Untitled Document
Sign Up | Login    
ಭಾರತೀಯ ಮೂಲದ ನೀನಾ ಮಿಸ್ ಅಮೆರಿಕ

ನೀನಾ ದಾವುಲೂರಿ

ಭಾರತೀಯ ಮೂಲದ ನೀನಾ ದಾವುಲೂರಿ 2014ನೇ ಸಾಲಿನ ಮಿಸ್ ಅಮೆರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಆಂಧ್ರಪ್ರದೇಶದ ವಿಜಯವಾಡ ಮೂಲದ ನೀನಾ, ನ್ಯೂಜೆರ್ಸಿಯಲ್ಲಿ ನಡೆದ ಮಿಸ್ ಅಮೆರಿಕ ಫೈನಲ್ ಸ್ಪರ್ಧೆಯಲ್ಲಿ ಕ್ರಿಸ್ಟಲ್ ಲೀ ಮತ್ತು ಕೆಸ್ಲೆ ಗ್ರಿಸ್ ವಲ್ಡ್ ಅವರನ್ನು ಹಿಂದಿಕ್ಕಿ ಮಿಸ್ ಅಮೆರಿಕ ಕೀರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಮೂಲಕ ಭಾರತೀಯ ಮೂಲದವರೊಬ್ಬರು ಮಿಸ್ ಅಮೆರಿಕ ಪ್ರಶಸ್ತಿಗೆ ಭಾಜನರಾಗಿರುವುದು ಇದೇ ಮೊದಲು ಎಂಬ ಹೆಮ್ಮೆಗೆ ಪಾತ್ರರಾದರು. ಈ ಸ್ಪರ್ಧೆಗೆ ಪ್ರವೇಶ ಪಡೆಯುವ ಮೊದಲು ನೀನಾ ಮಿಸ್ ನ್ಯೂಯಾರ್ಕ್ ಆಗಿ ಆಯ್ಕೆಯಾಗಿದ್ದರಲ್ಲದೇ, ನ್ಯೂಯಾರ್ಕ್ ರಾಜ್ಯವನ್ನೇ ಪ್ರತಿನಿಧಿಸಿದ್ದರು.

ಅಂತಿಮ ಸುತ್ತಿನಲ್ಲಿ ಬಾಲಿವುಡ್ ಡಾನ್ಸ್ ಮೂಲಕ ನೀನಾ ತೀರ್ಪುಗಾರರ ಮೆಚ್ಚುಗೆ ಗಳಿಸಿದರು. ಅಮೆರಿಕದ ವಿವಿಧ ರಾಜ್ಯಗಳ 53 ಯುವತಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಿಸ್ ಕ್ಯಾಲಿಫೊರ್ನಿಯಾ ಕ್ರಿಸ್ಟಲ್ ಲೀ ರನ್ನರ್ ಅಪ್ ಆಗಿ ಆಯ್ಕೆಯಾದರೆ, ಮಿಸ್ ಒಕ್ಲಹಾಮಾ ಕೆಸ್ಲೆ ಗ್ರಿಸ್ ವಲ್ಡ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ಗೌನ್ ತೊಡುಗೆ, ಜೀವನ ಶೈಲಿ, ಸದ್ರುಢಕಾಯ, ಪ್ರತಿಭೆ, ವೈಯಕ್ತಿಕ ಸಂದರ್ಶನ ಹಾಗೂ ವೇದಿಕೆಯಲ್ಲಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದ ಆಧಾರದಲ್ಲಿ ನೀನಾರನ್ನು ಮಿಸ್ ಅಮೆರಿಕ ಆಗಿ ಆಯ್ಕೆ ಮಾಡಲಾಯಿತು. ನೀನಾ ಗೆ 5೦ ಸಾವಿರ ಡಾಲರ್ ಬಹುಮಾನವಾಗಿ ನೀಡಲಾಗಿದೆ.

ಪ್ರಶಸ್ತಿ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದ ನೀನಾ, ಪ್ರಶಸ್ತಿ ಆಯ್ಕೆಯಲ್ಲಿ ವೈವಿದ್ಯತೆಯನ್ನು ಪರಿಗಣಿಸಿದ ತೀರ್ಪುಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನೀನಾ ತಮ್ಮ ತಂದೆಯಂತೆಯೆ ವೈದ್ಯೆಯಾಗುವ ಕನಸು ಕಂಡಿದ್ದಾರೆ.

 

Author : ಲೇಖಾ ಆರ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited