Untitled Document
Sign Up | Login    
ನಾಗರಿಕ ಸೇವಾ ಪರೀಕ್ಷೆ ಬರೆಯುವಿರಾ? ಉತ್ತೀರ್ಣರಾಗುವುದಕ್ಕಿದೆ 6 ಅವಕಾಶ..

.

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೇಂದ್ರ ಸರ್ಕಾರಿ ಉದ್ಯೋಗ ಸೇರುವುದು ಹಲವರ ಕನಸು. ಇದನ್ನು ನನಸು ಮಾಡುವುದಕ್ಕಾಗಿ ಆಕಾಂಕ್ಷಿಗಳಿಗೆ ಯುಪಿಎಸ್ಸಿ ಹೆಚ್ಚುವರಿ ಎರಡು ಅವಕಾಶ ಒದಗಿಸಿದೆ. ಇದರೊಂದಿಗೆ ನಾಲ್ಕು ಬಾರಿ ಪರೀಕ್ಷೆ ಬರೆದು ಪಾಸಾಗದೇ ಹೋದರೆ ಇನ್ನೆರಡು ಪ್ರಯತ್ನಕ್ಕೂ ಅವಕಾಶ ಸಿಕ್ಕಿದಂತಾಗಿದೆ.

ನಾಗರಿಕ ಸೇವಾ ಪರೀಕ್ಷೆಗಳ ನಿಯಮಗಳಲ್ಲಿ ಯುಪಿಎಸ್ಸಿ ಕೊಂಚ ಬದಲಾವಣೆ ತಂದಿದೆ. ಇದುವರೆಗೆ ಅಭ್ಯರ್ಥಿಗಳು ಗರಿಷ್ಠ ನಾಲ್ಕು ಪ್ರಯತ್ನದಲ್ಲೇ ಪರೀಕ್ಷೆ ಪಾಸಾಗಬೇಕಿತ್ತು. ಆದರೆ, ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ಹೊಸ ನಿಯಮದ ಪ್ರಕಾರ, ಗರಿಷ್ಠ ಪ್ರಯತ್ನದ ಮಿತಿಯನ್ನು ಆರಕ್ಕೆ ಏರಿಸಿದೆ. ಇದರಿಂದಾಗಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶ ಸೇವೆ(ಐಎಫ್ಎಸ್) ಆಕಾಂಕ್ಷಿಗಳ ಆಸೆ ಗರಿಗೆದರಿದೆ.

ಪ್ರಯತ್ನಗಳ ಮಿತಿಯನ್ನು ಏರಿಸಿದ್ದರಿಂದಾಗಿ ಸಾಮಾನ್ಯ ವಿಭಾಗ ಹಾಗೂ ಇತರೆ ಹಿಂದುಳಿದ ವರ್ಗ(ಒಬಿಸಿ)ದ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ. ಸಾಮಾನ್ಯ ವರ್ಗದವರು ಗರಿಷ್ಠ 6 ಪ್ರಯತ್ನದಲ್ಲಿ ಹಾಗೂ ಒಬಿಸಿಯವರು ಗರಿಷ್ಠ 9 ಪ್ರಯತ್ನದಲ್ಲಿ ಉತ್ತೀರ್ಣರಾಗಬೇಕಿದೆ. ಪರಿಶಿಷ್ಟ ಜಾತಿ(ಎಸ್ಸಿ) ಹಾಗೂ ಪರಿಶಿಷ್ಟ ಪಂಗಡ (ಎಸ್ಟಿ)ದ ಅಭ್ಯರ್ಥಿಗಳಿಗೆ ಯಾವುದೇ ಮಿತಿ ಹೇರಿಲ್ಲ. ಅವರು ಉತ್ತೀರ್ಣವಾಗುವ ತನಕ ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು.

ಗರಿಷ್ಠ ಪ್ರಯತ್ನದ ಮಿತಿ ಏರಿಕೆಯೊಂದಿಗೆ ಅಭ್ಯರ್ಥಿಗಳ ವಯೋಮಿತಿಯಲ್ಲೂ ಸಡಿಲಿಕೆ ಉಂಟಾಗಿದೆ. ಯುಪಿಎಸ್ಸಿ ಹೊರಡಿಸಿರುವ ನೋಟಿಫಿಕೇಶನ್ ಪ್ರಕಾರ, 1982ರ ಆಗಸ್ಟ್ 2 ಅಥವಾ ಅದಕ್ಕಿಂತ ಮೊದಲು ಜನಿಸಿದವರು ಹಾಗೂ 1993ರ ಆಗಸ್ಟ್ 1 ಅಥವಾ ಅದರ ನಂತರ ಜನಿಸಿದವರು ಈ ಪರೀಕ್ಷೆ ಬರೆಯಲು ಅರ್ಹರಲ್ಲ. ಅಂದರೆ 21-32ರ ವಯೋಮಿತಿ ನಿಗದಿ ಮಾಡಲಾಗಿದೆ. ಒಬಿಸಿಯವರಿಗೆ ಗರಿಷ್ಠ ವಯೋಮಿತಿ 35 ಆದರೆ, ಎಸ್ಸಿ ಎಸ್ಟಿಯವರಿಗೆ 37 ವರ್ಷ.
ಈ ವರ್ಷ ನಾಗರಿಕ ಸೇವಾ ಪರೀಕ್ಷೆಗಳು ಪ್ರಿಲಿಮಿನರಿಯೊಂದಿಗೆ ಆಗಸ್ಟ್ 24ರಂದು ಆರಂಭವಾಗಲಿವೆ. ಮುಂದೆ, ಮೈನ್ಸ್ ಹಾಗೂ ಸಂದರ್ಶನವಿರಲಿದ್ದು, ದಿನಾಂಕವಿನ್ನೂ ನಿಗದಿಯಾಗಿಲ್ಲ. ಹೆಚ್ಚಿನ ಮಾಹಿತಿಗೆ ಯುಪಿಎಸ್ಸಿ ಅಂತರ್ಜಾಲ ತಾಣ(www.upsc.gov.in)ಕ್ಕೆ ಭೇಟಿ ನೀಡಬಹುದು.

 

Author : ಗಣೇಶ್ 

More Articles From Education & Career

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited