Untitled Document
Sign Up | Login    
ಮಹೀಂದ್ರಾ ರೇವಾ ಎಲೆಕ್ಟ್ರಿಕ್ ಕಾರ್ ಬಿಡುಗಡೆ


ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಇನ್ನು ಮುಂದೆ ಕಾರು ಮನೆಯಿಂದ ಹೊರತರಲು ಹಿಂಜರಿಯುವ ಅಗತ್ಯವಿಲ್ಲ. ಯಾಕಂದ್ರೆ ಮಹೀಂದ್ರಾ ಕಂಪನಿ ನಿಮಗಾಗಿ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ.

ಹೌದು. ಮಹೀಂದ್ರಾ ರೇವಾ ಇ2ಓ ಕಾರನ್ನು ಮಾರುಕಟ್ಟೆಗೆ ತಂದಿದೆ. 4.99 ಲಕ್ಷ ಪಾವತಿಸಿದರೆ ಕಾರು ನಿಮ್ಮದಾಗಲಿದೆ. ಜತೆಗೆ 5 ವರ್ಷಗಳ ಕಾಲ ಮಾಸಿಕ 2,599 ರೂ. ಇಂಧನ ಶುಲ್ಕ ಪಾವತಿಸಬೇಕು.

ಈ 5ವರ್ಷ ಕಾರಿನ ಬ್ಯಾಟರಿಗೆ ಗ್ಯಾರಂಟಿ ನೀಡಲಾಗುತ್ತದೆ ಎಂದು ಬೆಂಗಳೂರಿನಲ್ಲಿ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈ.ಲಿ ಮುಖ್ಯ ನಿರ್ವಹಣಾಧಿಕಾರಿ ಚೇತನ್ ಮೈನಿ ತಿಳಿಸಿದ್ದಾರೆ.

ಈ ಕಾರು ವಿದ್ಯುತ್ ಚಾರ್ಜಿಂಗ್ ಹೊಂದಿದ್ದು, ಮನೆಯಲ್ಲಿಯೇ ಕಾರಿಗೆ ಚಾರ್ಜ್ ಮಾಡಬಹುದು. 5 ಗಂಟೆ ಚಾರ್ಜ್ ಮಾಡಿದರೆ 100ಕಿ.ಮೀ.ದೂರ ಚಲಿಸಬಹುದು. ಅದಕ್ಕಾಗುವ ವೆಚ್ಚ ಕೇವಲ 40ರೂ. ಅಲ್ಲದೇ ಬೆಂಗಳೂರಿನಲ್ಲಿಯೇ 110 ಚಾರ್ಜಿಂಗ್ ಸೆಂಟರ್ ತೆರೆಯಲಾಗುತ್ತಿದೆ. ತ್ವರಿತವಾಗಿ ಚಾರ್ಜ್ ಮಾಡಲು ಫಾಸ್ಟ್ ಚಾರ್ಜ್ ಮಿಷನ್ ಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಕೇವಲ 15 ನಿಮಿಷಗಳಲ್ಲಿ 25 ಕಿ.ಮೀ ಚಲಿಸುವ ಸಾಮರ್ಥ್ಯದಷ್ಟು ಚಾರ್ಜ್ ಮಾಡಬಹುದು ಎಂದು ತಿಳಿಸಿದರು.

 

Author : ಚಂದ್ರಲೇಖಾ ರಾಕೇಶ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited