Untitled Document
Sign Up | Login    
Dynamic website and Portals
  
Home >> Movie Home >> ಮದರಂಗಿ ಮೇ.10 ರಂದು ತೆರೆಗೆ
ಮದರಂಗಿ ಮೇ.10 ರಂದು ತೆರೆಗೆ
ಮದರಂಗಿ ಮೇ.10 ರಂದು ತೆರೆಗೆ

ಈ ವಾರ ಮಾತೊಬ್ಬ ನವ ಯುವಕನ ಜನನ ಬೆಳ್ಳಿ ಪರದೆಯ ಮೇಲೆ. ಜನಪ್ರಿಯ ನಟರಾದ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಅವರಿಂದ ಶಬಾಷ್ ಎನಿಸಿಕೊಂಡಿರುವ ಈ ಎತ್ತರದ, ಒಳ್ಳೆ ಮೈಕಟ್ಟಿನ ಹುಡುಗನನ್ನು ನೀವು ಈಗಾಗಲೇ ಪುಟ್ಟ ಪರದೆಯ ಮೇಲೆ ನೋಡಿರುತ್ತಿರಿ. ಈಗ ಬನ್ನಿ ದೊಡ್ಡ ಪರದೆಯ ಮೇಲೆ ‘ಮದರಂಗಿ’ ಚಿತ್ರ ನೋಡಿ ಆನಂದಿಸಿ.

‘ಕೃಷ್ಣ ರುಕ್ಮಿಣಿ’ ಧಾರವಾಹಿಯ ಕೃಷ್ಣ ಅದೇ ಹೆಸರಿನಲ್ಲಿ ರಜತ ಪರದೆಯ ಮೇಲೆ ಬರುತ್ತಿದ್ದಾರೆ. ಯು ಟ್ಯೂಬು, ಫೇಸ್ ಬುಕ್ ಎಂಬ ಅಂತರ್ಜಾಲ ತಾಣಗಳಲ್ಲಿ ‘ಮದರಂಗಿ’ ಹಾಡುಗಳು ಹಾಗೂ ತುಣುಕುಗಳಿಗೆ ಜನಪ್ರಿಯತೆ ಸಿಕ್ಕಿದೆ. ಈ ವಾರ ಪ್ರೇಕ್ಷಕ ಮಹಾಪ್ರಭುವಿನ ಶ್ರೀರಕ್ಷೆ ಪಡೆಯಲು ‘ಮದರಂಗಿ’ ಎಂಬ ಮನರಂಜನಾತ್ಮಕ ಚಿತ್ರ ಆಗಮಿಸುತ್ತಿದೆ.

ನಿವೃತ್ತ ಪೋಲೀಸು ಅಧಿಕಾರಿ ನಿರ್ಮಾಪಕ ನಾಗಪ್ಪ ಅವರ ಪುತ್ರ ಕೃಷ್ಣ ನಾಯಕನಾಗಿರುವ ‘ಮದರಂಗಿ’ ಚಿತ್ರ ಮೊದಲ ಪ್ರಯತ್ನ. ಕೃಷ್ಣ ಟಾಕಿಸ್ ಬ್ಯಾನರ್ ಅಡಿಯಲ್ಲಿ ಈ ‘ಮದರಂಗಿ’ ತಯಾರಾಗಿದೆ.

ಈ ಹಿಂದೆ ‘ಆಟೋ’ ಚಿತ್ರ ನಿರ್ದೇಶಿಸಿ ಒಂದು ವರ್ಷದಿಂದ ‘ಮದರಂಗಿ’ ಚಿತ್ರಕ್ಕೆ ಕಥೆ ಮಾಡಿಕೊಂಡು ನಿರ್ದೇಶನವನ್ನು ಮಲ್ಲಿಕಾರ್ಜುನ್ ನಿರ್ವಹಿಸಿದ್ದಾರೆ. ಐದು ಹಾಡು ಹಾಗೂ ಐದು ಸಾಹಸ ಸನ್ನಿವೇಶಗಳಿಗೆ ಅವಕಾಶ ಚಿತ್ರದಲ್ಲಿ ಕಲ್ಪಿಸಿದ್ದಾರೆ. ಚಿತ್ರದ ಕಥಾ ನಾಯಕಿ ಸುಷ್ಮಾ ರಾಜ್ ಈ ಸಿನೆಮಾದಲ್ಲಿ ಆಗರ್ಭ ಶ್ರೀಮಂತ ಉದ್ಯೋಗಿಯ ಮಗಳಾಗಿ ಅಭಿನಯಿಸುತ್ತಿದ್ದಾರೆ.

ನಾಯಕ ಚಿತ್ರರಂಗವನ್ನು ಹತ್ತಿರದಿಂದ ತಿಳಿದುಕೊಂಡೆ ಕಥಾನಾಯಕನಾಗಿ ಅಭಿನಯಿಸುತಿದ್ದಾರೆ. ಸಹಾಯಕ ನಿರ್ದೇಶಕನ ಅನುಭವ, ಚಿತ್ರಕತೆಯ ಅರಿವು ಹಾಗೂ ಕೆಲವು ಸಿನೆಮಾಗಳಲ್ಲಿ ಪಾತ್ರ ಮಾಡಿದ ಅನುಭವ ಕೃಷ್ಣ ಅವರಿಗಿದೆ.

ಅನೂಪ್ ಸೀಳಿನ್ ಅವರ ಸಂಗೀತ ಈಗಾಗಲೇ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಡಾರ್ಲಿಂಗ್ ಡಾರ್ಲಿಂಗ್ ಹಾಡು...ಕೇಳುಗರ ಮಾನಸನ್ನು ಅಪಾರವಾಗಿ ಆಕರ್ಷಿದೆ. ಅರಸು ಅಂತಾರೆ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಗಿರೀಶ್ ಈ ಚಿತ್ರದ ಮುಖಾಂತರ ಸ್ವತಂತ್ರ ಛಾಯಾಗ್ರಾಹಕರಾಗಿ ಕಾಲಿಡುತ್ತಿದ್ದಾರೆ.

ಕಾವ್ಯ ಶೆಟ್ಟಿ, ಸಾಧು ಕೋಕಿಲ, ಅವಿನಾಶ್, ಶ್ರೀ ನಿವಾಸ್ ಪ್ರಭು, ಕುರಿ ಪ್ರತಾಪ್ ಸಹ ತಾರಾಗಣದಲ್ಲಿ ಇದ್ದರೆ. ಶ್ರೀ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ ಮುರಳಿ ಅವರ ನೃತ್ಯ ನಿರ್ದೇಶನ ಚಿತ್ರಕ್ಕೆ ಒದಗಿಸಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited