Untitled Document
Sign Up | Login    
ಹೊಸ ವರ್ಷಕ್ಕೆ ’ದುಬಾರಿ’ ಗಿಫ್ಟ್


ಹೊಸ ವರ್ಷಕ್ಕೆ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಬಯಸಿದ್ದವರಿಗೆ ಇದೀಗ ಕೇಂದ್ರ ಸರ್ಕಾರ ವಾಹನ, ಗೃಹೋಪಯೋಗಿ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ದುಬಾರಿ ಕೊಡುಗೆ ನೀಡಿದೆ. ಹೌದು, ಜ.1ರಿಂದ ಕಾರು, ಬೈಕ್‌ ಮತ್ತಿತರ ವಾಹನಗಳು ಹಾಗೂ ಗೃಹೋಪಯೋಗಿ ವಸ್ತುಗಳು ಬೆಲೆ ದುಬಾರಿಯಾಗಲಿದೆ.

ಇದು ಅಬಕಾರಿ ಸುಂಕ ವಿನಾಯಿತಿಯನ್ನು ರದ್ದಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಎಫೆಕ್ಟ್. ಗೃಹ ಬಳಕೆ ವಸ್ತುಗಳು ಹಾಗೂ ಆಟೋ ಮೊಬೈಲ್‌ ಕ್ಷೇತ್ರಗಳಿಗೆ ನೀಡಲಾಗುತ್ತಿದ್ದ ಅಬಕಾರಿ ಸುಂಕ ವಿನಾಯಿತಿಯನ್ನು ಕೇಂದ್ರ ಸರ್ಕಾರ ಜ.1ರಿಂದ ಅನ್ವಯವಾಗುವಂತೆ ರದ್ದು ಮಾಡಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ವಿತ್ತೀಯ ಕೊರತೆಯನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಯುಪಿಎ ಸರ್ಕಾರ, ಅರ್ಥ ವ್ಯವಸ್ಥೆಯನ್ನು ಬಲಪಡಿಸಲು ಈ ಎರಡೂ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಸಲುವಾಗಿ ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ಅಬಕಾರಿ ಸುಂಕ ವಿನಾಯಿತಿ ನೀಡಿತ್ತು. ಬಳಿಕ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಬಂದ ಬಳಿಕ, ಈ ಅಬಕಾರಿ ಸುಂಕ ವಿನಾಯಿತಿಯನ್ನು ಆರು ತಿಂಗಳ ಮಟ್ಟಿಗೆ ವಿಸ್ತರಿಸಿತ್ತು. ಇದೀಗ ಡಿ.31ಕ್ಕೆ ಈ ವಿಸ್ತರಣೆ ಅವಧಿ ಮುಕ್ತಾಯವಾಗಿದ್ದು, ಹೊಸ ವರ್ಷದಿಂದ ಈ ಎರಡೂ ಕ್ಷೇತ್ರಗಳಿಗೆ ನೀಡಲಾಗುತ್ತಿದ್ದ ಅಬಕಾರಿ ಸುಂಕ ವಿನಾಯಿತಿಯನ್ನು ರದ್ದು ಪಡಿಸಲಾಗಿದೆ.

ಆಟೋಮೊಬೈಲ್‌ ಕ್ಷೇತ್ರದ ಸಣ್ಣ ಕಾರು, ಸ್ಕೂಟರ್‌, ಮೋಟರ್‌ ಸೈಕಲ್‌ ಹಾಗೂ ವಾಣಿಜ್ಯ ಉದ್ದೇಶಿತ ವಾಹನಗಳ ಅಬ ಕಾರಿ ಸುಂಕವನ್ನು ಶೇ.12 ರಿಂದ ಶೇ.8ಕ್ಕೆ ಇಳಿಸಲಾಗಿತ್ತು. ನ್ಪೋರ್ಟ್‌ ಯುಟಿಲಿಟಿ ವಾಹನಗಳ(ಎಸ್‌ಯುವಿ) ಅಬಕಾರಿ ಸುಂಕವನ್ನು ಶೇ.30 ರಿಂದ 24 ಕ್ಕೆ ಕಡಿಮೆ ಮಾಡಲಾಗಿತ್ತು. ಇದೇ ರೀತಿ ಮಧ್ಯಮ ಪ್ರಮಾಣದ ಕಾರುಗಳಿಗೆ ಶೇ.24 ರಿಂದ ಶೇ.20, ದೊಡ್ಡ ಪ್ರಮಾಣದ ಕಾರುಗಳಿಗೆ ಶೇ.27 ರಿಂದ ಶೇ.24ಕ್ಕೆ ಹಾಗೂ ಗೃಹೋಪಯೋಗಿ ವಸ್ತುಗಳ ಕ್ಷೇತ್ರಗಳಿಗೆ ಶೇ.12 ರಿಂದ ಶೇ.10ಕ್ಕೆ ಸುಂಕ ಕಡಿತ ಮಾಡಲಾಗಿತ್ತು.

ಸರ್ಕಾರದ ನಿರ್ಣಯದಿಂದ ಟಾಟಾ ನ್ಯಾನೊ, ಮಾರುತಿ ಆಲ್ಟೋ 800, ಹುಂಡೈ ಕಾರುಗಳ ಬೆಲೆ ಸುಮಾರು 7,900 ರಿಂದ 16 ರೂ. ಸಾವಿರ ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.

 

Author : . .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited