Untitled Document
Sign Up | Login    
ಹೊಳೆಯುವ ಸೂರ್ಯ ಕಪ್ಪಾದನೇ..?


ಸೌರಮಂಡಲಕ್ಕೆ ಶಕ್ತಿಯ ಆಗರವಾದ ಸೂರ್ಯ ಕಪ್ಪಾಗುತ್ತಿದ್ದಾನೆಯೇ? ಅಮೆರಿಕದ ಬಾಹ್ಯಾಕಾಶ ಸಂಸ್ಥೆ ’ನಾಸಾ' ಇತ್ತೀಚೆಗೆ ತೆಗೆದಿರುವ ಚಿತ್ರಗಳು ಇಂಥ ಪ್ರಶ್ನೆ ಹುಟ್ಟುಹಾಕಿವೆ. ನಾಸಾ ತೆಗೆದಿರುವ ಚಿತ್ರಗಳಲ್ಲಿ, ಸೂರ್ಯನ ಮೇಲ್ಮೈನಲ್ಲಿ 2 ದೊಡ್ಡ ಕಪ್ಪು ರಂಧ್ರಗಳು ಇರುವುದು ಪತ್ತೆಯಾಗಿದೆ.

ಜ.1ರಂದು ತೆಗೆದಿರುವ ಈ ಚಿತ್ರಗಳಲ್ಲಿ, ಸೂರ್ಯನ ದಕ್ಷಿಣ ಧ್ರುವದಲ್ಲಿ ದೊಡ್ಡ ಕುಳಿ ಇದೆ. ಇದು ಇಡೀ ಸೂರ್ಯನ ಮೇಲ್ಮೈನ ಶೇ.8ರಷ್ಟು ಭಾಗವನ್ನು ಇದು ಆಕ್ರಮಿಸಿದೆ. ಮೈಲುಗಳ ಲೆಕ್ಕಾಚಾರದಲ್ಲಿ 142 ಶತಕೋಟಿ ಚದರ ಮೈಲು ವ್ಯಾಪ್ತಿಯನ್ನು ಇವು ಹೊಂದಿದೆ. ಇನ್ನು ಸಣ್ಣ ಕುಳಿಯು ಉತ್ತರ ಧ್ರುವದಲ್ಲಿ ಇದ್ದು ಇದು 3.8 ಶತಕೋಟಿ ಚದರ ಮೈಲಿಯಷ್ಟಿದೆ ಅಥವಾ ಸೂರ್ಯನ ಮೇಲ್ಮೈನ ಶೇ.0.16ರಷ್ಟಿದೆ.

ಇತ್ತೀಚಿನ ದಶಕಗಳಲ್ಲಿ ಸೌರಮಂಡಲದಲ್ಲಿ ಪತ್ತೆಯಾದ ಅತಿದೊಡ್ಡ ಕುಳಿಗಳು ಇವಾಗಿವೆ. ಇವುಗಳನ್ನು ನಾಸಾ ’ಪ್ರಭಾವಲಯ ರಂಧ್ರಗಳು' ಎಂದು ಕರೆದಿದೆ. ಸೂರ್ಯನ ಹೊರ ವಾತಾವರಣದಲ್ಲಿರುವ ಕಮ್ಮಿ ಸಾಂದ್ರತೆಯ ಮತ್ತು ಹೆಚ್ಚು ತಾಪಮಾನದ ವಲಯಗಳು ಇವಾಗಿದ್ದು, ಅದಕ್ಕೇ ಇವನ್ನು ”ಪ್ರಭಾವಲಯ ರಂಧ್ರಗಳು' ಎಂದು ನಾಸಾ ಕರೆದಿದೆ.

2015ನ್ನು ಸೂರ್ಯ ನಿಗೂಢ ವಿದ್ಯಮಾನದೊಂದಿಗೆ ಆರಂಭಿಸಿದ್ದಾನೆ. ಈ ರಂಧ್ರಗಳು ಇನ್ನೂ 5 ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಯವರೆಗೆ ಗೋಚರಿಸಬಹುದು. ಕಾಲಕಾಲಕ್ಕೆ ಇವುಗಳ ಆಕಾರ ಬದಲಾಗುತ್ತ ಹೋಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಕಪ್ಪು ರಂಧ್ರಗಳು ಉಂಟಾಗಿರುವ ಪ್ರದೇಶದಲ್ಲಿನ ಕಣಗಳು ಸೂರ್ಯನ ಇತರ ಭಾಗಗಳ ವಿದ್ಯುತ್ಕಾಂತೀಯ ಕಣಗಳಿಗಿಂತ ಹೆಚ್ಚು ವೇಗದಲ್ಲಿ ಹೊರಹೊಮ್ಮುತ್ತವೆ. ಇಲ್ಲಿ ತಾಸಿಗೆ 500 ಮೈಲು ವೇಗದಲ್ಲಿ ಈ ಕಣಗಳು ಹೊರಹೊಮ್ಮುತ್ತವೆ. ಹೀಗಾಗಿ ಈ ಭಾಗವು ಕಪ್ಪಾಗಿ ಕಾಣಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಈ ಕಪ್ಪು ರಂಧ್ರಗಳಿಂದ ಭಾರಿ ವೇಗದಲ್ಲಿ ವಿದ್ಯುತ್ಕಾಂತೀಯ ಕಣಗಳು ಬಾಹ್ಯಾಕಾಶ ವಾತಾವರಣವನ್ನು ಪ್ರವೇಶಿಸುತ್ತವೆ. ರಂಧ್ರಗಳಿಂದಾಗಿ ಸೂರ್ಯನು ಕಮ್ಮಿ ಪ್ರಮಾಣದಲ್ಲಿ ಬೆಳಗಬಹುದು. ರಂಧ್ರಗಳು ಹೆಚ್ಚು ಕಪ್ಪಾಗಿ ಗೋಚರಿಸಬಹುದು ಎಂದು ಭಾವಿಸಲಾಗಿದೆ.

ಕಪ್ಪು ರಂಧ್ರಗಳ ವಲಯದಲ್ಲಿ ಭಾರಿ ಪ್ರಮಾಣದ ಸ್ಫೋಟಗಳು ಉಂಟಾದಾಗ ಸೌರ ಗಾಳಿ ದೊಡ್ಡ ಪ್ರಮಾಣದಲ್ಲಿ ಬೀಸಬಹುದು. ಆದರೆ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ. ಏಕೆಂದರೆ ಭೂವಾತಾವರಣವು ಇಂಥ ಸೌರಗಾಳಿಯನ್ನು ಪ್ರತಿರೋಧಿಸುವ ಸಾಮರ್ಥ್ಯ ಹೊಂದಿದೆ.

ನಾಸಾ ಇಂಥ ಕುಳಿಯನ್ನು ಶೋಧಿಸಿದ್ದು ಇದು 2ನೇ ಸಲವಾಗಿದೆ. 1973-74ರಲ್ಲಿ ಮೊದಲ ಬಾರಿ ಅಮೆರಿಕದ ಸ್ಕೈಲ್ಯಾಬ್‌ ಬಾಹ್ಯಾಕಾಶ ನಿಲ್ದಾಣದ ಗಗನಯಾನಿಗಳು ತೆಗೆದ ಚಿತ್ರದಲ್ಲಿ ಕಪ್ಪು ರಂಧ್ರಗಳು ಪತ್ತೆಯಾಗಿದ್ದವು.

 

Author : ಸಂಗ್ರಹ ವರದಿ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited