Untitled Document
Sign Up | Login    
ಹತ್ತೊಂಬತ್ತನೆ ಶತಮಾನದ 1872 ರ ಅಧ್ಯಯನ ಪರಂಪರೆಯ ಮುಂದುವರಿಕೆ


ನಾಡಿನ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ  ಜನಪದ ಅಂಶಗಳನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ.ದಾರಿಯಲ್ಲಿ ಹೋಗಿ ಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ. ಎಂದು ತಿಳಿಸಿದ ಕರಾವಳಿ ಕರ್ನಾಟಕದ ತುಳುನಾಡಿನ ಜಾನಪದ ಸಂಶೋಧಕರಲ್ಲಿ ಪ್ರಮುಖರಾಗಿರುವ ಡಾ. ವಾಮನ ನಂದಾವರ ಅವರು ಈ ಕೃತಿಯ ಮುನ್ನುಡಿಯಲ್ಲಿ ವ್ಯಕ್ತಪಡಿಸಿದ್ದು ಹೀಗೆ. 

ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ  ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ.
ಡಾ. ಲಕ್ಷ್ಮೀ ಜಿ ಪ್ರಸಾದ ಅವರ ಮಹತ್ವದ  20 ನೇ  ಸಂಶೋಧನಾ ಕೃತಿ  ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ:  ಒಂದು ವಿಶ್ಲೇಷಣಾತ್ಮಕ ಅಧ್ಯಯನವು  ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ  ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧ.

ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ  ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ, ವಿಧಾನಗಳ ಕುರಿತು ತಿಳಿಸಲಾಗಿದೆ.

ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್, ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ.
ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಅನೇಕ ದೈವಗಳ ಬಗೆಗೆ ಅಧ್ಯಯನ ನಡೆಸಿದ ಡಾ. ಲಕ್ಷ್ಮೀ ಜಿ ಪ್ರಸಾದ ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ.

ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸಿ ಸರ್ಪ ಸಂಸ್ಕಾರ, ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ ಮೊದಲಾದ ಇಪ್ಪತ್ತು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿದ್ದಾರೆ.

ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ  ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.

ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ  ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್, ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.

ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ, ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ಒಂದು ಕುಂದು ನಲುವತ್ತು ದೈವಗಳು筑, ಕಿನ್ನಿಮಾಣಿ ಪೂಮಾಣಿ, ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ.

ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ  ಒಂಬತ್ತನೆಯ ಅಧ್ಯಾಯದಲ್ಲಿ  ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ  ವಿವರಗಳನ್ನು  ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವಯತ್ನ ಮಾಡಲಾಗಿದೆ  .
ಡಾ. ಲಕ್ಷ್ಮೀ ಜಿ ಪ್ರಸಾದ ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ.ಇವರಿಗೆ  ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ.

ಈ ಶೋಧಕಿ ಕಂಡುಕೊಂಡ ಉರವ筑, 挿ಎರುಬಂಟೆ筑, 挿ಅಕ್ಕ ಬೋಳಾರಿ ಗೆ 筑, 挿ಅಜ್ಜ ಬಳಯ・ಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ಕುಕ್ಕೆತ್ತಿ-ಬಳ್ಳು筑, 挿ಪರವ ಭೂತ筑, 挿ಕನ್ನಡ ಬೀರ筑, 挿ಕುಂಡ-ಮಲ್ಲು筑, 挿ಕುಲೆಮಾಣಿಗ筑, 挿ಅಚ್ಚು ಬಂಗೇತಿ・ಮೊದಲಾದ 82ರಷ್ಟು ತುಂಡು  ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ ಮೊದಲಾದವರು ತೋರಿಸಿಕೊಟ್ಟ ಹಾದಿಯಿದೆ. 1872, ಮಾರ್ಚ್ ತಿಂಗಳ 23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು.

ಲೇಖಕರ ಕಿರು ಪರಿಚಯ:

ಪಿ ಎಚ್ ಡಿ ಪದವಿ ಪುರಸ್ಕೃತ ಹಾಗೂ ಕನ್ನಡ ,ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕಾಸರಗೋಡಿನ ಕೋಳ್ಯೂರು ಮೂಲದ ಗಡಿನಾಡ ಕನ್ನಡತಿ ಲಕ್ಷ್ಮೀ ಜಿ ಪ್ರಸಾದ ಅವರು ಮೀಯಪದವುನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಕೊಡ್ಲಮೊಗರಿನ ವಾಣಿವಿಜಯ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಿಕ್ಶಣವನ್ನು ಪಡೆದರು. ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಈಗ ತಮ್ಮ ಎರಡನೆಯ ಪಿಎಚ್.ಡಿ ಪದವಿಗಾಗಿ ಸಂಶೋಧನಾ ಮಹಾ ಪ್ರಬಂಧವನ್ನು ದ್ರಾವಿಡ ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.

ನಾಡಿನ ಜಾನಪದ ಇತಿಹಾಸ ಸಂಸ್ಕೃತಿ ಕುರಿತು ಸಂಶೋಧನೆ ನಡೆಸಿದ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ತುಳುನಾಡಿನ ಅಪೂರ್ವ ಭೂತಗಳು ,ಕನ್ನಡ ತುಳು ಜಾನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ,ದೈವಿಕ ಕಂಬಳ ಕೋಣ ,ತುಂಡು ಭೂತಗಳು -ಒಂದು ಅಧ್ಯಯನ ,ತುಳು ಪಾದ್ದನಗಳಲ್ಲಿ ಸ್ತ್ರೀ ,ಅರಿವಿನಂಗಳದ ಸುತ್ತ (ಶೈಕ್ಷಣಿಕ ಲೇಖನಗಳು ),ಕಂಬಳ ಕೋರಿ ನೇಮ ,ಬೆಳಕಿನೆಡೆಗೆ ,ಪಾಡ್ದನ ಸಂಪುಟ ,ತುಳು ಜನಪದ ಕವಿತೆಗಳು,ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ,ಭೂತಗಳ ಅದ್ಭುತ ಜಗತ್ತು ಮೊದಲಾದ 20 ಕೃತಿಗಳನ್ನು ರಚಿಸಿದ್ದಾರೆ.

ಪುಸ್ತಕದ ವಿವರಗಳು:
ಪುಸ್ತಕದ ಹೆಸರು : ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ
(ಪಿ‌ಎಚ್.ಡಿ ಮಹಾ ಪ್ರಬಂಧ)
ಲೇಖಕರು :   ಡಾ.ಲಕ್ಷ್ಮೀ ಜಿ ಪ್ರಸಾದ ,
ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜ್ ಬೆಳ್ಳಾರೆ ,
ಸುಳ್ಯ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರಕಾಶಕರು : ಪ್ರಚೇತ ಬುಕ್ ಹೌಸ್ ,
ಹೋಟೆಲ್ ಶಾಂತಿಸಾಗರ ನೆಲ ಮಾಳಿಗೆ
ಬಸವನ ಗುಡಿ ರಸ್ತೆ ,ಬೆಂಗಳೂರು - 560 019
ಫೋನ್ :080 26602530 , ಮೊಬೈಲ್ :94485 05732
ಮೊದಲ ಮುದ್ರಣ : 2013 
ಪುಸ್ತಕದ ಅಳತೆ : 1/8 ಡೆಮ್ಮಿ , ಪುಟಗಳು : 336 ಪುಟ , ಮೌಲ್ಯ : ರೂಪಾಯಿ 300/=
ಕೃತಿ ಲಭ್ಯವಿರುವ ಪುಸ್ತಕ ಮಳಿಗೆಗಳು :
ಪ್ರಚೇತ ಬುಕ್ ಹೌಸ್ ಬೆಂಗಳೂರು,
ಸಾಹಿತ್ಯ ಕೇಂದ್ರ ಮಂಗಳೂರು ,
ಯುನಿವರ್ಸಲ್ ಬುಕ್ ಸೆಲ್ಲೆರ್ಸ್ ಉಡುಪಿ ,
ಸೀತಾ  ಬುಕ್ ಹೌಸ್ ಉಡುಪಿ ಹಾಗೂ
ನವಕರ್ನಾಟಕ ,ಸಪ್ನಾ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.

 

Author : ಪ. ರಾಮಚಂದ್ರ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited