Untitled Document
Sign Up | Login    
Dynamic website and Portals
  
Home >> Movie Home >> ಈ ವಾರ ತೆರೆಗೆ
ಈ ವಾರ ತೆರೆಗೆ
ಈ ವಾರ ತೆರೆಗೆ

ಧೂದ್‌ಪೇಡ ದಿಗಂತ ಅಭಿನಯದ ಬಹುನಿರೀಕ್ಷಿತ ಬರ್ಫಿ ಇದೇ ಶುಕ್ರವಾರ ರಾಜ್ಯಾದ್ಯಂತ 100 ಚಿತ್ರ ಮಂದಿರಗಳಲ್ಲಿ ತೆರೆಕಾಣುತ್ತಿದೆ.

ಪಂಜಾಬಿ ಹುಡುಗಿ ಕನ್ನಡದ ಹುಡುಗನ ಸುಂದರ ಪ್ರೇಮ ಕಥೆಯುಳ್ಳ ಚಿತ್ರವನ್ನು ನಿರ್ದೇಶಕ ಶೇಖರ್ ನಿರ್ಮಿಸಿದ್ದಾರೆ. ಮುಖ್ಯವಾಗಿ ಕಾಲೇಜ್ ಹುಡುಗರಿಗೆ ಇಷ್ಟವಾಗಬಹುದಾದ ಕಥೆ ಇದಾಗಿದ್ದರೂ ಎಲ್ಲಾ ವರ್ಗದವರೂ ನೋಡಿ ಖುಷಿ ಪಡಬಹುದಾದ ಚಿತ್ರವಾಗಿದೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರಕ್ಕೆ ಗುಂಡ್ಲಪೇಟೆ ಸುರೇಶ್ ಛಾಯಗ್ರಹಣ, ಅರ್ಜುನ್ ಜನ್ಯ ಸಂಗೀತ, ಬಿ.ಎ.ಮಧು ಸಂಭಾಷಣೆ, ಜಯಂತ್ ಕಾಯ್ಕಿಣಿ, ಕವಿರಾಜ್ ಬಾಹುಬಲಿ, ಹೃದಯಶಿವ ಸಾಹಿತ್ಯವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿ ವರ್ಮ ಸಾಹಸ ಎಸ್ ಬಾಹುಬಲಿ ಸಹಕಾರ ನಿರ್ದೇಶನ, ಹರ್ಷ ಕಂಬಿರಾಜ್ ನೃತ್ಯ ನಿರ್ದೇಶನವಿದೆ.

ತಾರಾಗಣದಲ್ಲಿ ನಟ ದಿಗಂತ್, ಭಾಮಾ, ಬೇಬಿ ಅದಿತಿ, ಸುಧಾ ಬೆಳವಾಡಿ , ಜೈಜಗದೀಶ್, ಹರೀಶ್ ರಾಜ್, ದಿಲೀಪ್ ರಾಜ್, ಸುಚೀಂದ್ರಪ್ರಸಾದ್, ಪವಿತ್ರಾ ಲೋಕೇಶ್, ಸಂಯುಕ್ತ ಬೆಳವಾಡಿ, ಶಂಕರ್‌ಭಟ್ಟ, ಇಂದ್ರಜಿತ್ ಲಂಕೇಶ್ ಅಭಿನಯಿಸಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited