Untitled Document
Sign Up | Login    
ಆನ್ ಲೈನ್ ಪ್ರೈವೆಸಿ ಡೋಂಟ್ ಕೇರ್ ಪಾಲಿಸಿ

.

ಇಂಟರ್ನೆಟ್ ನಲ್ಲಿ ಅನುಕೂಲತೆ ಹಾಗೂ ಪ್ರೈವೆಸಿ ನಡುವೆ ಆಯ್ಕೆಯ ಅವಕಾಶ ನೀಡಿದರೆ, ಶೇಕಡ 61ರಷ್ಟು ಭಾರತೀಯರು ಆನ್ ಲೈನ್ ಪ್ರೈವೆಸಿಗಿಂತ ಅನುಕೂಲತೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರಂತೆ!

ಇಎಂಸಿ ಎಂಬ ಐಟಿ ಇನ್ ಫ್ರಾಸ್ಟ್ರೆಕ್ಚರ್ ಕಂಪನಿ ಇತ್ತೀಚೆಗೆ ನಡೆಸಿದ “ಇಎಂಸಿ ಪ್ರೈವೆಸಿ ಇಂಡೆಕ್ಸ್’’ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಆನ್ ಲೈನ್ ಅನುಕೂಲಕ್ಕಾಗಿ ಒಬ್ಬ ಗ್ರಾಹಕ ತನ್ನ ಪ್ರೈವೆಸಿಯನ್ನು ಎಷ್ಟರಮಟ್ಟಿಗೆ ಬಿಟ್ಟುಕೊಡಲು ಸಿದ್ಧನಿದ್ದಾನೆ ಎಂಬ ಬಗ್ಗೆ ಈ ವರದಿ ಬೆಳಕುಚೆಲ್ಲಿದೆ.

ಈ ಸಮೀಕ್ಷೆಗಾಗಿ 15 ದೇಶಗಳ ತಲಾ ಒಂದು ಸಾವಿರ ಇಂಟರ್ನೆಟ್ ಬಳಕೆದಾರರನ್ನು ಇಎಂಸಿ ಸಂಪರ್ಕಿಸಿದೆ. ಪ್ರೈವೆಸಿ ಹಾಗೂ ಅನುಕೂಲದ ನಡುವೆ ಆಯ್ಕೆ ಇಟ್ಟಾಗ ಭಾರತದ ಶೇಕಡ 61ರಷ್ಟು ಬಳಕೆದಾರರು ಪ್ರೈವೆಸಿ ಬಿಟ್ಟು ಅನುಕೂಲಕ್ಕೆ ಆದ್ಯತೆ ನೀಡಿದ್ದು ಕಂಡುಬಂದಿದೆ. ಈ ಪ್ರಮಾಣ ಇತರೆ ದೇಶಗಳಿಗಿಂತ ಭಾರತದಲ್ಲೇ ಹೆಚ್ಚಾಗಿದ್ದು 15 ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಜರ್ಮನಿ ಕೊನೇ ಸ್ಥಾನದಲ್ಲಿದ್ದು ಶೇಕಡ 36ರಷ್ಟು ಬಳಕೆದಾರರಷ್ಟೇ ಪ್ರೈವೆಸಿ ಬಿಟ್ಟುಕೊಡಲು ಸಿದ್ಧರಾಗಿರುವುದು ಕಂಡುಬಂದಿದೆ.

.
ಆನ್ ಲೈನ್ ಪ್ರೈವೆಸಿ ವಿಚಾರದಲ್ಲಿ ಭಾರತೀಯರಮಟ್ಟಿಗೆ ಇದೊಂದು ಎಚ್ಚರಿಕೆ ಗಂಟೆ! ಇದೇ ಸಮೀಕ್ಷೆಯಲ್ಲಿ ಶೇಕಡ 51ರಷ್ಟು ಭಾರತೀಯರು ಆನ್ ಲೈನ್ ನಲ್ಲಿ ತಮಗೆ ಕನಿಷ್ಠ ಪ್ರೈವೆಸಿ ಇದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರೈವೆಸಿ ಹಾಗೂ ವೈಯಕ್ತಿಕ ಡಾಟಾ ಸುರಕ್ಷತೆ ಶೇಕಡ 59ರಷ್ಟು ಕುಸಿತ ಕಾಣಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ಶೇಕಡಾ 59ರಷ್ಟು ಮಹಿಳೆಯರು ತಮ್ಮ ಆನ್ ಲೈನ್ ಪ್ರೈವೆಸಿಯನ್ನು ಅನುಕೂಲಕ್ಕಾಗಿ ಬಿಟ್ಟುಕೊಡಲು ಸಿದ್ಧರಿಲ್ಲ. ಹಾಗೆಯೇ ಶೇಕಡ 43ರಷ್ಟು ಪುರುಷರು ಕೂಡಾ ಇದೇ ಕೆಟಗರಿಗೆ ಸೇರಿದ್ದಾರೆ.

ಜಾಗತಿಕ ಮಟ್ಟದ ಲೆಕ್ಕಾಚಾರ ತೆಗೆದುಕೊಂಡರೆ, ಶೇಕಡ 27ರಷ್ಟು ಇಂಟರ್ನೆಟ್ ಬಳಕೆದಾರರು ಆನ್ ಲೈನ್ ಪ್ರೈವೆಸಿಯನ್ನು ಅನುಕೂಲಕ್ಕಾಗಿ ಬಿಟ್ಟುಕೊಡಲು ಸಿದ್ಧವಾಗಿರುವುದು ಕಂಡುಬಂದಿದೆ. ಬಹಳಷ್ಟು ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಇಂಟರ್ನೆಟ್ ಬಳಕೆದಾರರ ಪೈಕಿ ಶೇಕಡ 52ರಷ್ಟು ಪ್ರೈವೆಸಿ ಜತೆಗೆ ರಾಜೀ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದು ಜಾಗತಿಕ ಮಟ್ಟಕ್ಕಿಂತಕ್ಕಿಂತ ಹೆಚ್ಚೇ ಆಗಿರುವುದು ವಿಶೇಷ.

ಪ್ರೈವೆಸಿಗೆ ಕುಂದು ಉಂಟಾದಾಗ ಅಥವಾ ಖಾಸಗಿ ಡಾಟಾ ಕಳುವಾದಾಗ ಆ ಬಗ್ಗೆ ದೂರು ದಾಖಲಿಸುವ ಗೋಜಿಗೇ ಹೋಗದವರು ಭಾರತದ ಶೇಕಡ 64ರಷ್ಟು ಬಳಕೆದಾರರು. ಇನ್ನು ಶೇಕಡ 21ರಷ್ಟು ಬಳಕೆದಾರರು ಪ್ರೈವೆಸಿ ಸ್ಟೇಟ್ ಮೆಂಟ್ ಗಳನ್ನೆ ಓದಿರಲ್ಲ. ಶೇಕಡ 41ರಷ್ಟು ಬಳಕೆದಾರರು ಯಾವತ್ತೂ ಪಾಸ್ವರ್ಡ್ ಬದಲಾಯಿಸಿರಲ್ಲ. ಶೇಕಡ 21ರಷ್ಟು ಬಳಕೆದಾರರು ಪ್ರೈವೆಸಿ ಸೆಟ್ಟಿಂಗ್ ಕೂಡಾ ಬದಲಾಯಿಸಿರಲ್ಲ. ಮೊಬೈಲ್ ನಲ್ಲಿ ಸಾಮಾಜಿಕ ತಾಣ ಬಳಸುವ ಬಳಕೆದಾರರು ಅದಕ್ಕೆ ಪಾಸ್ವರ್ಡ್ ಸೆಟ್ ಮಾಡಿರಲ್ಲ.

ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಸಾಮಾಜಿಕ ತಾಣದಲ್ಲಿರುವ ಶೇಕಡ 84ರಷ್ಟು ಭಾರತೀಯರು ತಮ್ಮ ನಡವಳಿಕೆ ಅದರಲ್ಲೂ ಖರ್ಚು ಮಾಡುವ ನಡವಳಿಕೆಯನ್ನು ಅಧ್ಯಯನ ಮಾಡುವ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ, ಆನ್ ಲೈನ್ ಪ್ರೈವೆಸಿ ಸೆಟ್ಟಿಂಗ್ ಬದಲಾಯಿಸಿರುವುದಿಲ್ಲ.
ಒಟ್ಟಾರೆ ಈ ಅಧ್ಯಯನ ನೆಟ್ ಬಳಸುವ ಭಾರತೀಯ ಬಳಕೆದಾರರ ನಡುವೆ ಜಾಗೃತಿಯ ಕೊರತೆ ಇರುವುದನ್ನು ಎತ್ತಿ ತೋರಿಸಿದೆ.

ಸಮೀಕ್ಷಾ ವರದಿಯ ಕೊಂಡಿ ಇಲ್ಲಿದೆ: http://www.emc.com/campaign/privacy-index/india.htm

 

Author : ಅರವಿಂದ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited