Untitled Document
Sign Up | Login    
ಮಾರುಕಟ್ಟೆಗೆ ಬಂದಿದೆ ಮೋದಿ, ರಾಹುಲ್ ನೋವು ನಿವಾರಕ ಟ್ಯಾಬ್ಲೆಟ್


ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರ ಟೀ ಶರ್ಟ್, ಪೆನ್ನು, ಹೋಳಿ ಬಣ್ಣ, ಟಿಶ್ಯೂ ಪೇಪರ್ ಗಳನ್ನು ಉದ್ಯಮಿಗಳು ಬಿಡುಗಡೆ ಮಾಡುವ ಮೂಲಕ ಲಾಭಗಳಿಸುವುದು ಗೊತ್ತಿರುವ ವಿಚಾರ. ಆದರೆ ಇನ್ನೊಂದು ಕುತೂಹಲ ವಿಷಯವೆಂದರೆ ಇದೇ ಮೊದಲ ಬಾರಿಗೆ ಔಷಧ ಕಂಪನಿಯೊಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರಲ್ಲಿ ಉತ್ಪನ್ನಗಳನ್ನು ಬಿಡುಗಡೆಮಾಡಿದೆ.

ಐಸಿಐ ಹೆಲ್ತ್ ಕೇರ್ ಎಂಬ ಜೌಷಧ ಕಂಪನಿ ಇತ್ತೀಚೆಗಷ್ತೇ ಮಾರುಕಟ್ಟೆಗೆ ನಮೋ ಟ್ಯಾಬ್ಲೆಟ್ (ಪ್ಯಾರಸೆಟಮಾಲ್ ಮಾತ್ರೆ), ನಮೋನಿ ಜೆಲ್ ಎಂಬ ನೋವು ನಿವಾರಕ ಜೆಲ್, ರಾಗಾ ಫ್ಲಾಮ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಆದರೆ ಕಂಪನಿ ಎಲ್ಲಿಯೂ ನರೆಂದ್ರ ಮೋದಿ ಹೆಸರನ್ನಾಗಲಿ, ರಾಹುಲ್ ಗಾಂಧಿ ಹೆಸರನ್ನಾಗಲಿ ನೇರವಾಗಿ ಪ್ರಸ್ತಾಪಿಸಿಲ್ಲ. ಆದಾಗ್ಯೂ ಮಾರುಕಟ್ಟೆಯಲ್ಲಿ ಈ ನೋವು ನಿವಾರಕ ಮಾತ್ರೆಗಳು, ಜೆಲ್ ಗಳು ಜನಪ್ರಿಯವಾಗಿವೆ.

ನಮೋ ಪ್ಯಾರಸೆಟಮಾಲ್ ಮಾತ್ರೆಯ ಒಂದು ಸ್ಟ್ರೆಪ್ ಗೆ 36 ರೂ ಇದ್ದರೆ, ರಾಗಾ ಮಾತ್ರೆಗೆ 16 ರೂ ದರ ನಿಗದಿ ಮಾಡಲಾಗಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದ 48 ಗಂಟೆಗಳಲ್ಲಿ 20 ಲಕ್ಷ ಸ್ಟ್ರಿಪ್ ಗಳು ಮಾರಾಟವಾಗಿವೆಯಂತೆ.

ಇನ್ನೊಂದು ವಿಚಾರವೆಂದರೆ ಮಾರುಕಟ್ತೆಯ ಕಾರ್ಯತಂತ್ರವನ್ನಾಧರಿಸಿ ಈ ಮಾತ್ರೆಗಳನ್ನು ಮಾರಾಟಮಾಡಲಾಗುತ್ತಿದೆ ಹೊರತು ಇದರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾವು ಯಾವುದೇ ವ್ಯಕ್ತಿ ಅಥವಾ ಪಕ್ಷವನ್ನು ಬೆಂಬಲಿಸಲು ಈ ಮಾತ್ರೆ ಪರಿಚಯಿಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

 

Author : ಲೇಖಾ ಆರ್ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited