Untitled Document
Sign Up | Login    
Dynamic website and Portals
  
December 22, 2014

ಘರ್ ವಾಪಸಿ ಬಗ್ಗೆ ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ತಿರುವನಂತಪುರಂ : ದೇಶಾದ್ಯಂತ ಮತಾಂತರದ ವಿಷಯ ದಿನದಿಂದ ದಿನಕ್ಕೆ ವ್ಯಾಪಕ ಚರ್ಚೆಯಾಗುತ್ತಿದ್ದು ಕೇರಳಕ್ಕೂ ಮತಾಂತರದ ಬಿಸಿ ತಟ್ಟಿದೆ.

ಕೇರಳದ ಆಲಪ್ಪುಳಂ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮದ 30ಅನುಯಾಯಿಗಳು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿರುವುದರ ಬಗ್ಗೆ ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ.

ಘರ್ ವಾಪಸಿ ಆಂಧೋಲನದ ಬಗ್ಗೆ ತನಿಖೆ ನಡೆಸಲು ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಹಿರಿಯ ಪೊಲೀಸ್ ಅಧಿಕಾರಿಗೆ ಆದೇಶಿಸಿದ್ದಾರೆ. ಎಂಟು ಕ್ರೈಸ್ತ ಕುಟುಂಬಗಳು ಸೇರಿದಂತೆ ಒಟ್ಟು 30 ಜನರು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು.

ಹಿಂದೂ ಧರ್ಮಕ್ಕೆ ವಾಪಸ್ಸಾದವರು ತಮ್ಮ ಸ್ವ-ಇಚ್ಛೆಯಿಂದ ಮತಾಂತರಗೊಂಡಿದ್ದಾರೆ. ಇದರಲ್ಲಿ ನಮ್ಮ ಸಂಘಟನೆಯ ಕೈವಾಡವಿಲ್ಲ ಎಂದು ವಿಶ್ವ ಹಿಂದೂ ಹೇಳಿಕೆ ನೀಡಿದೆ. ಲೋಕಸಭೆಯಲ್ಲೂ ಮತಾಂತರದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಸ್ಪಷ್ಟನೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited