Untitled Document
Sign Up | Login    
Dynamic website and Portals
  
Home >> Movie Home >> ರಾಜಸ್ಥಾನದಲ್ಲಿ ‘ಭಜರಂಗಿ’ ಹಾಡು
ರಾಜಸ್ಥಾನದಲ್ಲಿ ‘ಭಜರಂಗಿ’ ಹಾಡು

ಫ಼ಿಲಂ ಎಂಟರ್‌ಟೈನರ್ ಲಾಂಛನದಲ್ಲಿ ನಟರಾಜ್‌ಗೌಡ ಹಾಗೂ ಮಂಜು(ಜಾಕ್) ಅವರು ನಿರ್ಮಿಸುತ್ತಿರುವ ‘ಭಜರಂಗಿ’ ಚಿತ್ರದ ಹಾಡೊಂದರ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆದಿದೆ. ಶಿವರಾಜಕುಮಾರ್, ಅಂದ್ರಿತಾ ರೇ ಹಾಗೂ ನರ್ತಕರ ಅಭಿನಯದಲ್ಲಿ ಮೂಡಿಬಂದ ಈ ಹಾಡಿಗೆ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ‘ಭಜರಂಗಿ’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರ ನವಂಬರ್(ಕನ್ನಡ ರಾಜ್ಯೋತ್ಸವ)ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಎ.ಹರ್ಷ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಜೈಆನಂದ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್‌ಜನ್ಯ ಸಂಗೀತ ನೀಡಿದ್ದಾರೆ. ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ.

ದೀಪು.ಎಸ್.ಕುಮಾರ್ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಅಂದ್ರಿತಾ ರೇ, ಊರ್ವಶಿ, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶೃತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited