Untitled Document
Sign Up | Login    
Dynamic website and Portals
  
August 29, 2016

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ: ಸ್ವಚ್ಚತಾ ಅಭಿಯಾನ

ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ:  ಸ್ವಚ್ಚತಾ ಅಭಿಯಾನ

ಬೆಂಗಳೂರು : ಶ್ರಿರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಆಶಯದಂತೆ 'ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರ' ಎಂಬ ಉದ್ದೇಶದೊಂದಿಗೆ ಸಾಮಾಜಿಕ ಸೇವಾ ಸಂಘಟನೆಯಾದ 'ರಾಘವ ಸೇನೆ'ಯ ವತಿಯಿಂದ ಸ್ವಚ್ಚತಾ ಅಭಿಯಾನ ನಡೆಯಿತು.

ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಗಿರಿನಗರದ ಪರಿಸರದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಚಗೊಳಿಸಲಾಯಿತು.

ರಸ್ತೆಯ ಬದಿಯಲ್ಲಿ ಸಂಚರಿಸುವ ಗೋವುಗಳು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು, ತಮ್ಮ ಜೀವನವನ್ನು ಕಳೆದು ಕೊಳ್ಳುತ್ತಲಿವೆ. ಈ ಪ್ಲಾಸ್ಟಿಕ್ ಸಮಸ್ಯೆ ಯಿಂದ ಗೋ ಪರಿವಾರವನ್ನು ರಕ್ಷಿಸಲು ಈ ಚಾತುರ್ಮಾಸ್ಯವನ್ನು ವಿಶೇಷವಾಗಿ ಗೋವಿನ ಕುರಿತಾಗಿಯೇ ಆಚರಿಸುತ್ತಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಕಳಕಳಿಯನ್ನು ಹೋಂದಿದ್ದು, ಗೋಮಾತೆಯ ಸಂಚಾರಕ್ಕೆ ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸುವ ಬೃಹತ್ ಚಿಂತನೆಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 'ರಾಘವ ಸೇನೆಯ' ಕಾರ್ಯಕರ್ತರು ಈ ಸ್ವಚ್ಚತಾ ಅಭಿಯಾನವನ್ನು ಕೈಗೊಂಡರು.

ಸ್ವಚ್ಚತಾ ಅಭಿಯಾನಕ್ಕೆ ಬಿವಿಜಿ ಗ್ರೂಪಿನ ಪ್ರಸನ್ನ ಶಾಸ್ತ್ರಿ ಸ್ವಚ್ಚತಾ ಪರಿಕರಗಳನ್ನು ನೀಡುವ ಮೂಲಕ ಚಾಲನೆ ನೀಡಿದರು, ಕಾರ್ಯಕ್ರಮದಲ್ಲಿ ಡಾ. ವೈ ವಿ ಕೃಷ್ಣಮೂರ್ತಿ, ರಾಮಚಂದ್ರ ಭಟ್ ಕೆಕ್ಕಾರು, ಡಾ ಶಾರದಾ ಜಯಗೋವಿಂದ, ರಾಘವಸೇನೆಯ ಆರ್ ಕೆ ಭಟ್ ಬೆಳ್ಳಾರೆ ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಇದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Event

ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • ಯೋಧರಿಗೆ ರಾಖಿಕಟ್ಟಿ ರಕ್ಷಾ ಬಂಧನ ಆಚರಿಸಿದ ಸಚಿವೆ ಸ್ಮೃತಿ ಇರಾನಿ
  • ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗೆ ತೆರಳಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
  • 70ನೇ ಸ್ವಾತಂತ್ರ್ಯದಿನಾಚರಣೆ: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ
  • ಆಗಸ್ಟ್ 14 ರ ಮಧ್ಯ ರಾತ್ರಿ ರನ್ ಫಾರ್ ಭಾರತ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited