Untitled Document
Sign Up | Login    
ಎಕ್ಸ್ಎಸ್ ಪವರ್ ಕಾರ್ಡ್ 'ಸ್ಮಾರ್ಟ್' ಚಾರ್ಚರ್ !

ವಾಲೆಟ್ ಒಳಗಿಂದ ಹೊರಗೆದ್ದು ಕಾಣುತ್ತಿರುವ ಎಕ್ಸ್ಎಸ್ ಪವರ್ ಕಾರ್ಡ್

ನಿರಂತರ ಬಳಕೆಯಲ್ಲಿರುವ ಸ್ಮಾರ್ಟ್ ಫೋನ್ ಗಳಲ್ಲಿ ಬಹಳ ಹೊತ್ತು ಬ್ಯಾಟರಿ ಚಾರ್ಜ್ ಉಳಿದುಕೊಳ್ಳುವುದಿಲ್ಲ. ಪ್ರಯಾಣದಲ್ಲಿದ್ದಾಗ ಅಥವಾ ಇನ್ನಾವುದೋ ಪ್ರಮುಖ ಮೀಟಿಂಗ್ ಅಟೆಂಡ್ ಮಾಡುವುದಕ್ಕೆ ಹೋದಾಗ ಇಂತಹ ಸಮಸ್ಯೆಯಿಂದಾಗುವ ಪಡಿಪಾಟಲು ತಪ್ಪಿಸುವುದಕ್ಕೆ ಸಿದ್ಧವಾಗುತ್ತಿದೆ 'ಎಕ್ಸ್ಎಸ್ ಪವರ್ ಕಾರ್ಡ್' !

ಏನಿದು ಎಕ್ಸ್ಎಸ್ ಪವರ್ ಕಾರ್ಡ್ ಎಂದು ಹುಬ್ಬೇರಿಸಬೇಡಿ. ನಿಮ್ಮ ವಾಲೆಟ್ ಒಳಗಡೆ ನಿಲ್ಲಬಹುದಾದ ಪೋರ್ಟೆಬಲ್ ಸ್ಮಾರ್ಟ್ ಫೋನ್ ಚಾರ್ಜರ್ ಇದು. ಭಾರತದಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆ ವಿಸ್ತರಿಸುತ್ತಿದೆ. ಆದರೆ, ಅದರ ಬಳಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಗೆ ಇನ್ನಷ್ಟೇ ಪರಿಹಾರ ಸಿಗಬೇಕಿದೆ. ಇಂತಹ ಸಮಸ್ಯೆಗಳಲ್ಲಿ ಪ್ರಮುಖವಾದುದು ಬ್ಯಾಟರಿಯಲ್ಲಿನ ಚಾರ್ಜ್ ಸಮಸ್ಯೆ. ಬಹುತೇಕ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಗಳ ಬ್ಯಾಟರಿಗಳು 1560 ಎಂಎಎಚ್ ನಿಂದ 2800 ಎಂಎಎಚ್ ಇರುತ್ತದೆ.

ಅಂದ ಹಾಗೆ ಎಕ್ಸ್ಎಸ್ ಪವರ್ ಕಾರ್ಡಿನ ಇನ್ನೊಂದು ವಿಶೇಷವೇನೆಂದರೆ ಇದರಲ್ಲಿ ಇನ್ ಬಿಲ್ಟ್ ಚಾರ್ಜಿಂಗ್ ವ್ಯವಸ್ಥೆ ಮತ್ತು ಡಾಟಾ ಸ್ಟೋರೇಜ್ ಸಾಮರ್ಥ್ಯ. ಡಾಟಾ ಕೇಬಲ್ ಮೂಲಕವೂ ನೀವು ಈ ಕಾರ್ಡ್ ಉಪಯೋಗಿಸಿ ಸ್ಮಾರ್ಟ್ ಫೋನ್ ಚಾರ್ಜ್ ಮಾಡಿಕೊಳ್ಳಬಹುದು. ಹೀಗೆ ಮಾಡುವಾಗ ಮೊದಲು ಸ್ಮಾರ್ಟ್ ಫೋನ್ ಚಾರ್ಜ್ ಆಗುತ್ತದೆ. ಬಳಿಕ ಕಾರ್ಡಿನಲ್ಲಿ ಪವರ್ ಉಳಿಕೆಯಾಗಿರುತ್ತದೆ. ಇದನ್ನು ಪ್ರಯಾಣದ ವೇಳೆ ಹಾಗೂ ತುರ್ತು ಸಂದರ್ಭಗಳಲ್ಲಿ ಫೋನ್ ಚಾರ್ಜ್ ಮಾಡಲು ಬಳಸಬಹುದಾಗಿದೆ. ಅಷ್ಟೇ ಅಲ್ಲ, ವೇಗವಾಗಿ ಚಾರ್ಜ್ ಮಾಡುವ ಮತ್ತು ಸಾವಧಾನವಾಗಿ ಚಾರ್ಜ್ ಮಾಡುವ ಆಯ್ಕೆಯೂ ಇಲ್ಲಿದೆ.

ಮೊದಲ ಮಾದರಿಯಷ್ಟೇ ಸಿದ್ದವಾಗಿದೆ. 8/16/32 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಮಾದರಿಯಲ್ಲಿ ಚಾರ್ಜರ್ ಗಳು ಲಭ್ಯವಿದ್ದು, ಇದರ ಕನಿಷ್ಠ ದರ 2000 ರೂ. ಮುಂಬಯಿ ಮೂಲದ ಕ್ಸೈರಾ ಎಂಬ ಹೊಸ ಕಂಪನಿ ಇಂಥದ್ದೊಂದು ವಿನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುವ ಸಿದ್ಧತೆಯಲ್ಲಿದ್ದು, ಹಣಕಾಸಿನ ನೆರವಿಗಾಗಿ ಎದುರು ನೋಡುತ್ತಿದೆ. ಸಹೇಜ್ ಸೇಥಿ, ಅರ್ಮಾನ್ ಗಾಂಧಿ, ಅರ್ಜಾನ್ ಇರಾನಿ ಎಂಬ ತ್ರಿಮೂರ್ತಿಗಳೇ ಇದರ ರೂವಾರಿಗಳು.

 

Author : ಅಮರ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited