Untitled Document
Sign Up | Login    
ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾದ ಮೂವರು ವಿಜ್ನಾನಿಗಳು


ಅಮೆರಿಕಾ ಮೂಲದ ಇಬ್ಬರು ಹಾಗೂ ಜರ್ಮನ್ ಮೂಲದ ಓರ್ವ ವಿಜ್ನಾನಿಗಳಿಗೆ ಅತ್ಯುನ್ನತ ಗೌರವವಾದ ವೈದ್ಯಶಾಸ್ತ್ರ ನೊಬೆಲ್ ಪ್ರಶಸ್ತಿ ಲಭಿಸಿದೆ.

ದೇಹದ ನಿರ್ದಿಷ್ಟ ಭಾಗಗಳಿಗೆ ನಿರ್ದಿಷ್ಟ ಸಮಯಕ್ಕೆ ಜೀವರಕ್ಷಕ ಪ್ರೋಟಿನ್ ಹಾಗೂ ಕಣಗಳನ್ನು ತಲುಪಿಸುವ ಜೀವಕೋಶಗಳ ಸಂಕೀರ್ಣ ಸಾಗಣೆ ವ್ಯವಸ್ಥೆ ಸಂಶೋಧಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಅಮೆರಿಕದ ಜೇಮ್ಸ್ ರೋಥ್ಮನ್, ರ್ಯಾಂಡಿ ಸ್ಕೀಕ್ ಮ್ಯಾನ್ ಹಾಗೂ ಥಾಮಸ್ ಸುಡೋಫ್ ಅವರು ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತರು. ಪ್ರಶಸ್ತಿ 7.4 ಕೋಟಿ ರೂ.ನಗದು ಬಹುಮಾನ ಹೊಂದಿದೆ.
ಜೀವಕೋಶಗಳು ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳಕ್ಕೆ ಜೀವರಕ್ಷಕ ಪ್ರೋಟಿನ್ ಹಾಗೂ ಕಣಗಳನ್ನು ಕಳಿಸುತ್ತವೆ. ಇದಕ್ಕಾಗಿ ಪ್ರತ್ಯೇಕ ಸಾಗಣೆ ವ್ಯವಸ್ಥೆಯನ್ನೇ ಹೊಂದಿದೆ. ಈ ಸಾಗಣೆ ಮಾರ್ಗವನ್ನು ಮೂವರು ವಿಜ್ನಾನಿಗಳು ಶೋಧಿಸಿದ್ದಾರೆ. ಒಂದು ವೇಳೆ ಈ ಸಾಗಣೆ ಮಾರ್ಗದಲ್ಲಿ ಏರುಪೇರುಗಳಾದರೆ ನರರೋಗಗಳು, ಮಧುಮೇಹದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ಸಂಶೋಧನೆಯಿಂದ ದೇಹದಲ್ಲಿನ ಸಕ್ಕರೆ ಅಂಶ್ಗ ನಿಯಂತ್ರಿಸುವ ಇನ್ಸುಲಿನ್ ರಕ್ತಕ್ಕೆ ಹೇಗೆ ಬಿಡುಗಡೆಯಾಗುತ್ತದೆ. ನರ ಹಾಗು ಜೀವಕೋಶಗಳ ಮಧ್ಯೆ ಹೇಗೆ ಸಂಪರ್ಕ ಏರ್ಪಡಿಸುತ್ತದೆ. ಟೆಟಾನಸ್ ನಂತಹ ವೈರಾಣು ಹೇಗೆ ಜೀವಕೋಶಗಳಿಗೆ ಸೋಂಕು ತಗುಲಿಸಿ, ಪ್ರತಿ ವರ್ಷ ಸಾವಿರಾರು ಮಕ್ಕಳ ಸಾವಿಗೆ ಕಾರಣವಾಗುತ್ತದೆ ಎಂಬ ವಿವರಣೆ ಪಡೆಯಲು ಸಹಾಯವಾಗುತ್ತದೆ.

 

Author : ವರದರಾಜ ಜಿ.ಭಟ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited