Untitled Document
Sign Up | Login    
ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಶಾಲಾ ಸಮೀಕ್ಷೆ

ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಶಾಲಾ ಸಮೀಕ್ಷೆ

6 ರಿಂದ 16 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಆ ದಿಸೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಬೈಸಿಕಲ್, ಶಿಷ್ಯವೇತನ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಲು ಶ್ರಮಿಸುತ್ತಿದೆ. ಆದರೂ ನಾನಾ ಕಾರಣಗಳಿಂದಾಗಿ ಶಾಲೆಯಿಂದ ಮಕ್ಕಳು ಹೊರಗುಳಿಯುವುದು ಕಂಡುಬರುತ್ತಿದೆ. ಇಂತಹ ಪ್ರಕರಣವನ್ನು ಗುರ್ತಿಸಲು ಪ್ರಥಮ ಹಂತದಲ್ಲಿ ನವೆಂಬರ್, 6 ರಿಂದ 7 ರವರೆಗೆ ಶಾಲಾ ಸಮೀಕ್ಷೆ ನಡೆದಿದ್ದು, ಎರಡನೇ ಹಂತದಲ್ಲಿ ನವೆಂಬರ್, 13 ರಿಂದ 17 ರವರೆಗೆ ಮನೆ ಮನೆಗೆ ತೆರಳಿ ಕುಟುಂಬ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಸಮೀಕ್ಷೆಗೆ ಕ್ಲಸ್ಟರ್‌ಗಳನ್ನು ಶಾಲೆ ಬಿಟ್ಟ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ವಲ್ನರಬಲ್(ವಿಭಿನ್ನತೆ ಮತ್ತು ವೈಪರೀತ್ಯ ಹೊಂದಿರುವ ಪ್ರದೇಶ) ಮತ್ತು ನಾನ್ ವಲ್ನರಬಲ್(ಸಾಮಾನ್ಯ ಪ್ರದೇಶ) ಕ್ಲಸ್ಟರ್‌ಗಳಾಗಿ ವಿಂಗಡಿಸಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಕಾಂತರಾಜು ಮತ್ತು ಉಪ ಯೋಜನಾ ಸಮನ್ವಯಾಧಿಕಾರಿ ಅವರು ಮಹದೇವು ತಿಳಿಸಿದ್ದಾರೆ.

ವಲ್ನರಬಲ್ ಕ್ಲಸ್ಟರ್‌ಗಳಲ್ಲಿ ಸಮೀಕ್ಷೆ ಕಾರ್ಯ ನಿರ್ವಹಣೆ:-ಜಿಲ್ಲೆಯ ಎಲ್ಲಾ ನಗರ ಕ್ಲಸ್ಟರ್‌ಗಳನ್ನು ಮತ್ತು ೫೦ ಕ್ಕಿಂತ ಹೆಚ್ಚು ಶಾಲೆ ಬಿಟ್ಟ ಮಕ್ಕಳನ್ನು ಹೊಂದಿರುವ ಗ್ರಾಮೀಣ ಕ್ಲಸ್ಟರ್‌ಗಳನ್ನು ವಲ್ನರಬಲ್ ಕ್ಲಸ್ಟರ್‌ಗಳೆಂದು ಗುರುತಿಸಿ, ಈ ಕ್ಲಸ್ಟರ್‌ಗಳ ಶಾಲೆಗಳಲ್ಲಿ ೨೦೧೧-೧೨ ರಿಂದ 2೦12-13ರ ಮಕ್ಕಳ ಚಲನಾ ಮಾಹಿತಿ ಹಾಗೂ 2೦12-13ರಿಂದ 2೦13-14ರ ಮಕ್ಕಳ ಚಲನ ಮಾಹಿತಿ ಪರಿಶೀಲನೆ ಮತ್ತು ಜನ ವಸತಿ ಪ್ರದೇಶದಲ್ಲಿನ ಎಲ್ಲಾ ಕುಟುಂಬ ಸಮೀಕ್ಷೆ ನಡೆಸಲಾಗುತ್ತದೆ.

ಶಾಲಾ ಸಮೀಕ್ಷೆಗೆ ಶಾಲೆಯ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ 1 ರಿಂದ 3೦೦ ದಾಖಲಾತಿ ಇರುವ ಶಾಲೆಗಳಿಗೆ ಇಬ್ಬರು ಶಿಕ್ಷಕರ ತಂಡವನ್ನು ರಚಿಸಿ ಈ ತಂಡಗಳು ದಿನಕ್ಕೆ ಒಂದು ಶಾಲೆಯಂತೆ ಎರಡು ಶಾಲೆಗಳ ಸಮೀಕ್ಷೆ ನಡೆಸುವುದು. ಉಳಿದ ಶಾಲೆಗಳಿಗೆ ಶಾಲಾ ಸಮೀಕ್ಷೆ ಕೈಗೊಳ್ಳಲಾಗುತ್ತದೆ.

ಕುಟುಂಬ ಸಮೀಕ್ಷೆ ತಂಡದಲ್ಲಿ ೪ ಜನ ಸಮೀಕ್ಷೆದಾರರು ಇದ್ದು, ಇವರಲ್ಲಿ ಇಬ್ಬರು ಶಿಕ್ಷಣ ಇಲಾಖೆಯವರು ಉಳಿದ ಇಬ್ಬರಲ್ಲಿ ಒಬ್ಬರನ್ನು ಎನ್.ಜಿ.ಓ, ಸ್ತ್ರೀಶಕ್ತಿ ಸಂಘ ಇತರೆ ಸಂಸ್ಥೆಗಳಿಂದ ತೆಗೆದುಕೊಳ್ಳುವುದು, ಮತ್ತೊಬ್ಬರನ್ನು ಇತರೆ ಇಲಾಖೆಗಳಾದ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಗಳಿಂದ ನಿಯೋಜಿಸಿಕೊಂಡು ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತದೆ.

ಶಾಲಾ ಸಮೀಕ್ಷೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರನ್ನೇ ಕುಟುಂಬ ಸಮೀಕ್ಷೆಯಲ್ಲಿಯೂ ತೊಡಗಿಸಿಕೊಳ್ಳುವುದು. ಕುಟುಂಬ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರತಿ 3೦೦ ಕುಟುಂಬಗಳಿಗೆ ಒಂದು ತಂಡದಂತೆ ಅಗತ್ಯವಿರುವ ಸಂಖ್ಯೆಯಷ್ಟು ತಂಡಗಳನ್ನು ರಚಿಸುವುದು.

ಪ್ರತಿ 1೦ ಸಮೀಕ್ಷೆ ತಂಡಗಳಿಗೆ ಒಬ್ಬರು ಪ್ರೌಢ ಶಾಲಾ ಸಹ ಶಿಕ್ಷಕರನ್ನು ತಂಡದ ಮೇಲ್ವಿಚಾರಕರನ್ನಾಗಿ ಮತ್ತು ಪ್ರತಿ 1೦ ಮೇಲ್ವಿಚಾರಕರಿಗೆ ಒಬ್ಬರು ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಕ್ಲಸ್ಟರ್ ಹಂತದ ಮೇಲ್ವಿಚಾರಕರನ್ನು ನಿಯೋಜಿಸಿಕೊಂಡು ಸಮೀಕ್ಷೆ ಮಾಡಲಾಗುತ್ತದೆ.

ನಾನ್ ವಲ್ನರಬಲ್ ಮತ್ತು ಸಾಮಾನ್ಯ ಕ್ಲಸ್ಟರ್‌ಗಳಲ್ಲಿ ಸಮೀಕ್ಷಾ ಕಾರ್ಯ ನಿರ್ವಹಣೆ:-5೦ ಕ್ಕಿಂತ ಕಡಿಮೆ ಶಾಲೆ ಬಿಟ್ಟ ಮಕ್ಕಳನ್ನು ಹೊಂದಿರುವ ಕ್ಲಸ್ಟರ್‌ಗಳನ್ನು ನಾನ್ ವಲ್ನರಬಲ್ ಕ್ಲಸ್ಟರ್‌ಗಳೆಂದು ಗುರುತಿಸಿ ಈ ಕ್ಲಸ್ಟರ್‌ಗಳಲ್ಲಿನ ಶಾಲೆಗಳಲ್ಲಿ 2011-12 ರಿಂದ 2೦12-13ರ ಮಕ್ಕಳ ಚಲನ ಮಾಹಿತಿ ಹಾಗೂ 2೦12-13 ರಿಂದ 2೦13-14ರ ಮಕ್ಕಳ ಚಲನ ಮಾಹಿತಿ ಪರಿಶೀಲನೆ ನಡೆಸಲಾಗುತ್ತದೆ.

ಶಾಲೆ ಬಿಟ್ಟ ಮಕ್ಕಳನ್ನು ಹೊಂದಿರದ ಕ್ಲಸ್ಟರ್‌ಗಳನ್ನ ಸಾಮಾನ್ಯ ಕ್ಲಸ್ಟರ್‌ಗಳೆಂದು ಪರಿಗಣಿಸಿ ಈ ಕ್ಲಸ್ಟರ್‌ಗಳಲ್ಲಿನ ಶಾಲೆಗಳಲ್ಲಿ ೨೦೧೨-೧೩ ರಿಂದ ೨೦೧೩-೧೪ರ ಮಕ್ಕಳ ಚಲನ ಮಾಹಿತಿ ಪರಿಶೀಲನೆ ಮಾಡಲಾಗುವುದು. ನಾನ್ ವಲ್ನರಬಲ್ ಮತ್ತು ಸಾಮಾನ್ಯ ಕ್ಲಸ್ಟರ್‌ಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಮನೆಗಳಿಗೆ ಮಾತ್ರ ತೆರಳಿ ಕುಟುಂಬ ಸಮೀಕ್ಷೆ ನಡೆಸಲಾಗುವುದು.

ಶಾಲಾ ಸಮೀಕ್ಷೆಗೆ ಶಾಲೆಯ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ 1 ರಿಂದ 3೦೦ ದಾಖಲಾತಿ ಇರುವ ಶಾಲೆಗಳಿಗೆ ಇಬ್ಬರು ಶಿಕ್ಷಕರ ತಂಡವನ್ನು ರಚಿಸಿ ಈ ತಂಡಗಳು ದಿನಕ್ಕೆ ಒಂದು ಶಾಲೆಯಂತೆ ಎರಡು ಶಾಲೆಗಳ ಸಮೀಕ್ಷೆ ನಡೆಸುವುದು. ಉಳಿದ ಶಾಲೆಗಳಿಗೆ ಶಾಲಾ ಸಮೀಕ್ಷೆಗೆ ಎರಡು ದಿನಗಳು ಅಗತ್ಯವಿರುತ್ತದೆ. ಶಾಲಾ ಸಮೀಕ್ಷೆಯಲ್ಲಿ, ತೊಡಗಿಸಿಕೊಂಡ ಶಿಕ್ಷಕರನ್ನೇ ಶಾಲೆ ಬಿಟ್ಟ ಮಕ್ಕಳ ಕುಟುಂಬ ಸಮೀಕ್ಷೆಗೆ ತೊಡಗಿಸಿಕೊಳ್ಳುವುದು. ಶಾಲಾ ಸಮೀಕ್ಷೆ ನಡೆಸಿದ ಶಿಕ್ಷಕರು ಶಾಲೆ ಬಿಟ್ಟ ಮಕ್ಕಳ ಕುಟುಂಬ ಸಮೀಕ್ಷೆಯನ್ನು ಮಾಡಬೇಕಿರುತ್ತದೆ. ಪ್ರತಿ 1೦ ತಂಡಗಳಿಗೆ ಒಬ್ಬರು ಪ್ರೌಢ ಶಾಲಾ ಸಹ ಶಿಕ್ಷಕರನ್ನು ತಂಡದ ಮೇಲ್ವಿಚಾರಕರಾಗಿ ಮತ್ತು ಪ್ರತಿ ೧೦ ಮೇಲ್ವಿಚಾರಕರಿಗೆ ಒಬ್ಬರು ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನು ಕ್ಲಸ್ಟರ್ ಹಂತದ ಮೇಲ್ವಿಚಾರಕರನ್ನು ನಿಯೋಜಿಸಿಕೊಂಡು ಸಮೀಕ್ಷೆ ನಡೆಸಲಾಗುತ್ತದೆ.

ಸಮೀಕ್ಷೆಯ ಉದ್ದೇಶಗಳು:- 6 ರಿಂದ 16 ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು, ಶಾಲಾ ಮಟ್ಟದಲ್ಲಿ 2೦11-12 ನೆಯ ಸಾಲಿನಲ್ಲಿ 1ರಿಂದ 9ನೆಯ ತರಗತಿಯಲ್ಲಿದ್ದ ಮಕ್ಕಳು,2೦12-13ನೆಯ ಸಾಲಿನಲ್ಲಿ ಶಾಲೆಯಲ್ಲಿ ಶಿಕ್ಷಣ ಮುಂದುವರಿಸುತ್ತಿರುವ ಹಾಗೂ 2೦12-13 ಸಾಲಿನಲ್ಲಿ 1 ರಿಂದ 9ನೆಯ ತರಗತಿಯಲ್ಲಿದ್ದ ಮಕ್ಕಳು 2೦13-14ನೆಯ ಸಾಲಿನಲ್ಲಿ ಶಿಕ್ಷಣ ಮುಂದುವರೆಸುತ್ತಿರುವ ಮಾಹಿತಿ ಆಧಾರದ ಮೇಲೆ, ಈ ಎರಡು ವರ್ಗಗಳ ನಡುವಿನ ಅವಧಿಗಳಲ್ಲಿ ಶಾಲೆ ಬಿಟ್ಟ ಮಕ್ಕಳ (ಮಿಸ್ಸಿಂಗ್ ಚೈಲ್ಡ್) ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಲಾಗುತ್ತದೆ.
ಪಟ್ಟಿಯಲ್ಲಿನ ಮಕ್ಕಳ ಜಾಡನ್ನು ಕಂಡು ಹಿಡಿಯುವುದಕ್ಕಾಗಿ ಕುಟುಂಬ ಸಮೀಕ್ಷೆಯನ್ನು ಕೈಗೊಳ್ಳುವುದು. ಜನವಸತಿ ಪ್ರದೇಶಗಳಲ್ಲಿ ಕುಟುಂಬ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹಿಂದೆಂದೂ ಶಾಲೆಗೆ ಸೇರದೆ ಇರುವ (ನೆವೆರ್ ಎನ್ರೋಲ್ಡ್) 6 ರಿಂದ 16ವಯೋಮಾನದ ಮಕ್ಕಳಿದ್ದಾರೆ ಅವರ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಶಾಲೆಗೆ ಸೇರದ, ಶಾಲೆ ಬಿಟ್ಟ ಮಕ್ಕಳ ಸಾಮಾಜಿಕ ಹಿನ್ನೆಲೆಯ ಬಗ್ಗೆ ತಿಳಿಯುವುದು, ಮಕ್ಕಳು ಶಾಲೆ ಬಿಟ್ಟಿರುವುದಕ್ಕೆ ಇರುವ ಕಾರಣಗಳನ್ನು ತಿಳಿದುಕೊಳ್ಳುವುದು. ಸಮೀಕ್ಷೆಯಲ್ಲಿ ದೊರಕುವ ಅಂಕಿ-ಅಂಶಗಳನ್ನು ಹೋಲಿಸಿ ವಿಶ್ಲೇಶಿಷಿಸುವುದು. ಶಾಲೆಯಿಂದ ಹಿಡಿದು ಕ್ಲಸ್ಟರ್, ಬ್ಲಾಕ್, ಜಿಲ್ಲಾವಾರು ಓ.ಓ.ಎಸ್.ಸಿ ಸಮೀಕ್ಷಾ ವರದಿ ಸಿದ್ದಪಡಿಸುವುದು. ಇದರ ಆಧಾರದ ಮೇಲೆ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ನವೀನ ರೀತಿಯ ಸಮಗ್ರ ಕ್ರಿಯಾಯೋಜನೆಯನ್ನು ತಯಾರಿಸುವುದು ಸಮೀಕ್ಷೆಯ ಉದ್ದೇಶವಾಗಿದೆ.

ಸಮೀಕ್ಷೆಯ ವಿಶಿಷ್ಟತೆ:- ವಿಭಿನ್ನತೆ ಮತ್ತು ವೈಪರಿತ್ಯ ಹೊಂದಿರುವ ಪ್ರದೇಶ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ನಿಖರವಾಗಿ ಗುರುತಿಸಿ ಜಾಡು ಹಿಡಿಯುವ ಸಮೀಕ್ಷೆಯಾಗಿರುತ್ತದೆ. ವಿಭಿನ್ನತೆ ಮತ್ತು ವೈಪರಿತ್ಯ ಹೊಂದಿರುವ ಪ್ರದೇಶ ಹಿಂದುಳಿದಿರುವ, ನೈಸರ್ಗಿಕ ವೈಪರಿತ್ಯ ವಾತಾವರಣವುಳ್ಳ, ಸಹಜ ಜೀವನಕ್ಕೆ ಆತಂಕಗಳಿರುವ, ಒಟ್ಟಾರೆ ಮಾನವನ ನಿಯಂತ್ರಣದಲ್ಲಿಲ್ಲದ ಪರಿಸ್ಥಿತಿಯ ಭೌಗೋಳಿಕ ಸನ್ನಿವೇಶ ಹೊಂದಿರುವ, ಜನಾಂಗಗಳಿರುವ ಪ್ರದೇಶಗಳು.

ನಗರ ಪ್ರದೇಶಗಳಲ್ಲಿ: ಕೊಳಗೇರಿ, ಸಂಕೀರ್ಣ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಪ್ರದೇಶಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳು, ಹೊಟೇಲ್ ಮತ್ತು ಇದೇ ರೀತಿಯ ವ್ಯವಸ್ಥೆಯ ಸ್ಥಳಗಳು ಗಣಿಗಾರಿಕೆ ಮತ್ತು ಬಂಡೆಗಾರಿಕೆ ಪ್ರದೇಶಗಳು, ವಲಸೆ ಕುಟುಂಬಗಳಿರುವ ಸ್ಥಳಗಳು, ಗಣಿಗಾರಿಕೆ ಮತ್ತು ಬಂಡೆಗಾರಿಕೆ ಪ್ರದೇಶಗಳು, ಹೆದ್ದಾರಿ ಅಕ್ಕ ಪಕ್ಕದ ಪ್ರದೇಶಗಳು.

ಗ್ರಾಮಾಂತರ ಪ್ರದೇಶಗಳಲ್ಲಿ: ಕಾಡು ಪ್ರದೇಶ (ವಿಶೇಷವಾಗಿ ಗುಡ್ಡಗಾಡು, ಬುಡಗಟ್ಟು ಜನಾಂಗಗಳಿರುವ ಕುಗ್ರಾಮಗಳು, ಪ್ರವಾಹ ಪೀಡಿತ, ಬರಪೀಡಿತ ಪ್ರದೇಶಗಳು, ವಲಸೆ ಕುಟುಂಬಗಳಿರುವ ಸ್ಥಳಗಳು, ನೀರಾವರಿ, ತೋಟಗಾರಿಕೆ ಪ್ರದೇಶಗಳು_ ವಲ್ನರಬಲ್ ಪ್ರದೇಶಗಳೆಂದು ಗುರುತಿಸಲಾಗಿದೆ.

ಸಾಮಾನ್ಯ ಪ್ರದೇಶ:- ವಿಭಿನ್ನತೆ ಹಾಗೂ ವೈಪರೀತ್ಯ ಹೊಂದಿರುವ ಪ್ರದೇಶಗಳನ್ನು ಬಿಟ್ಟು ಉಳಿದಿರುವ ಇತರೆ ಪ್ರದೇಶಗಳು, ವಲ್ನರಬಲ್ ಪ್ರದೇಶಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಪತ್ತೆಗಾಗಿ ಶಾಲಾ ಸಮೀಕ್ಷೆ ಮತ್ತು ಜನವಸತಿ ಪ್ರದೇಶದಲ್ಲಿನ ಎಲ್ಲಾ ಕುಟುಂಬಗಳ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ವಲ್ನರಬಲ್ ಅಲ್ಲದ ಪ್ರದೇಶಗಳಲ್ಲಿ ಶಾಲೆ ಬಿಟ್ಟ ಮಕ್ಕಳ ಪತ್ತೆಗಾಗಿ ಶಾಲಾ ಸಮೀಕ್ಷೆ ಮತ್ತು ಜನವಸತಿ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳ ಕುಟುಂಬಗಳಿಗೆ ಮಾತ್ರ ಭೇಟಿ ನೀಡಿ ಕುಟುಂಬ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

 

Author : ಲೇಖಾ ರಾಕೇಶ್

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited