Untitled Document
Sign Up | Login    
ಬಿಎಸ್ಸೆನ್ನೆಲ್ ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ !

.

ಭಾರತದ ಸಾರ್ವಜನಿಕ ಕ್ಷೇತ್ರದ ಟೆಲಿಕಾಂ ನಿರ್ವಾಹಕ ಕಂಪನಿ ಬಿಎಸ್ಎನ್ಎಲ್ ತನ್ನ ಮೊಬೈಲ್ ಬಳಕೆದಾರರಿಗೆ ಹೊಸ ಕೊಡುಗೆಯೊಂದನ್ನು ಮಂಗಳವಾರ ಘೋಷಿಸಿದೆ. ಮೊಬೈಲ್ ಗಳಲ್ಲಿ ಬಿಎಸ್ಸೆನ್ನೆಲ್ ಸಿಮ್ ಬಳಸುತ್ತಿರುವವರು ಇನ್ಮೇಲೆ ಇಂಟರ್ನೆಟ್ ಸಂಪರ್ಕ ಇಲ್ಲದೇ ಇದ್ದರೂ, ಫೇಸ್ ಬುಕ್ ನೋಡಬಹುದು!.

ಇದು ಹೇಗೆ ಎಂದು ಹುಬ್ಬೇರಿಸಬೇಡಿ. ಯುಎಸ್ಎಸ್ ಡಿ (Unstructured supplementary service data) ತಂತ್ರಜ್ಞಾನ ಬಳಸಿಕೊಂಡು ಬಿಎಸ್ಸೆನ್ನೆಲ್ ಈ ಕೊಡುಗೆ ಘೋಷಿಸಿದೆ. ಇದಕ್ಕಾಗಿ ಬಿಎಸ್ಸೆನ್ನೆಲ್ ಗುರ್ಗಾಂವ್ ಹಾಗೂ ಸಿಂಗಾಪುರ ಮೂಲದ ಮೊಬೈಲ್ ಅಪ್ಲಿಕೇಶನ್ ಪೂರೈಕೆದಾರ ಕಂಪನಿ U2opia Mobile ಜತೆ ಒಪ್ಪಂದ ಮಾಡಿಕೊಂಡಿದೆ. ಕಳೆದ ವರ್ಷ U2opia Mobile ಕಂಪನಿ ಇದೇ ಮಾದರಿಯಲ್ಲಿ ಟ್ವಿಟರ್ ಖಾತೆ ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಈ ಸೌಲಭ್ಯದಲ್ಲಿ ಬಳಕೆದಾರರು ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ ಟ್ವಿಟರ್ ಖಾತೆ ನೋಡಬಹುದಾಗಿತ್ತು.

ಈ ನೂತನ ಸೌಲಭ್ಯವನ್ನು ಬಿಎಸ್ಸೆನ್ನೆಲ್ ಬಳಕೆದಾರರು, ಫೇಸ್ ಬುಕ್ ಖಾತೆ ನೋಡುವುದಕ್ಕಷ್ಟೇ ಅಲ್ಲ, ಸ್ಟೇಟಸ್ ಅಪ್ಡೇಟ್ ಮಾಡುವುದಕ್ಕೆ, ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲು, ಫ್ರೆಂಡ್ ಖಾತೆಯ ಗೋಡೆ ಮೇಲೆ ಬರೆಯಲು, ಹುಟ್ಟುಹಬ್ಬದ ದಿನಾಂಕ ನೆನಪಿಸಿಕೊಂಡು ಸ್ನೇಹಿತರಿಗೆ ಶುಭಹಾರೈಸ ಕೆಲಸಕ್ಕೂ ಬಳಸಬಹುದಾಗಿದೆ.

ಈ ಸೌಲಭ್ಯ ಈಗಾಗಲೇ ಲಭ್ಯವಿದ್ದು, ಮೂರು ದಿನದ ಪ್ಯಾಕೇಜ್ ಗೆ 4 ರೂ., ವಾರದ ಪ್ಯಾಕ್ ಗೆ 10 ರೂ. ತಿಂಗಳ ಪ್ಯಾಕ್ ಗೆ 20 ರೂ. ದರ ನಿಗದಿ ಮಾಡಿರುವುದಾಗಿ ಬಿಎಸ್ಸೆನ್ನೆಲ್ ತಿಳಿಸಿದೆ.

ಏನಿದು ಯುಎಸ್ ಎಸ್ ಡಿ ತಂತ್ರಜ್ಞಾನ?: ವಾಸ್ತವದಲ್ಲಿದು ಟೆಕ್ಸ್ಟ್ ಆಧಾರಿತ ಕಮಾಂಡ್ ಆಗಿದ್ದು, ಇದನ್ನು ಟೆಲಿಕಾಂ ಆಪರೇಟರ್ ಗೆ ರವಾನಿಸಲಾಗುತ್ತದೆ. ಒಂದು ರೀತಿಯಲ್ಲಿ ಎಸ್ ಎಂಎಸ್ ಕಳುಹಿಸಿದಂತೆಯೇ ಅನ್ನಿ. ಆ ಟೆಕ್ಸ್ಟ್ ಸಂದೇಶವನ್ನು ಆಧರಿಸಿ ಅದಕ್ಕೆ ಟೆಲಿಕಾಂ ಆಪರೇಟರ್ ಪ್ರತ್ಯುತ್ತರ ರವಾನಿಸುತ್ತಾರೆ. ಈ ತಂತ್ರಜ್ಞಾನವನ್ನು ಪ್ರೀ ಪೇಯ್ಡ್ ಕಾಲ್ ಬ್ಯಾಕ್ ಸೇವೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಸಬಹುದಾಗಿದೆ.

 

Author : ಬೆಂ.ಸ. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited