Untitled Document
Sign Up | Login    
Dynamic website and Portals
  
Home >> Movie Home >> ಗೋವಾದಲ್ಲಿ ‘ಬಾಯ್ಸ್’
ಗೋವಾದಲ್ಲಿ ‘ಬಾಯ್ಸ್’

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್‌ಗೌಡ ಹಾಗೂ ಸ್ಯಾಂಡಿ ಅವರು ನಿರ್ಮಿಸುತ್ತಿರುವ ‘ಬಾಯ್ಸ್’ ಚಿತ್ರಕ್ಕೆ ಈ ತಿಂಗಳ 26ರಿಂದ ಗೋವಾದಲ್ಲಿ ಹತ್ತುದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ಅಂಡರ್‌ವಾಟರ್ ಫ಼ೈಟ್ ಹಾಗೂ ಒಂದು ಹಾಡನ್ನು ಗೋವಾದಲ್ಲಿ ಚಿತ್ರಿಸಿಕೊಳ್ಳಲಾಗುವುದು ಎಂದು ನಿರ್ದೇಶಕ ಶಂಕರ್‌ಗೌಡ ತಿಳಿಸಿದ್ದಾರೆ. ‘ಬಾಯ್ಸ್’ ಶಂಕರ್‌ಗೌಡ ನಿರ್ದೇಶನದ ಪ್ರಥಮ ಚಿತ್ರ.

ಮಾಲಾಶ್ರೀ ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್, ತಬಲನಾಣಿ, ಶ್ರೀನಿವಾಸಮೂರ್ತಿ, ವಿಜಯಸಿಂಹ, ಅಖಿಲಾಕಿಶೋರ್, ರಾಣಿಪಾಟೀಲ್, ಕಾಜಲ್, ಗ್ಯಾದಿ, ಡ್ಯಾನಿ, ಮಂಜುನಾಥ್ ಪವಾರ್, ಮನೋಜ್, ರಾಜೀವ್, ಕಿಮಾಯ್ ಮುಂತಾದವರಿದ್ದಾರೆ.

ರಾಜೇಶ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್‌ಜನ್ಯ ಸಂಗೀತ ನೀಡುತ್ತಿದ್ದಾರೆ. ಶ್ರೀ ಸಂಕಲನ, ಆನಂದ್ ಕಲಾನಿರ್ದೇಶನ, ಗಣೇಶ್, ತ್ರಿಭುವನ್ ನೃತ್ಯ ನಿರ್ದೇಶನ, ಥ್ರಿಲ್ಲರ್‌ಮಂಜು, ಪೀಟರ್ ಅವರ ಸಾಹಸ ನಿರ್ದೇಶನವಿರುವ ‘ಬಾಯ್ಸ್’ ಚಿತ್ರಕ್ಕೆ ಶಕ್ತಿ ಸಂಭಾಷಣೆ ಬರೆದಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited