Untitled Document
Sign Up | Login    
ಪುಟ್ಟ ವಿಮಾನದಲ್ಲಿ ನೀವು ಖರೀದಿಸಿದ ವಸ್ತುಗಳು ಮನೆ ಬಾಗಿಲಿಗೆ!


ಬೆಂಗಳೂರಿನ ಟ್ರಾಫಿಕ್ ಜ್ಯಾಮ್ ನಿಂದ ಬೇಸತ್ತುಹೋದ ಗ್ರಾಹಕರಿಗೆ ಇಲ್ಲೊಂದು ಸಿಹಿ ಸುದ್ದಿ! ಇನ್ನು ಮೇಲೆ ನೀವು ಶಾಪಿಂಗ್ ಮುಗಿಸಿ, ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಮ್ ನಲ್ಲಿ ಸಿಕ್ಕಿಕೊಂಡು ಹಿಡಿಶಾಪ ಹಾಕುತ್ತಾ, ಇರಬೇಕಾದ ಪ್ರಮೇಯವಿರುವುದಿಲ್ಲ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನುಮುಂದೆ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಅವರ ಮನೆಬಾಗಿಲಿಗೆ ಪುಟ್ಟ ವಿಮಾನದಲ್ಲಿ ಪೂರೈಕೆ ಮಾಡಲಾಗುತ್ತದೆ ಎಂಬ ಗುಮಾನಿಗೆ ಇನ್ನಷ್ಟು ಪುಷ್ಠಿ ನೀಡುವ ಮಾಹಿತಿ ಸಿಕ್ಕಿದೆ.

ಮಾನವ ರಹಿತ ವಿಮಾನ (ಡ್ರೋನ್) ಬಳಸಿ ಗ್ರಾಹಕರ ಮನೆ ಬಾಗಿಲಿಗೆ ಅವರು ಖರೀದಿಸಿದ ಉತ್ಪನ್ನಗಳನ್ನು ತಲುಪಿಸುವುದಾಗಿ ಘೋಷಿಸಿದ್ದ ಅಮೆರಿಕ ಮೂಲದ ಆನ್ ಲೈನ್ ಮಾರಾಟ ಕಂಪನಿ ಅಮೆಜಾನ್ ತನ್ನ ಈ ಕೆಲಸಕ್ಕೆ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್ ಕಂಪನಿಯಿಂದಾಗಿ ಅಮೆಜಾನ್ ಕಂಪನಿ ತೀವ್ರ ಪೈಪೋಟಿ ಎದುರಿಸುತ್ತಿದೆ. ಹೀಗಾಗಿ ದೀಪಾವಳಿ ವೇಳೆಗೆ ಅಮೆಜಾನ್ ಕಂಪನಿ ಡ್ರೋನ್ ಸೇವೆ ಆರಂಭಿಸುವ ಸಾಧ್ಯತೆಯಿದೆ. ಬೆಂಗಳೂರು ಮಾತ್ರವಲ್ಲ ಮುಂಬೈನಲ್ಲಿ ಕೂಡ ಈ ಸೇವೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

8 ರೋಟರ್ ಗಳನ್ನು ಅಳವಡಿಸಿಕೊಂಡಿರುವ ಅಮೆಜಾನ್ ಕಂಪನಿಯ ಆಕ್ಟೋಕಾಪ್ಚರ್, 25 ಕೆ.ಜಿಗಿಂತ ಕಡಿಮೆ ತೂಕದ್ದಾಗಿದೆ. ಗಂಟೆಗೆ 80 ಕಿ.ಮೀ ವೇಗದಲ್ಲಿ ಕ್ರಮಿಸಲಿದೆ. ಇದು 2.26 ಕೆ.ಜಿ.ತೂಕದ ವರೆಗಿನ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುತ್ತದೆ.

ಅಮೆಜಾನ್ ಮಾರಾಟ ಮಾಡುತ್ತಿರುವ ಉತ್ಪನ್ನಗಳ ಪೈಕಿ ಈ ಗಾತ್ರದವುಗಳ ಪಾಲು ಶೇ.86ರಷ್ಟಿದೆ ಎಂಬುದು ಗಮನಾರ್ಹ. ಗ್ರಾಹಕರು ಉತ್ಪನ್ನ ಖರೀದಿಸಿದ 90 ನಿಮಿಷದಿಂದ 3 ತಾಸಿನೊಳಗೆ ಅದನ್ನು ಅವರಿಗೆ ತಲುಪಿಸುವ ಗುರಿಯನ್ನು ಅಮೆಜಾನ್ ಹೊಂದಿದೆ.

ಅಮೆರಿಕದಲ್ಲಿ ಡ್ರೋನ್ ಹಾರಾಟಕ್ಕೆ ಅವಕಾಶವಿಲ್ಲದ ಕಾರಣ ಭಾರತವನ್ನು ಅಮೆಜಾನ್ ಕಂಪನಿ ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧವಿಲ್ಲದಿರುವುದು ಕಂಪನಿಗೆ ವರದಾನವಾಗಲಿದೆ.

ಆದರೆ, ಭದ್ರತಾ ದೃಷ್ಟಿಯಿಂದ ಮುಂದೆ ಭಾರತದಲ್ಲೂ ಗ್ರಾಹಕ ವಸ್ತುಗಳ ಸಾಗಣೆಗೆ ದ್ರೋನ್ ಗಳ ಬಳಕೆಗೆ ಸರಕಾರ ನಿಷೇಧ ಹೇರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಯಾವುದಕ್ಕೂ ಕಾದು ನೋಡೋಣ.

 

Author : ಲೇಖಾ ರಾಕೇಶ್ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited