.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಯುಗ ಅಂತ್ಯವಾಗತೊಡಗಿತೇ? ಹೀಗೊಂದು ಸಂಶಯಕ್ಕೆ ಕಾರಣವಿದೆ. ಮೊಬೈಲ್ ಉತ್ಪಾದನೆಯಲ್ಲಿ ಮುಂಚೂಣಿ ಕಂಪನಿ ಸ್ಯಾಮ್ ಸಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ ಸ್ಮಾರ್ಟ್ ಫೋನ್ ನಲ್ಲಿ "ಟೈಝನ್'' ಆಪರೇಟಿಂಗ್ ಸಿಸ್ಟಂ ಅಳವಡಿಸಿದೆ. ಇದು ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಇಂಥದ್ದೊಂದು ಚರ್ಚೆಗೆ ಗ್ರಾಸ ಒದಗಿಸಿದೆ.
ಜಗತ್ತಿನ ಮೊತ್ತ ಮೊದಲ ಟೈಝನ್ ಫೋನ್ ಸ್ಯಾಮ್ ಸಂಗ್ ಝೆಡ್. ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್ ಈ ಬಾರಿ ಇಂಥದ್ದೊಂದು ಸಾಹಸಕ್ಕೆ ಸುಮ್ಮನೆ ಕೈ ಹಾಕಿಲ್ಲ. ಅದು ಉತ್ಪಾದಿಸುವ ಟಿವಿ, ಡಿವಿಡಿ ಪ್ಲೇಯರ್, ವಾಷಿಂಗ್ ಮೆಷಿನ್, ಡಿಜಿಟಲ್ ಕ್ಯಾಮರಾ ಮೊದಲಾದ ಎಲ್ಲ ಉಪಕರಣಗಳಲ್ಲೂ ಆಪರೇಟಿಂಗ್ ಸಿಸ್ಟಂ ಕಾಮನ್ ಆಗಿದೆ. ಇದೇ ಕಾರಣಕ್ಕೆ ಹೊಸತೊಂದು ಆಪರೇಟಿಂಗ್ ಸಿಸ್ಟಂ ಅಳವಡಿಸಲು ಅದು ಮುಂದಾಯಿತು ಎಂಬ ಮಾತು ಕೇಳುತ್ತಿದೆ.
ಏನಿದು ಟೈಝನ್ ?
ಸ್ಯಾಮ್ ಸಂಗ್, ಇಂಟೆಲ್, ಹುವೈ, ಫುಜಿತ್ಸು, ಎನ್ಇಸಿ,ಪನಸೋನಿಕ್, ಕೆಟಿ ಕಾರ್ಪೊರೇಷನ್, ಸ್ಪ್ರಿಂಟ್ ಕಾರ್ಪೊರೇಷನ್, ಎಸ್ಕೆ ಟೆಲಿಕಾಂ, ಆರೆಂಜ್, ಎನ್ಟಿಟಿ ಡೊಕೊಮೊ ಮತ್ತು ವೊಡಾಫೋನ್ ಕಂಪನಿಗಳ ಅಸೋಸಿಯೇಷನ್ ಜತೆಯಾಗಿ ಓಪನ್ ಸೋರ್ಸ್ ಪ್ರೋಗ್ರಾಮಿಂಗ್ ಭಾಷೆ ಲಿನಕ್ಸ್ ಆಧಾರಿತವಾದ ಟೈಝನ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿ ಪಡಿಸಿದೆ. ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಡಿಜಿ ಕ್ಯಾಮರಾ, ಧರಿಸಬಹುದಾದ ಗಾಜೆಟ್ ಗಳು ಇತ್ಯಾದಿಗಳಲ್ಲಿ ಅಳವಡಿಸಲು ಅನುವಾಗುವಂತೆ ಈ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಪಡಿಸಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ಯಾಮ್ ಸಂಗ್ ಎನ್ ಎಕ್ಸ್ 300ಎಂ ಎಂಬ ಸ್ಮಾರ್ಟ್ ಕ್ಯಾಮರಾವನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಇದೇ ಟೈಝನ್ ಆಪರೇಟಿಂಗ್ ಸಿಸ್ಟಂ ಅಳವಡಿಸಲಾಗಿತ್ತು. ಬಹುಶಃ ಇದುವೇ ಮೊದಲ ಟೈಝನ್ ಆಪರೇಟಿಂಗ್ ಸಿಸ್ಟಂ ಆಧಾರಿತ ಇಲೆಕ್ಟ್ರಾನಿಕ್ ಉಪಕರಣ.
ಸ್ಯಾಮ್ ಸಂಗ್ ಝೆಡ್ ವಿಶೇಷತೆ
4.8 inches HD display
2.3 GHz Quad Core Processor from unnamed manufacturer
8 Mega pixel Rear Camera
2.1 Mega Pixel Front Camera
2 GB RAM
16 GB Internal Memory (expandable upto 64 GB)
2600 mAh battery