Untitled Document
Sign Up | Login    
Dynamic website and Portals
  
Home >> Movie Home >> Reviews >> ಆರ್ಯನ್
Movie Review
ಆರ್ಯನ್
ಆರ್ಯನ್
Rating :
Hero :
ಶಿವರಾಜ್‌ ಕುಮಾರ್‌
Heroine :
ರಮ್ಯ
Other Cast :
ರಘು ಮುಖರ್ಜಿ, ಶರತ್‌ ಬಾಬು, ಅರ್ಚನಾ ಗುಪ್ತಾ ಮತ್ತಿತರರು
Director :
ಡಿ. ರಾಜೇಂದ್ರ ಬಾಬು
Music Director :
....
Producer :
ಧ್ರುವ ಮತ್ತು ಕಮರ್‌
Release Date :
01-08-2014
ಪ್ರಾಮಾಣಿಕ ಅಥ್ಲೀಟ್‌ ಕೋಚ್‌ ಒಬ್ಬ ತನ್ನ ಗರ್ಲ್ ಫ್ರೆಂಡ್‌ಗೆ ಕೋಚ್‌ ಆಗಿದ್ದರೂ ಬೇರೆಯವರಿಗೆ ಮುಜುಗರವಾಗಬಾರದು ಎಂಬ ಕಾರಾಣಕ್ಕೆ ತನ್ನ ಗರ್ಲ್ ಫ್ರೆಂಡ್‌ ನ್ನು ಕೂಡ ದೂರ ಇಡುವಂಥವ. ಆದರೆ ಆತನ ನಿಷ್ಠೆಯೇ ಆತನಿಗೆ ಮುಳುವಾಗುತ್ತದೆ. ಗೆಳತಿ ಶ್ವೇತಾ ಗೆದ್ದರೂ ಆಕೆ ಉದ್ದೀಪನ ಮದ್ದು ಸೇವಿಸಿದ್ದಾಳೆ, ಅದಕ್ಕೆ ಕೋಚ್‌ ಕಾರಣ ಅಂತ ಸಾಬೀತಾಗುತ್ತದೆ.

ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್‌ ಅವರ 'ಆರ್ಯನ್‌' ಚಿತ್ರ ಹೀಗೆ ಶುರುವಾಗುತ್ತೆ. ಶಿವರಾಜ್‌ ಕುಮಾರ್‌ ಅವರ ಕಮರ್ಷಿಯಲ್‌ ಸಿನಿಮಾಗಳ ಮಧ್ಯೆ ಅವರು ಕಾಣಿಸಿಕೊಂಡ ಫ್ಯಾಮಿಲಿ, ಲವ್‌, ದೇಶಭಕ್ತಿ, ಕ್ರೀಡಾಸಕ್ತಿಯ ಸಿನಿಮಾ ಇದು. ಅಲ್ಲೆಲ್ಲೋ ಸಿಂಗಾಪುರದಲ್ಲಿ ಸೈಕಲ್‌ ಸವಾರರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಾಡಿ ಬಂದರೂ ಮತ್ತೆ ತನ್ನ ಕಳೆದು ಹೋದ ಪ್ರೀತಿಯನ್ನು ನೆನೆದು ದುಃಖೀಸುವ ಕೋಚ್‌ನ ಕತೆ. ಇದನ್ನು ಕಮರ್ಷಿಯಲ್‌ ಸಿನಿಮಾಗಳ ರೀತಿ ಯೋಚಿಸುವಂತಿಲ್ಲ. ಶಿವರಾಜ್‌ ಕುಮಾರ್‌ ಅವರು 'ಆರ್ಯನ್‌' ಆಗಿ ತಣ್ಣಗೆ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಿನಿಮಾ.

ಹಲವು ಹಿಟ್‌ ಚಿತ್ರಗಳನ್ನು ಕೊಟ್ಟು, ಇತ್ತೀಚೆಗಷ್ಟೇ ನಿಧನರಾದ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರು ಹನ್ನೆರಡು ವರ್ಷಗಳ ಹಿಂದೆಯೇ ಸಿದ್ಧಪಡಿಸಿ, ಕನಸು ಕಂಡ ವಸ್ತು ಇದು. ಇದೀಗ ಶಿವರಾಜ್‌ ಕುಮಾರ್‌ ಅವರಿಂದ ಸಾಕಾರಗೊಂಡಿದೆ. ಅಥ್ಲೀಟ್‌ ಕೋಚ್‌ ಒಬ್ಬನ ನಿಷ್ಠೆಯ ಕತೆ ಇದಾದರೂ ಅದಕ್ಕಿಂತ ಹೆಚ್ಚಿಗೆ ಕೋಚ್‌ ಒಬ್ಬನ ವೈಯಕ್ತಿಕ ದುಃಖ, ದುಮ್ಮಾನಗಳ ಕತೆ. ತನ್ನ ಪ್ರೇಯಸಿಯನ್ನು ಅಥ್ಲೀಟ್‌ಚಾಂಪಿಯನ್‌ ಮಾಡುವ ಕತೆ.

ಚಿತ್ರದ ಮೊದಲಾರ್ಧ ಕೆಲವು ಕುತೂಹಲ ಕೆರಳಿಸುವ ದೃಶ್ಯಗಳು, ಬುಲೆಟ್‌ ಪ್ರಕಾಶ್‌ ಹಾಸ್ಯ, ಜೆಸ್ಸಿ ಗಿಫ್ಟ್ ಹಾಡು, ನಸುನಗುವ ರಮ್ಯ, ಓಡೋಡುತ್ತಾ ಇರುವ ಅರ್ಚನಾ, ಇಂಗ್ಲಿಷ್‌ ಪ್ರೀತಿಯ ಸುಮಿತ್ರಾ, ಖಡಕ್‌ ಆಫೀಸರ್‌ ರಘು ಇದ್ದಾರೆ. ಆದರೆ ಚಿತ್ರದ ನಿಜವಾದ ಕತೆ ಮತ್ತು ಶಾಕ್‌ ಆರಂಭವಾಗುವುದು ಎರಡನೇ ಭಾಗದಲ್ಲೇ. ಸಾಮಾನ್ಯವಾಗಿ ಶಿವಣ್ಣ ಸಿನಿಮಾಗಳ ಕ್ಲೈಮ್ಯಾಕ್ಸ್‌ ಎಂದರೆ ರೌಡಿಗಳನ್ನು ಮಟ್ಟ ಹಾಕುವ ರಣಾಂಗಣ. ಆದರೆ ಇಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಕ್ರೀಡಾಂಗಣದಲ್ಲಿ ನಾಯಕಿಯ ಸಾಧನೆಯ ಅನಾವರಣ ಆಗುತ್ತದೆ, ಪ್ರಾಮಾಣಿಕ ಕೋಚ್‌ನ ಶ್ರಮದ ಸಾರ್ಥಕತೆಯೂ ಕಾಣಿಸಿಕೊಳ್ಳುತ್ತದೆ.

ಯಾವುದೇ ಗಿಮಿಕ್‌ಗಳಿಲ್ಲದೇ ಬಾಬು ಅವರು ಮಾಡಿಟ್ಟುಕೊಂಡ ಪ್ರಾಮಾಣಿಕ ಕತೆ ಮತ್ತು ಚಿತ್ರಕತೆ 'ಆರ್ಯನ್‌'. ಇಡೀ ಚಿತ್ರ ಖುಷಿ ಕೊಡುವುದು ಶಿವರಾಜ್‌ಕುಮಾರ್‌ ಅವರ ಗಂಭೀರ ಅಭಿನಯಕ್ಕೆ. ಶಿವರಾಜ್‌ ಕುಮಾರ್‌ ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ರಮ್ಯ ಅಭಿನಯವೂ ಚೆನ್ನಾಗಿ ಮೂಡಿಬಂದಿದೆ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited