Untitled Document
Sign Up | Login    
ಭಾರತದ ಶ್ರೇಷ್ಠ ಶಿಕ್ಷಕ ರಾಧಾಕೃಷ್ಣನ್ ಅವರ ದಿ ಎಥಿಕ್ಸ್ ಆಫ್ 'ವೇದಾಂತ', ಜಗದ್ಗುರು ಭಾರತಕ್ಕೆ ಅದೊಂದು ದೃಷ್ಟಾಂತ

ಸರ್ವೇಪಲ್ಲಿ ರಾಧಾಕೃಷ್ಣನ್

ಶಿಕ್ಷಕರ ದಿನಾಚರಣೆ, ಯುವಜನತೆಗೆ 'ಗುರು'ತರ ಜವಾಬ್ದಾರಿ ಕಲಿಸಿ ದೇಶಕ್ಕೆ ಅತ್ಯುತ್ತಮ ನಾಗರಿಕರನ್ನು ಕೊಡುಗೆ ನೀಡುವ ಪವಿತ್ರ ವೃತ್ತಿಯ ಸ್ಮರಣೆ ಅಂಗವಾಗಿ ಆಚರಿಸುವ ದಿನಾಚರಣೆ.

ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿಯ ಬಡ ಕುಟುಂಬವೊಂದರಲ್ಲಿ 1888ರ ಸೆ.5ರಂದು ಜನಿಸಿದ ರಾಧಾಕೃಷ್ಣನ್, ದೇಶಾದ್ಯಂತ ಶಿಕ್ಷಕರ ಕೀರ್ತಿಪತಾಕೆಯನ್ನು ಹಾರಿಸುತ್ತಾರೆ. ಅದುವರೆಗೂ ಅಧುನಿಕ ಭಾರತದಲ್ಲಿ ಹೆಚ್ಚು ಗುರುತಿಸದೇ ಶಿಕ್ಷಕ ಸಮೂಹವನ್ನು ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿದ್ದು ರಾಧಾಕೃಷ್ಣನ್ ಅವರ ಸಾಧನೆಯೊಂದಿಗೆ ಶಿಕ್ಷಕರ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಯೂ ಆಗಿದೆ. ರಾಧಾಕೃಷ್ಣನ್ ಅವರು ಆಧುನಿಕ ವಿದ್ಯಾರ್ಜನೆ ಮಾಡಿದರೂ ಸಹ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿದೆಯಲ್ಲಾ ಅದು ಅಪ್ಪಟ ಭಾರತೀಯ ಸಂಸ್ಕಾರ ಹೊಂದಿದೆ. ಓದಿದ್ದು ಕ್ರಿಶ್ಚಿಯನ್ ಶಾಲೆ ಆದರೆ ದೇಶಕ್ಕೆ ನೀಡಿದ್ದು ಭಾರತೀಯ ತತ್ವಜ್ನಾನದ ಸಾರ!

ಸ್ಕಾಲರ್ ಶಿಪ್ ಹಣದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ 'ಬಿ.ಎ' ಮತ್ತು 'ಎಂ.ಎ. ಪದವಿ'ಗಳನ್ನು ಸಂಪಾದಿಸಿಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ 20 ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವು ಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೂಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದ ರಾಧಾಕೃಷ್ಣನ್, 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು.
ರಾಧಾಕೃಷ್ಣನ್ ಅವರು ತಮ್ಮ 'ದಿ ಎಥಿಕ್ಸ್ ಆಫ್ ವೇದಾಂತ' ಪ್ರಬಂಧದ ಮೂಲಕ ಇಡೀ ದೇಶಕ್ಕೆ ಭಾರತೀಯತೆ ಬಗ್ಗೆ ತಿಳಿಸಿದರು. ಅಷ್ಟೇ ಅಲ್ಲ ಅದೆಷ್ಟೋ ಪಾಶ್ಚಾತ್ಯರಿಗೂ ಭಾರತೀಯ ವೇದಾಂತದ ಬಗ್ಗೆ ರಾಧಾಕೃಷ್ಣನ್ ಅವರು ಮಂಡಿಸಿರುವ ಪ್ರಬಂಧ ಮಾರ್ಗದರ್ಶಕ. ನ್ಯೂಟನ್ ನ ಗ್ರಾವಿಟಿ ನಿಯಮ, ಇಂದು ಆಧುನಿಕ ವಿಜ್ನಾನ ನಮಗೆ ಕಲಿಸುತ್ತಿರುವ ಅದೆಷ್ಟೋ ವಿಷಯಗಳನ್ನು ಭಾರತೀಯ ವೇದಾಂತ ನಮಗೆ ಎಂದೋ ತಿಳಿಸಿದೆ. ಈ ದಿಶೆಯಲ್ಲಿ ನೋಡುವುದಾದರೆ ರಾಧಾಕೃಷ್ಣನ್ ಅವರು ಭಾರತದ ಆತ್ಮದಂತಿದ್ದ ವೇದಾಂತದ ಮೂಲಕವೇ ಸಾಧನೆ ಮಾಡಿರುವುದು ಗಮನಾರ್ಹ. ಇಂದಿಗೂ ಭಾರತದ ಸನಾತನ ಧರ್ಮದ ತಳಹದಿಯಿಂದ ರೂಪುಗೊಂಡಿರುವ ಗಣಿತ, ವಿಜ್ನಾನ, ತಂತ್ರಜ್ನಾನಗಳನ್ನು ಓಬಿರಾಯನ ಕಾಲದ್ದು, ಶುದ್ಧ ಮೂಢವಾದದ್ದು ಎಂದು ಜರೆಯುತ್ತಾರೆ. ಆದರೆ ಇದೇ ಓಬಿರಾಯನ ಕಾಲದ ಕಲ್ಪನೆಗೂ ನಿಲುಕದ, ಅವಹೇಳನಕ್ಕೊಳಗಾದ ಭಾರತೀಯ ವಿಜ್ನಾನವನ್ನೇ ಹಲವು ವಿಷಯಗಳಲ್ಲಿ ನಾಸ ಇಂದಿಗೂ ಅನುಸರಿಸುತ್ತಿದೆ.

2014ರ ಲೋಕಸಭಾ ಚುನಾವಣೆಯಿಂದ ಈಚೆಗೆ ಭಾರತ ಮತ್ತೊಮ್ಮೆ ಜಗದ್ಗುರುವಾಗಬೇಕು, ಭಾರತೀಯ ಸನಾತನ ಧರ್ಮ ಸಾರಿದ್ದ ಮೌಲ್ಯಗಳು ಮತ್ತೊಮ್ಮೆ ರಾರಾಜಿಸಬೇಕೆಂಬ ಉತ್ಕಟ ಆಕಾಂಕ್ಷೆ ಚಿಗುರೊಡೆದಿದೆ. ಭಾರತ ಜಗದ್ಗುರುವಾಗಲು ಶಿಕ್ಷಣ ಕ್ಷೇತ್ರದ ಕೊಡುಗೆಯೇ ನಿರ್ಣಾಯಕ. ಆದರೆ ಶಿಕ್ಷಕರ ದಿನಾಚರಣೆಯನ್ನು ಆಚರಣೆಗೆ ತರುವಂತೆ ಪ್ರೇರೇಪಿಸಿದವರೇ ಭಾರತ ವೇದ, ಉಪನಿಷತ್ ಗಳನ್ನು ಅಧ್ಯಯನ ಮಾಡಿ ಭಾರತೀಯ ಪರಂಪರೆಯನ್ನು ಶ್ರೀಮಂತಗೊಳಿಸುವ ಮೂಲಕ ಅಂದೇ ಜಗದ್ಗುರು ಸ್ಥಾನ ಅಲಂಕರಿಸಲು ಅಗತ್ಯವಿರುವ ಮಾರ್ಗದರ್ಶನ ನೀಡಿದ್ದಾರೆ. ಆದರೆ ರಾಧಾಕೃಷ್ಣನ್ ಅವರು ವೇದ ಉಪನಿಷತ್ ಗಳ ಬಗ್ಗೆ ನಡೆಸಿರುವ ಅಧ್ಯಯನವಾಗಲಿ ತನ್ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯಾಗಲೀ ಅಪ್ಪಿ-ತಪ್ಪಿಯೂ ಹೊರಗಣ ಪ್ರಪಂಚನ್ನೆ ತಿಳಿಯುವುದಿಲ್ಲ. ಏಕೆಂದ ನಮ್ಮದು ಶುದ್ಧ ಸೆಕ್ಯುಲರ್ ಭಾರತವಲ್ಲವೇ?
ದಿ ಎಥಿಕ್ಸ್ ಆಫ್ ವೇದಾಂತ ಪ್ರಬಂಧ ಮಂಡಿಸಿದವರು ಭಾರತದ ಶ್ರೇಷ್ಠ ಶಿಕ್ಷಕರಾಗಿ ರೂಪುಗೊಳ್ಳಬೇಕಾದರೆ ವೇದಾಂತ, ವೇದೋಪನಿಷತ್ ಗಳಿಗೆ ಇನ್ನೆಂಥಾ ತಾಕತ್ ಇರಬೇಕು? ಈ ಮೂಲಕ ಭಾರತ ತನ್ನ ಅಸ್ಥಿತ್ವವಿರುವವರೆಗೂ ಇಂತಹ ಶಿಕ್ಷಕರನ್ನು ನೆನೆಯುತ್ತದೆ ಎಂದರೆ ಭಾರತೀಯ ಸನಾತನ ಧರ್ಮದ ಪ್ರಭಾವ ವೆಂತಹದ್ದು? ಭಾರತೀಯ ತತ್ವಜ್ಞಾನ ರೂಪಿಸಿದ್ದ ಒಬ್ಬ ರಾಧಾಕೃಷ್ಣನ್ ಭಾರತಕ್ಕೆ ಅತ್ಯಂತ ಶ್ರೇಷ್ಠ ಶಿಕ್ಷಕನಾಗಲು ಸಾಧ್ಯ ಎಂದಾದರೆ ಉಳಿದವರಿಗೆ ಏಕೆ ಸಾಧ್ಯವಿಲ್ಲ? ನಾವು ಇಂದು ಶಿಕ್ಷಕರ ವೈಫಲ್ಯಗಳ ಬಗ್ಗೆ ಚರ್ಚಿಸುತ್ತೇವೆ, ಉತ್ತಮ ಶಿಕ್ಷಕರನ್ನು ರೂಪಿಸಲು ತಿಣುಕುತ್ತೇವೆ, ಇತ್ತೀಚೆಗಂತೂ ಅಪಾರ ಜ್ನಾನ ಹೊಂದಿರುವ ಶಿಕ್ಷಕರನ್ನು ವಿದೇಶದಲ್ಲಿ ಶಿಕ್ಷಣ ನೀಡುವ ಸಲುವಾಗಿ ರಫ್ತು ಮಾಡುವ ಬಗ್ಗೆಯೂ ಅದ್ಭುತ ಯೋಚನೆಗಳು ಹೊಳೆಯುತ್ತಿವೆ. ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನೂ ಆಚರಿಸಿ ಸಂಭ್ರಮಿಸುತ್ತೇವೆ. ಇವೆಲ್ಲದರ ನಡುವೆಯೇ, ಪಾಶ್ಚಾತ್ಯ ಸಂಸ್ಕೃತಿಗೆ ಬೆರಗಾಗಿ ಸಾವಿರಾರು ಉನ್ನತ ಶಿಕ್ಷಕರನ್ನು ರೂಪಿಸುವ ಶಕ್ತಿ ಇರುವುದು ಭಾರತದ ಮೂಲ ತತ್ವಕ್ಕೆ ಎಂಬುದನ್ನು ಕೊನೆಗೂ ಮರೆಯುತ್ತೇವೆ. ಸ್ವದೇಶಿ ಕಲ್ಪನೆ, ರಾಷ್ಟ್ರಾಭಿಮಾನ, ಸನಾತನ ಧರ್ಮ ಸೈನ್ಸ್, ಗಣಿತಕ್ಕೆ ನೀಡಿರುವ ಕೊಡುಗೆಗಳನ್ನು ಶಿಕ್ಷಕರು ತಿಳಿದರೆ, ಸಾವಿರಾರು ವರ್ಷಗಳ ಹಿಂದೆಯೇ ಜಗದ್ಗುರುವಾಗಿದ್ದ ಭಾರತದ ಶಕ್ತಿ ಮುಂದಿನ ಪೀಳಿಗೆಗೆ ಹರಿಯುತ್ತದೆ. ಅಂದುಕೊಂಡಂತೆ ಭಾರತ ಮತ್ತೊಮ್ಮೆ ಜಗದ್ಗುರು ಸ್ಥಾನ ಅಲಂಕರಿಸಲಿದೆ.

ಶಿಕ್ಷಕರ ದಿನಾಚರಣೆಯಂದು, ಅವರಲ್ಲಿಯೂ ಪ್ರಪಂಚಕ್ಕೆ ಭಾರತೀಯರ ಕೊಡುಗೆ ಬಗ್ಗೆ ಅರಿವು ಮೂಡಲಿ ತನ್ಮೂಲಕ ಭಾರತದ ಕೀರ್ತಿ ಪ್ರಪಂಚದಾದ್ಯಂತಹರಡಲಿ ಎಂದು ಆಶಿಸೋಣ, ನಮ್ಮ ಮಾರ್ಗದರ್ಶಕರಾದ ಗುರುಗಳನ್ನು ನೆನೆಯೋಣ! ಹ್ಯಾಪಿ ಟೀಚರ್ಸ್ ಡೇ.....

 

Author : ಬೆಂಗಳೂರು ವೇವ್ಸ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited