು ಅಂಶಗಳ ನಡುವೆ ಸಿನಿಮಾಮುಗಿಯುತ್ತದೆ.

ಸಿನಿಮಾ ಬಗ್ಗೆ ಮತ್ತೇನಾದರು ಸಂಶಯವಿದೆಯಾ..? ಅವನು ಜೈಲಿನಿಂದ ಹೊರಗೆ ಬರುತ್ತಾನಾ..? ಇಬ್ಬರ ನಡುವೆ ಪ್ರೀತಿ ಪ್ರೇಮ ಏನಾಗುತ್ತದೆ..? ಅಪ್ಪ ಅಮ್ಮ ಇದಕ್ಕೆ ಒಪ್ಪುತ್ತಾರಾ..? ಎನ್ನುವ ಸಂಶಯ ನಿಮ್ಮಲಿದ್ದರೆ ಸಿನಿಮಾ ನೋಡಿ.

ಸಿನಿಮಾದಲ್ಲಿ ನೋಡಬೇಕಾದ ಅಂಶಗಳಿಗಿಂತ ನೋಡಬಾರದ ಅಂಶಗಳೇ ಹೆಚ್ಚು. ಸಿನಿಮಾದಲ್ಲಿ ಪಾಸಿಟೀವ್ ಅಂಶಗಳಿಗಿಂತ ನೆಗೆಟೀವ್ ಅಂಶಗಳೆ ಹೆಚ್ಚು. ಸಿನಿಮಾ ತುಂಬಾ ನಿಧಾನವಾಗಿ ಸಾಗುತ್ತದೆ. ದೃಶ್ಯಗಳು ಸುಮ್ಮನೆ ಬಂದು ಹೋಗುತ್ತದೆ. ಪ್ರೇಮಿಗಳ ಪ್ರೀತಿಯ ತೀರ್ವತೆಯನ್ನು ತೋರಿಸಿ ನಂತರ ಬೇರೆ ಮಾಡಿದ್ದಾರೆ ಚೆನ್ನಾಗಿರುತಿತ್ತು. ಮೊದಲಾರ್ಧ ಮೂರು ಹಾಡುಗಳುತುಂಬಿ ಒಂದಷ್ಟು ಹಾಡುಗಳು ಸೇರಿಕೊಂಡು ಸಾಗುತ್ತದೆ. ಮತ್ತರ್ಧ ಗೋಳಾಗಿ ಸಾಗುತ್ತದೆ.

ಸಿನಿಮಾದಲ್ಲಿ ಹಾಡುಗಳಾದರು ರುಚಿಸಬಹುದು ಎನ್ನುವಂತಿದ್ದರೆ ಅದೂ ಇಲ್ಲ. ಸುಮ್ಮನೆ ಬಂದು ಹೋಗುತ್ತದೆ. ಒಂದು ಮೆಲೋಡಿ ಸಾಂಗ್ ಕೇಳಬಹುದು. ಸಂಕಲನ ಮತ್ತು ಛಾಯಾಗ್ರಹಣ ತಮ್ಮ ಕೆಲಸ ಮಾಡಿದ್ದಾರೆ. ಅಭಿನಯದ ಮಟ್ಟಿಗೆ ಪರವಾಗಿಲ್ಲ. ಅಜಯ್ ರಾವ್ ತಮ್ಮ ಮಟ್ಟಿಗೆ ಮಾಡಿದ್ದಾರೆ. ಶ್ರಾವ್ಯ ಇನ್ನೂ ಪಳಗಬೇಕು. ಮಿಕ್ಕಂತೆ ಚಂದ್ರಶೇಖರ್, ಬುಲೇಟ್ ಪ್ರಕಾಶ್ ಚೆನ್ನಾಗಿ ಅಭಿನಯಿಸಿದ್ದಾರೆ.

ಸಿನಿಮಾ ನಿರ್ದೇಶಕರು ಒಳ್ಳೆಯ ಬಜೆಟ್ ಇರುವ ಚಿತ್ರ ಮಾಡಿದ್ದರೂ, ಒಳ್ಳೆಯ ಕತೆಯ ಮತ್ತು ಅದರ ನಿರೂಪಣೆಯಲ್ಲಿ ಕೆಲಸ ಮಾಡಬಹುದಾಗಿತ್ತು.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited