Untitled Document
Sign Up | Login    
Dynamic website and Portals
  
Home >> Movie Home >> ‘ಲೂಸುಗಳು’ ಚಿತ್ರಕ್ಕೆ ಯು/ಎ
‘ಲೂಸುಗಳು’ ಚಿತ್ರಕ್ಕೆ ಯು/ಎ
‘ಲೂಸುಗಳು’ ಚಿತ್ರಕ್ಕೆ ಯು/ಎ

ಶ್ರದ್ದೆ, ಹೊಸ ಪ್ರಯತ್ನದೊಂದಿಗೆ ಮುನ್ನುಗುತ್ತಿರುವ ನವ ನಿರ್ದೇಶಕ ಅರುಣ್ ಅವರ ನೂತನ ಐಡಿಯಾ ಗಳೊಂದಿಗೆ ಇರುವ ‘ಲೂಸುಗಳು’ ಚಿತ್ರ ಕಳೆದ ವಾರ ಸೆನ್ಸಾರ್ ಮಂಡಳಿ ಮುಂದೆ ಬಂದು ‘ಯು/ಎ’ ಅರ್ಹತಾ ಪಾತ್ರವನ್ನು ಸ್ವೀಕರಿಸಿದೆ.

ಸಣ್ಣ ಪುಟ್ಟ ವಿಚಾರಗಳಿಗೆ ಯು/ಎ ಪಾತ್ರವನ್ನು ಸ್ವೀಕರಿಸಿರುವ ತಂಡ ಇದೀಗ ಚಿತ್ರದ ಪ್ರಾಚಾರದ ಬಗ್ಗೆ ಮತ್ತಷ್ಟು ಹೊಸ ಆಲೋಚನೆಗಳನ್ನು ಮುಂದೆ ತರಲಿದೆ . ಫೇಸ್ ಬುಕ್ ಹಾಗೂ ಯು ಟ್ಯೂಬು ಸಾಮಾಜಿಕ ತಾಣಗಳಿಗಾಗೆ ಅರುಣ್ ಅವರು ‘ಲೂಸುಗಳು’ ಚಿತ್ರದ ಐದು ನಿಮಿಷದ ಟ್ರೈಲರ್ ಜನಪ್ರಿಯತೆ ಪಡೆದುಕೊಂಡಿದೆ.

ಬಿಡುಗಡೆಗೂ ಮುಂಚೆಯೇ ತಮಿಳು ಭಾಷೆಗೆ ರೀಮೇಕ್ ಹಕ್ಕುಗಳಿಗೆ ಕೇಳಲಾಗಿದೆ. ಧ್ವನಿ ಸುರಳಿ, ‘ಡಿಜಿಟಲ್ ಆಡಿಯೋ’ ಬಿಡುಗಡೆ ವ್ಯವಸ್ಥೆಯನ್ನು ನಿರ್ದೇಶಕ ಅರುಣ ಮೊದಲ ಪ್ರಯತ್ನದಲ್ಲೇ ಮಾಡಿದ್ದಾರೆ. 18 ಜಾಹೀರಾತು ಕಂಪನಿಗಳ ಜೊತೆ ಹಾಡುಗಳು ಹಾಗೂ ಸಿನೆಮಾದ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ ನಿರ್ದೇಶಕ ಅರುಣ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿ. ಐದು ಹಾಡುಗಳನ್ನು ನಿರ್ದೇಶಕ ಅನಿಲ್ ಕುಮಾರ್, ನಂದಿನಿ ಹೊಟೇಲ್ ಉದ್ಯೋಗಿ ರಾಘವೇಂದ್ರ, ಯೋಗಿ ದೇವಗಂಗ ಹಾಗೂ ಅರುಣ್ ಅವರುಗಳು ‘ಲೂಸುಗಳು’ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.
ಮುಂಬಯಿಯಲ್ಲಿ ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ ಅವರು ಆಡಿಯೋ ಮಾಸ್ಟೆರಿಂಗ್ ಮಾಡಿದ್ದಾರೆ. ಕೌಂಟೀ ಫಿಲ್ಮ್ ಮಕೇರ್ಸ್ ನಿರ್ಮಾಪಕ ಸಯ್ಯದ್ ಹುಸ್ಸೈನ್ ಹಾಗೂ ಕಾರ್ಯಕಾರಿ ನಿರ್ಮಾಪಕ ಬಸವರಾಜ್ ಮಂಚಯ್ಯ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುವುದಾಗಿ ಅಪಾರವಾಗಿ ನಂಬಿದ್ದಾರೆ.

ಇದೆ ಮೊದಲಬಾರಿಗೆ ಹೆಸರಾಂತ ನಟಿ ರೇಖ ವೇದವ್ಯಾಸ್ ಅವರು ಐಟೆಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರೇಖ ಅವರ ಜೋಡಿ ಯಾಗಿ ಶ್ರೀಮುರಳಿ ಇದ್ದಾರೆ. ಶ್ರೀಕಿ ಜೊತೆ ಶ್ರಾವ್ಯ, ಅಕುಲ್ ಬಾಲಾಜಿ ಜೋಡಿಯಾಗಿ ಐಶ್ವರ್ಯ ನಾಗ್ ಅಭಿನಯಿಸಿದ್ದಾರೆ. ಶೋಬಿತ ರಾಯ್, ರವಿ ಚೇತನ್, ಪದ್ಮಜ ರಾವು, ಮಿಮಿಕ್ರಿ ದಯಾನಂದ, ರವಿ, ಹರೀಶ್, ವಿಜಯಸಾರತಿ ಅವರು ತಾರಾಗಣದಲ್ಲಿದ್ದಾರೆ.

ವಾಣಿ ಹರಿಕೃಷ್ಣ ಅವರಿಗೂ ಇದು ಚೊಚ್ಚಲ ಸಂಗೀತ ನಿರ್ದೇಶನ. ಚಿದಾನಂದ ಎಚ್. ಕೆ. ಅವರ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವು ಸಂಕಲನ ‘ಲೂಸುಗಳು’ ಚಿತ್ರಕ್ಕೆ ಮಾಡಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited