Untitled Document
Sign Up | Login    
Dynamic website and Portals
  
Home >> Movie Home >> ‘ಆಟೋ ರಾಜ’ ಚಿತ್ರಕ್ಕೆ ಯು/ಎ ಪತ್ರ
‘ಆಟೋ ರಾಜ’ ಚಿತ್ರಕ್ಕೆ ಯು/ಎ ಪತ್ರ
‘ಆಟೋ ರಾಜ’ ಚಿತ್ರಕ್ಕೆ ಯು/ಎ ಪತ್ರ
ಆಟೋ ರಾಜ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಆಟೋ ಓಡಿಸೋದು ಸುಲಭ. ‘ಆಟೋ ರಾಜ’ ಸಿನೆಮಾ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮಾಡಿದ ನಂತರ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಒಪ್ಪಿಗೆ ಪಡೆಯುವುದು ಮತ್ತಷ್ಟು ಸುಲಭದ ಮಾತಲ್ಲ ? ಅದು ಹಾಗೆ ಆಗಿದೆ! ಹಲವಾರು ಪರೀಕ್ಷೆಗಳನ್ನು ಎದುರಿಸಿ ಪರಿಶ್ರಮವನ್ನು ಹಗಲು ರಾತ್ರಿ ಅನ್ನದೆ ಹಾಕಿ ಕೊನೆಗೆ ‘ಸೆನ್ಸಾರ್’ ಮಂಡಳಿಯಿಂದ ‘ಯು/ಎ’ ಅರ್ಹತಾ ಪತ್ರವ್ನನು ಚಿತ್ರವು ಕಳೆದ ವಾರ ಪಡೆದುಕೊಂಡಿದೆ.

ಚಿತ್ರದ ಶೀರ್ಷಿಕೆಯಿಂದ ಸಾಮಾಜಿಕ ಕಳಕಳಿಯನ್ನು ಮೆರೆದ ‘ವಿ ಸ್ಯಾನ್ ಸಿಟಿ’- ಬೈಲುಕುಪ್ಪೆಯಲ್ಲಿ ಶ್ರೀಮತಿ ಮಂಜುಳ ಎಂಬುವರಿಗೆ ನಾಯಕನ ಹೆಸರು ಸೂಚಿಸಿದ್ದಕ್ಕೆ ಲಕ್ಕಿ ಡ್ರಾದಲ್ಲಿ ಖಾಲಿ ನಿವೇಶನವನ್ನು ಬಹುಮಾನವಾಗಿ ಕೊಟ್ಟದ್ದು, ಆಟೋ ಚಾಲಕರ ಸಮ್ಮುಖದಲ್ಲೇ ಚಿತ್ರದ ಧ್ವನಿ ಸುರುಳಿ ಬಿಡುಗಡೆಮಾಡಿ ‘ಆಟೋ ರಾಜ’ ಚಿತ್ರದ ಪೋಸ್ಟರ್ ಅನ್ನು ಶ್ರೀ ರವಿಶಂಕರ್ ಗುರೂಜಿ ಅವರು ಸಮಾರಭವೊಂದರಲ್ಲಿ ಬಿಡುಗಡೆ ಮಾಡಿರುವುದು ತಿಳಿದೇ ಇದೆ.

ನಿರ್ದೇಶಕ ಉದಯ ಪ್ರಕಾಶ್ 62 ದಿವಸಗಳ ಚಿತ್ರೀಕರಣವನ್ನು ‘ಆಟೋ ರಾಜ’ ಚಿತ್ರಕ್ಕಾಗಿ ಬೆಂಗಳೂರು, ಬಾದಾಮಿ, ಚಿಕ್ಕಮಗಳೂರು ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾಡಿರುವರು. ಇಂದೊಂದು ‘ಆಟೋ ರಾಜ’ ಎಂದೇ ಜನಪ್ರಿಯ ಆಗಿರುವ ಶಂಕರ್ ನಾಗ್ ಅವರ ಸ್ಮರಣಾರ್ಥ ಎಂದು ನಿರ್ದೇಶಕರು ತಿಳಿಸುತ್ತಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited