Untitled Document
Sign Up | Login    
“One India One Rate” ರಿಲಯನ್ಸ್ ಹೊಸ ಮಂತ್ರ !

.

ಭಾರತೀಯ ಟೆಲಿಕಾಂ ಕ್ಷೇತ್ರದ ದಿಗ್ಗಜ ಸಂಸ್ಥೆಗಳಲ್ಲೊಂದಾದ ರಿಲಯನ್ಸ್ ಕಮ್ಯುನಿಕೇಶನ್ಸ್ “One India One Rate” ಎಂಬ ಹೊಸ ಮಂತ್ರ ಜಪಿಸತೊಡಗಿದೆ. ಇದರೊಂದಿಗೆ ಇತರೆ ಟೆಲಿಕಾಂ ಸಂಸ್ಥೆಗಳೊಂದಿಗೆ ದರ ಸಮರದ ಕಹಳೆ ಊದಿದೆ.

ಈ ಯೋಜನೆ ಪ್ರಕಾರ, ರಿಲಯನ್ಸ್ ಮೊಬೈಲ್ ಗ್ರಾಹಕರು ದೇಶದ ಯಾವುದೇ ಮೂಲೆಯ ಜನರೊಂದಿಗೆ ರೋಮಿಂಗ್ ದರವಿಲ್ಲದೆ ಏಕದರದಡಿ ಮಾತನಾಡಬಹಹುದು. ಸ್ಥಳೀಯ ಹಾಗೂ ಎಸ್ ಟಿಡಿ ಕರೆಗಳ ದರ ಕೂಡಾ ಏಕರೂಪಕ್ಕೆ ಇಳಿಸಿರುವ ರಿಲಯನ್ಸ್, ರೋಮಿಂಗ್ ಫ್ರೀ ಎಂದು ಘೋಷಿಸಿದೆ. ಈ ಯೋಜನೆ ಪೋಸ್ಟ್ ಪೇಯ್ಡ್ ಹಾಗೂ ಪ್ರೀ ಪೇಯ್ಡ್ ಗ್ರಾಹಕರಿಗೂ ಅನ್ವಯಿಸುತ್ತದೆ.

ರಿಲಯನ್ಸ್ ಕಂಪನಿಯಯ ಕನ್ಸ್ಯೂಮರ್ ಬಿಸಿನೆಸ್ ವಿಭಾಗದ ಸಿಇಒ ಗುರುದೀಪ್ ಸಿಂಗ್ ಹೇಳುವಂತೆ ಈ ಹೊಸ ಯೋಜನೆ ಪ್ರಕಾರ, ರಿಲಯನ್ಸ್ ಮೊಬೈಲ್ ಗ್ರಾಹಕ ಮುಂಬೈನಲ್ಲಿ ಸಿಮ್ ಆಕ್ಟಿವೇಶನ್ ಮಾಡಿಸಿದ್ದು, ಪ್ರವಾಸ ಮಾಡುವಂಥವರಾಗಿದ್ದರೆ ಅವರು ರೋಮಿಂಗ್ ಆ್ಯಕ್ಟಿವೇಶನ್ ಮಾಡಿಸಬೇಕಾಗಿಲ್ಲ.

ಪ್ರೀಪೇಯ್ಡ್ ಮೊಬೈಲ್ ಗ್ರಾಹಕರ ಯೋಜನೆ 45 ರೂ.ಗಳಿಂದ ಆರಂಭವಾಗುತ್ತಿದ್ದು, ಪ್ರತಿ ನಿಮಿಷದ ಕರೆ ದರ 40 ಪೈಸೆ ಇರಲಿದೆ. ಹೊರ ರಾಜ್ಯದಿಂದ ಬರುವ ಇನ್ ಕಮಿಂಗ್ ಕರೆಗಳು ಸಂಪೂರ್ಣ ಉಚಿತವಾಗಿರಲಿದೆ. ಇದರ ಮೇಲೆ ಯಾವುದೇ ದರ ವಿಧಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಎರಡು ಯೋಜನೆಗಳು ಲಭ್ಯವಿದ್ದು, ಒಂದು 350 ರೂ.ಗಳ ಯೋಜನೆ- ಇದರಲ್ಲಿ ಗ್ರಾಹಕರು 700 ನಿಮಿಷಗಳ ಉಚಿತ ಕರೆ ಮಾಡುವ ಅವಕಾಶವಿದೆ. ಈ 700 ನಿಮಿಷ ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 40 ಪೈಸೆ ದರ ವಿಧಿಸುವುದಾಗಿ ಕಂಪನಿ ತಿಳಿಸಿದೆ. ಇದರ ಜತೆಗೆ 200 ನಿಮಿಷಗಳ ಒಳಬರುವ ಕರೆಗಳೂ ಉಚಿತವಾಗಿದ್ದು, 1 ಜಿಬಿ ಇಂಟರ್ನೆಟ್ ಡಾಟಾ, 100 ಎಸ್ ಎಂ ಎಸ್ ಕೂಡಾ ಸಿಗಲಿದೆ. ಇನ್ನೊಂದು ಯೋಜನೆ 599 ರೂ.ಗಳದ್ದಾಗಿದ್ದು, ಇದರಲ್ಲಿ ಗ್ರಾಹಕರಿಗೆ 1200 ನಿಮಿಷ ಔಟ್ ಗೋಯಿಂಗ್ ಕರೆ ಉಚಿತವಾಗಿದ್ದು, ಅದು ಮೀರಿದರೆ ನಂತರ ಪ್ರತಿ ನಿಮಿಷದ ದರ 30 ಪೈಸೆ. ಇದರಲ್ಲಿ 2 ಜಿಬಿ ಡಾಟಾ, 100 ಎಸ್ ಎಂಎಸ್ ಕೂಡಾ ಸಿಗಲಿದೆ.

 

Author : ಅನಂತ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited