Untitled Document
Sign Up | Login    
ಎನಿ ಟೈಮ್ ಮಿಲ್ಕ್ (ಎಟಿಎಂ)!

ಎನಿ ಟೈಮ್ ಮಿಲ್ಕ್ !

ಅಟೋಮ್ಯಾಟೆಡ್ ಟೆಲ್ಲರ್ ಮೆಷಿನ್ (ಎಟಿಎಂ)ಗಳಿನ್ನು ಯಾವಾಗ ಬೇಕಿದ್ದರೂ ಹಣ ಒದಗಿಸುವ ಯಂತ್ರಗಳಾಗಿ ಉಳಿದಿಲ್ಲ. ವಿದೇಶಗಳಲ್ಲಿ ಕಪ್ ಕೇಕ್ ಎಟಿಎಂ ಸೇರಿದಂತೆ ಹಲವು ಮಾದರಿಯ ಎಟಿಎಂಗಳು ಗ್ರಾಹಕ ಬಳಕೆಗೆ ಲಭ್ಯವಾಗಿದೆ. ಭಾರತವೂ ಇದೇ ಹಾದಿಯಲ್ಲಿ ನಡೆದಿದ್ದು, ದೇಶದ ಮೊದಲ ಹಾಲಿನ ಎಟಿಎಂ ಗುಜರಾತ್ ನಲ್ಲಿ ಆರಂಭವಾಗಿದೆ. ಅಮೂಲ್ ಕಂಪನಿ ಈ ಎಟಿಎಂ ಯಂತ್ರಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಹೀಗಾಗಿ ಅಲ್ಲಿ ಎಟಿಎಂ ಎಂದರೆ ಎನಿ ಟೈಮ್ ಮಿಲ್ಕ್ ಎಂಬಂತಾಗಿದೆ.

ಅಹಮದಾಬಾದಿನ ಆನಂದ ನಗರದಲ್ಲಿ ಒಂದು ಎಟಿಎಂ ಸ್ಥಾಪಿಸಲಾಗಿದ್ದು, ಭಾನುವಾರ(26.01.2014)ದಿಂದ ಕಾರ್ಯಾಚರಣೆ ಆರಂಭಿಸಿದೆ. 24 ಗಂಟೆಯೂ ಇಲ್ಲಿ ಹಾಲು ಲಭ್ಯವಿರಲಿದೆ. ಖೇಡಾ ಮತ್ತು ಆನಂದ ಜಿಲ್ಲೆಗಳ 1100 ಗ್ರಾಮಗಳಲ್ಲಿ ಇಂಥ ಎಟಿಎಂ ಸ್ಥಾಪನೆಗೆ ಅಮೂಲ್ ಚಿಂತನೆ ನಡೆಸಿದೆ.
ಕಾರ್ಯಾಚರಣೆ: 10 ರೂ. ನೋಟನ್ನು ಎಟಿಎಂ ಯಂತ್ರದೊಳಗೆ ಹಾಕಿದರೆ, ಅದನ್ನು ಸ್ವೀಕರಿಸುವ ಯಂತ್ರ ಸೆನ್ಸರ್ ಮೂಲಕ ನೋಟನ್ನು ಗುರುತಿಸಿ 300 ಮಿ.ಲೀ. "ಅಮೂಲ್ ತಾಜಾ ಮಿಲ್ಕ್'' ಪೌಚನ್ನು ಹೊರ ನೀಡುತ್ತದೆ. ಈ ಎಟಿಎಂಗೆ ರೆಫ್ರಿಜರೇಷನ್ ಸೌಲಭ್ಯ ಅಳವಡಿಸಿರುವ ಕಾರಣ ಹಾಲು ಕೆಡದಂತೆ ಸಂಗ್ರಹಿಸಬಹುದಾಗಿದೆ. ಒಂದು ಎಟಿಎಂ ಯಂತ್ರದಲ್ಲಿ ಗರಿಷ್ಠ 150 ಹಾಲಿನ ಪ್ಯಾಕೆಟ್ ಸಂಗ್ರಹಿಸಿಡಬಹುದಾಗಿದೆ.

ಗ್ರಾಹಕರಿಗೆ ಇದು ಹೊಸ ಅನುಭವವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಇದರತ್ತ ಆಕರ್ಷಿತರಾಗಿದ್ದಾರೆ. ಈ ಯಂತ್ರ ಹೇಗೆ ಕೆಲಸ ನಿರ್ವಹಿಸುತ್ತದೆ ಎಂಬ ಕುತೂಹಲವೂ ಸೇರಿದ್ದು ಉತ್ತಮ ಪ್ರತಿಕ್ರಿಯೆ ಖಚಿತವಾಗಿ ಸಿಗಲಿದೆ ಎಂಬ ವಿಶ್ವಾಸ ಕಂಪನಿಯದ್ದು.

 

Author : ನೆಟ್ ಸಂಚಾರಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited