Untitled Document
Sign Up | Login    
Dynamic website and Portals
  
February 20, 2015

ಮೋದಿ ಸೂಟ್ ಗೆ ಭಾರಿ ಬೇಡಿಕೆ: 2.9 ಕೋಟಿ ತಲುಪಿದ ಬಿಡ್ಡಿಂಗ್

ಹರಾಜಿಗಿಡಲಾಗಿರುವ ಮೋದಿ ಸೂಟ್ ಹರಾಜಿಗಿಡಲಾಗಿರುವ ಮೋದಿ ಸೂಟ್

ನವದೆಹಲಿ : ಹರಾಜಿಗೆ ಹಾಕಲಾಗಿರುವ ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸೂಟ್‌ ನ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹರಾಜು ಪ್ರಕ್ರಿಯೆಯ 2ನೇ ದಿನವಾದ ಫೆ.20ರಂದು ಸೂಟ್ ನ ಬೆಲೆ ಬರೊಬ್ಬರಿ 2.9 ಕೋಟಿಯಷ್ಟಾಗಿದೆ.

ಫೆ.20ರಂದು ಬೆಳಿಗ್ಗೆ ಸೂಟ್ ನ ಬೆಲೆ 1.25 ಯಷ್ಟಿತ್ತು. ಗಂಟೆಗಳು ಕಳೆಯುತ್ತಿದ್ದಂತೆ ಸೂಟ್ ನ ಬೆಲೆಯೂ ಏರಿಕೆಯಾಗತೊಡಗಿದ್ದು, ಮಧ್ಯಾಹ್ನದ ವೇಳೆಗೆ 2.9 ಕೋಟಿ ಮೌಲ್ಯ ಪಡೆದಿದೆ. ಹರಾಜು ಪ್ರಕ್ರಿಯೆ ಚುರುಕುಗೊಂಡಿದ್ದು ಸೂಟ್ ನ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಗುಜರಾತ್ ನ ಉದ್ಯಮಿ ರಾಜೇಶ್ ಜೈನ್ ಎಂಬುವವರು ಮೋದಿ ಸೂಟ್ ಗೆ 2.9 ರೂಪಾಯಿಗಳನ್ನು ಬಿಡ್ ಮಾಡಿದ್ದಾರೆ. ಸದ್ಯಕ್ಕೆ ಈ ಸೂಟ್ ಗೆ ಬಿಡ್ ಮಾಡಲಾಗಿರುವ ಅತಿ ಹೆಚ್ಚು ಮೌಲ್ಯ ಇದಾಗಿದೆ. 11 ಲಕ್ಷ ಬಿಡ್ ನಿಂದ ಪ್ರಾರಂಭವಾಗಿದ್ದ ಮೋದಿ ಸೂಟ್‌ ಈಗ ಎರಡು ಕೋಟಿ ರೂಪಾಯಿ ದಾಟಿದ್ದು ಸಾರ್ವಜನಿಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿದೆ. ಹರಾಜು ಪ್ರಕ್ರಿಯೆ ಸಂಜೆ ವೇಳೆಗೆ ಅಂತ್ಯಗೊಳ್ಳಲಿದ್ದು ಸೂಟ್ ನ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಆಯೋಜಿಸಿರುವ ಈ ಹರಾಜು ಮೇಳ ಫೆ.18ರಿಂದ 20ರ ಸಂಜೆ 5ಗಂಟೆ ವರೆಗೆ ನಡೆಯಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Event

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ:  ಸ್ವಚ್ಚತಾ ಅಭಿಯಾನ
  • ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ: ಸ್ವಚ್ಚತಾ ಅಭಿಯಾನ
  • 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.
  • ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • 70ನೇ ಸ್ವಾತಂತ್ರ್ಯದಿನಾಚರಣೆ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited