Untitled Document
Sign Up | Login    
ಕಾರುಗಳಿಗೆ ಅಪಘಾತ ಪರೀಕ್ಷೆ ಕಡ್ಡಾಯ

(ಸಾಂದರ್ಭಿಕ ಚಿತ್ರ)

ವಿದೇಶಗಳಲ್ಲಿರುವಂತೆ ಇನ್ನು ಭಾರತದಲ್ಲೂ ಕಾರುಗಳು ಅಪಘಾತ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ರಸ್ತೆಗಿಳಿಯಲು ಅನುಮತಿ ಸಿಗುತ್ತದೆ.

ಭಾರತದ ಹಲವು ಜನಪ್ರಿಯ ಮಾಡೆಲ್‌ ಕಾರುಗಳು ವಿದೇಶದಲ್ಲಿ ನಡೆಸಿದ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫ‌ಲವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ವರ್ಷ ಅಕ್ಟೋಬರ್‌ನಿಂದ ಕಾರುಗಳಿಗೆ ಡಿಕ್ಕಿ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.

ಅಲ್ಲದೇ ಏರ್‌ ಬ್ಯಾಗ್‌, ಆ್ಯಂಟಿ ಲಾಕ್‌ ಬ್ರೇಕಿಂಗ್‌ ಸಿಸ್ಟಮ್‌, ಚೈಲ್ಡ್‌ ರೆಸಿಸ್ಟಂಟ್‌ ಸಿಸ್ಟಮ್‌, ಸೀಟ್‌ ಬೆಲ್ಟ್ ರಿಮೈಂಡರ್‌ ಇತ್ಯಾದಿ ಮೂಲ ಸುರಕ್ಷಾ ವಿಧಾನಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ. ಈ ನಿಯಮದಿಂದಾಗಿ ಕಾರುಗಳು ಬೆಲೆ 30,000-50,000 ರೂ.ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ.

2015, ಮಾರ್ಚ್‌ನಲ್ಲಿ ಸರ್ಕಾರ, ಅಪಘಾತ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಅಧಿಸೂಚನೆ ಹೊರಡಿಸಲಿದೆ. ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಉತ್ಪಾದಕರಿಗೆ 6 ತಿಂಗಳ ಕಾಲಾವಕಾಶ ನೀಡಲಾಗುತ್ತಿದೆ. ಅಕ್ಟೋಬರ್‌ ಬಳಿಕ ಎಲ್ಲ ಕಾರುಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಹಳೆ ಕಾರುಗಳಿಗೆ ಸುರಕ್ಷಾ ವಿಧಾನಗಳನ್ನು ಅಳವಡಿಸಲು ಎರಡು ವರ್ಷದ ಕಾಲಾವಕಾಶ ಇದೆ.

ನಿರ್ದಿಷ್ಟ ವೇಗದಲ್ಲಿ ಕಾರುಗಳನ್ನು ಚಲಾಯಿಸಿ ಡಿಕ್ಕಿ ಹೊಡೆಸಿ ಪರಿಣಾಮವನ್ನು ಪರೀಕ್ಷಿಸುವುದಕ್ಕೆ ಡಿಕ್ಕಿ ಪರೀಕ್ಷೆ (crash test) ಎನ್ನುತ್ತಾರೆ. ಡಿಕ್ಕಿ ಪರೀಕ್ಷೆಯ ತೀವ್ರತೆ ಒಳಗೆ ಕುಳಿತ ಪ್ರಯಾಣಿಕರು ಸಾಯುವ ಅಥವಾ ಮರಣಾಂತಿಕವಾಗಿ ಗಾಯಗೊಳ್ಳುವಂತಿದ್ದರೆ ಅಂತಹ ಕಾರುಗಳು ಫೇಲ್‌ ಆಗುತ್ತವೆ. ಭಾರತದಲ್ಲಿ ತಾಸಿಗೆ 56 ಕಿ.ಮೀ. ವೇಗದ ಡಿಕ್ಕಿಯನ್ನು ತಾಳಿಕೊಳ್ಳುವ ಕ್ಷಮತೆಯನ್ನು ಮಾನದಂಡವೆಂದು ನಿಗದಿಪಡಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ತಾಸಿಗೆ 46 ಕಿ.ಮೀ. ವೇಗದ ಡಿಕ್ಕಿಯನ್ನು ತಾಳಿಕೊಳ್ಳುವ ಕಾರುಗಳಿಗೆ ಅನುಮತಿ ಸಿಗುತ್ತದೆ.

ಇತ್ತೀಚೆಗೆ ಮಾರುತಿ ಸ್ವಿಫ್ಟ್ ಮತ್ತು ನಿಸ್ಸಾನ್ ಕಂಪನಿಯ ಡಟ್ಸನ್‌ ಗೋ ಕಾರುಗಳು ಡಿಕ್ಕಿ ಪರೀಕ್ಷೆಯಲ್ಲಿ ಫೇಲ್‌ ಆಗಿವೆ. ಇದಕ್ಕೂ ಮೊದಲು ಮಾರುತಿ ಆಲ್ಟೊ 800, ಟಾಟಾ ನ್ಯಾನೊ, ಫೋರ್ಡ್‌ ಫಿಗೊ, ಹುಂಡೈ ಐ10 ಮತ್ತು ಫೋಕ್ಸ್‌ವ್ಯಾಗನ್‌ ಪೋಲೋ ಜಾಗತಿಕ ಎಸಿಎಪಿ ನಡೆಸುವ ಡಿಕ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫ‌ಲವಾಗಿದ್ದವು.

ಈ ಹಿನ್ನಲೆಯಲ್ಲಿ ಕೆಂದ್ರ ಸರಕಾರ ವಾಹನ ಸವಾರರ ಸುರಕ್ಷತೆಗಾಗಿ ಈ ಕೆಳಗಿನ ಸುರಕ್ಷಾ ನಿಯಮಗಳನ್ನು ಕಡ್ದಾಯಗೊಳಿಸಲಿದೆ-


. 2015, ಅಕ್ಟೋಬರ್‌ 15ರಿಂದ ಡಿಕ್ಕಿ ಪರೀಕ್ಷೆ ಮಾಡಿಸಬೇಕು
. ಕಡ್ಡಾಯವಾಗಿ ಏರ್‌ ಬ್ಯಾಗ್‌ ಅಳವಡಿಸಬೇಕು
. ಹಳೆ ಕಾರುಗಳಿಗೆ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳಲು 2017ರ ತನಕ ಕಾಲಾವಕಾಶ

ಈ ನಿಯಮಗಳಿಂದಾಗಿ ಕಾರುಗಳು ಬೆಲೆ 50,000 ರೂ. ತನಕ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೆ, ಸುರಕ್ಷಾ ವಿಧಾನ ಅಳವಡಿಸದ ಕಾರುಗಳಿಗೆ ಭಾರೀ ದಂಡ ವಿಧಿಸಲಾಗುವುದು.

 

Author : ಲೇಖಾ ..

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited