.
ದೇಶಾದ್ಯಂತ ಉದ್ಯೋಗ ಅರಸುತ್ತಿರುವ ಹೊಸಬರ ಮೊದಲ ಆಯ್ಕೆ ಬೆಂಗಳೂರು. ಐಟಿ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೊಸಬರಿಗೆ ಉದ್ಯೋಗ ನೀಡುವುದರಲ್ಲಿ ಒಂಭತ್ತನೇ ಸ್ಥಾನದಲ್ಲಿದೆ ಎಂದು ಲಿಂಕ್‍ಡೆನ್ ಅಂತರ್ಜಾಲ ತಾಣದ ಅಧ್ಯಯನ ವರದಿ ತಿಳಿಸಿದೆ.
`ಟ್ಯಾಲೆಂಟ್ ಮೈಗ್ರೇಶನ್' ಎಂಬ ವಿಷಯದ ಅಧ್ಯಯನಕ್ಕಾಗಿ ಸಂಸ್ಥೆಯ ಪ್ರತಿನಿಧಿಗಳು 2012ರ ನವೆಂಬರ್ ನಿಂದ 2013ರ ನವೆಂಬರ್ ಅವಧಿಯಲ್ಲಿ 26 ಲಕ್ಷ ಚಂದಾದಾರರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಿತ್ತು.
ಹೊಸದಾಗಿ ಕೆಲಸ ಹುಡುಕುತ್ತಿರುವವರು ಮೊದಲ ಆದ್ಯತೆ ಅಮೆರಿಕದ ನಗರಗಳಾದ ವಾಷಿಂಗ್ಟನ್ ಡಿಸಿ, ಮಿನ್ನೆಪೆÇಲಿಸ್‍ಗೆ ನೀಡಿದ್ದಾರೆ. ಬೆಂಗಳೂರಿನ ಹೊರತಾಗಿ ಈ ಪಟ್ಟಿಯಲ್ಲಿ ಕಂಡು ಬಂದ ಇನ್ನೊಂದು ನಗರ ಪುಣೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ 14ನೇ ಸ್ಥಾನ.
ಶೇಕಡ 42ರಷ್ಟು ಹೊಸ ಪದವೀಧರರು ಉದ್ಯೋಗಕ್ಕಾಗಿ ಪ್ಯಾರಿಸ್‍ಗೆ ತೆರಳಿದರೆ, ಶೇಕಡ 34ರಷ್ಟು ಪದವೀಧರರ ಆಯ್ಕೆ ಬೆಂಗಳೂರು ಆಗಿತ್ತು. ಇನ್ನೊಂದು ಪ್ರಮುಖ ಅಂಶವೆಂದರೆ, ಭಾರತದಲ್ಲಿ ಎಂಜಿನಿಯರಿಂಗ್, ಮಾನವ ಸಂಪನ್ಮೂಲ, ಸಾಫ್ಟ್‍ವೇರ್
ಎಂಜಿನಿಯರಿಂಗ್, ಆಡಳಿತ ನಿರ್ವಹಣೆ, ಜಾವಾ ಅಭಿವೃದ್ಧಿ ನಿರ್ವಹಣೆ ಹಾಗೂ ನಾಯಕತ್ವದ ತರಬೇತಿ ಪಡೆದವರು ಉದ್ಯೋಗಕ್ಕಾಗಿ ಅಮೆರಿಕ, ಚೀನಾ, ಅರಬ್ ರಾಷ್ಟ್ರ, ಬ್ರಿಟನ್ ಮತ್ತು ಸಿಂಗಾಪುರದ ಉದ್ಯೋಗಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂಬುದನ್ನೂ ವರದಿ ಬಹಿರಂಗಪಡಿಸಿದೆ.
ಮಾನ್‍ಸ್ಟರ್ ಎಂಬ ಉದ್ಯೋಗ ಒದಗಿಸುವ ಕಂಪನಿಯ ಇತ್ತೀಚಿನ ವರದಿ ಪ್ರಕಾರ, ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿ ಶೇಕಡ 37ರಷ್ಟು ಹಾಗೂ ಮುಂಬಯಿಯಲ್ಲಿ ಶೇಕಡ 27ರಷ್ಟು ಪ್ರಗತಿ ಪಥದಲ್ಲಿದೆ. ಇವೆಲ್ಲವೂ ಉದ್ಯೋಗ ಕ್ಷೇತ್ರದಲ್ಲಿ ಆಶಾಭಾವನೆ ಮೂಡಿಸಿವೆ.