Untitled Document
Sign Up | Login    
Dynamic website and Portals
  
Home >> Movie Home >> ‘ಶ್ರೀ ಅಮರೇಶ್ವರ ಮಹಾತ್ಮೆ ಈ ವಾರ ತೆರೆಗೆ
‘ಶ್ರೀ ಅಮರೇಶ್ವರ ಮಹಾತ್ಮೆ ಈ ವಾರ ತೆರೆಗೆ
‘ಶ್ರೀ ಅಮರೇಶ್ವರ ಮಹಾತ್ಮೆ ಈ ವಾರ ತೆರೆಗೆ

ಕನ್ನಡ ಸಿನೆಮಾ ಪ್ರೇಕ್ಷಕನಿಗೆ ಈ ವಾರ ‘ಶ್ರೀ ಅಮರೇಶ್ವರ ಮಹಾತ್ಮೆ’ ಎಂಬ ಪೌರಾಣಿಕ ಚಿತ್ರದ ಸೊಬಗು ತೆರೆಯ ಮೇಲೆ ನೋಡೊ ಭಾಗ್ಯ. ಬಹು ಕಾಲದ ನಂತರ ಪೌರಾಣಿಕ ಚಿತ್ರವೊಂದನ್ನು ಅತ್ಯಂತ ಭಕ್ತಿ, ಶ್ರದ್ದೆ ಇಂದ ನಿರ್ಮಾಪಕರಾದ ಬಸವರಾಜ್ ಹಿರೇಮಟ ಅವರು ತಯಾರಿಸಿದ್ದಾರೆ. ಪೌರಾಣಿಕ ಚಿತ್ರದಲ್ಲೂ ಅವರು ಸಂದೇಶವನ್ನು ತುಂಬಿಸಿಕೊಂಡು ಇಂದಿನ ಕಾಲಕ್ಕೂ ಸರಿದೂಗುವಂತೆ ಈ ಚಿತ್ರವನ್ನೂ ಮಾಡಿದ್ದಾರೆ.

ನಿರ್ದೇಶಕ ಅರವಿಂದ್ ಮುಲಗಂದ ಅವರು ಹಿರಿಯ ನಿರ್ದೇಶಕರದ ರೇಣುಕ ಶರ್ಮ ಹಾಗೂ ಶಂಕರ ಲಿಂಗ ಸುಗ್ನಲ್ಲಿ ಅವರ ಜೊತೆ ಸಹಾಯಕರಾಗಿ ದುಡಿದು ಈ ಹಿಂದೆ ‘ಮಹಾಮಹಿಮೆ ಲಡ್ಡು ಮುತ್ಯ’ ಎಂಬ ಚಿತ್ರವನ್ನೂ ಸ್ವತಂತ್ರವಾಗಿ ನಿರ್ದೇಶನ ಮಾಡಿರುವರು. 40 ರಷ್ಟು ಚಿತ್ರದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಅವರು ಅಳವಡಿಸಿಕೊಂಡಿದ್ದಾರೆ. ಬಾಲ ಅಮರೇಶ್ವರನಾಗಿ ಮಾಸ್ಟರ್ ಶ್ರೀನಿವಾಸ್ ಅಭಿನಯಿಸಿದರೆ ಪ್ರೌಢ ಅಮರೇಶ್ವರನಾಗಿ ಹಿರಿಯ ನಟ ಅಭಿಜಿತ್ ಅಭಿನಯಿಸಿದ್ದಾರೆ. ಅಭಿಜಿತ್ ಮೂರು ವಿವಿಧ ವೇಷ ಭೂಷಣಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ದಾಕ್ಷಾಯಿಣಿ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಿಸಿರುವ ಚಿತ್ರ ರಾಯಚೂರು, ಲಿಂಗಸುಗುರ್ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.

ಅಭಿಜಿತ್ ಗೆ ನಾಯಕಿಯಾಗಿ ಉಜ್ವಲ ಅಭಿನಯಿಸಿದ್ದಾರೆ. ಚಿತ್ರಕ್ಕೆ ದೊಡ್ಡಬಸಪ್ಪ ಅವರು ಕಾರ್ಯಕಾರಿ ನಿರ್ಮಾಪಕರು. ಮಹಾಬಲೇಶ್ವರ ಅವರ ಛಾಯಾಗ್ರಹಣ, ಎಂ ಎಸ್ ಮಾರುತಿ ಅವರ ಸಂಗೀತ, ಮಹೇಶ್ ಮನ್ನಪುರ ಅವರ ಸಂಭಾಷಣೆ, ಶಿವು ಬೆರದಾಗಿ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಅವರ ಸಾಹಸ, ರಮೇಶ್ ದೇಸಾಯಿ ಅವರ ಕಲಾ ನಿರ್ದೇಶನ, ಅಲಗುರು ವೆಂಕಟೇಶ್ ಹಾಗೂ ಪ್ರಭು ಗಂಜಿಯಾಲ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಮಾಸ್ಟೆರ್ ಶ್ರೀನಿವಾಸ್ , ರಾಕೇಶ್, ಬ್ಯಾಂಕ್ ಜನಾರ್ಧನ್, ಸುನಂದ, ಮಾಲತಿ, ಶಂಕರ್ ಪಾಟಿಲ್ ಹಾಗೂ ಇತರರು ಪೋಷಕ ಪಾತ್ರಗಳನ್ನು ಮಾಡಿದ್ದಾರೆ.

Other News
Video Clippings
Reviews
 
  ಆರ್ಯನ್   ಸೌಂಡ್ ಲೆಸ್ ಬಹುಪರಾಕ್...   ಅನುಕಂಪದ ಸಚಿನ್...   ಕಣ್ಣೀರಿನ.. ಮುಳ್ಳಿನ ಕತೆ ರೋಜ್...
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited