Untitled Document
Sign Up | Login    
ಕಲಾದೀಪದ ನೃತ್ಯ-ಗೀತ ಕಾಯಕ

ಪ್ರೀತಿಕಲಾ ಮತ್ತು ದೀಪಕ್ ಕುಮಾರ್ ಅವರಿಂದ ನೃತ್ಯ-ಸಂಗೀತ

ಕಳೆದೆರಡು ದಶಕಗಳಿಂದಲೂ ಅನೇಕ ಗುಣಾತ್ಮಕ, ಪರಿಣಾಮಾತ್ಮಕ ಕಲಾಸಂಘಟನೆಯಲ್ಲಿ ತೊಡಗಿಸಿಕೊಂಡು ಪರಿಸರ-ಸಂಸ್ಕೃತಿ ಜಾಗೃತಿಯ ಕಾರ್ಯಕ್ರಮಗಳಲ್ಲಿ ಪ್ರಧಾನ ಪಾತ್ರ ವಹಿಸಿರುವವರು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ, ಗುರು ವಿದ್ವಾನ್ ಬಿ. ದೀಪಕ್ ಕುಮಾರ್.

ಭರತನಾಟ್ಯ-ಕಥಕ್-ಕೂಚಿಪುಡಿ- ಕರ್ಣಾಟಕಸಂಗೀತ-ನಟುವಾಂಗ- ಚಿತ್ರಕಲೆ ಹೀಗೆ ಎತ್ತ ಕಡೆಯಿಂದ ನೋಡಿದರೂ ’ನೃತ್ಯತಾಂಡವ’ ಎಂದು ಅವರಿಗೆ ಸಂದ ಬಿರುದಿಗೆ ಸಾಕಾರರು. ಇವರ ನೃತ್ಯಪಯಣಕ್ಕೆ ಜೊತೆಯಾಗಿದೆ ಇವರ ಇಡೀ ಕುಟುಂಬ.

’ನಾಟ್ಯಚಿಂತನ’ದಂತಹ ಕರ್ನಾಟಕಕ್ಕೆ ವಿನೂತನವೆನಿಸುವ ನಾಟ್ಯಶಾಸ್ತ್ರಾಧಾರಿತವಾದ, ವಿದ್ಯಾರ್ಥಿಗಳೇ ಕೊರಿಯೋಗ್ರಫಿಯನ್ನು ನಿರ್ವಹಿಸುವ ಯಶಸ್ವೀ ಕಾರ್ಯಕ್ರಮ; ಎಳೆಯ ಕಲಾವಿದರಿಗೆ ಕಡಿಮೆ ಖರ್ಚು ಮತ್ತು ಕನಿಷ್ಟ ಹಿಮ್ಮೇಳದಲ್ಲಿ ಗುಣಮಟ್ಟದ ಮನೆಯಂಗಣದ ನೃತ್ಯಪ್ರದರ್ಶನವನ್ನು ಆಯೋಜಿಸುವ ’ನೃತ್ಯಾಂತರಂಗ’ ; ಕರ್ನಾಟಕದಲ್ಲೇ ಅಪರೂಪವಾಗಿರುವ ನಟುವಾಂಗ ಕಲಿಕೆ ಮತ್ತು ನಾಟ್ಯಶಾಸ್ತ್ರಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶ ನೀಡುವ ಸ್ತುತ್ಯರ್ಹವಾದ ಕಾರ್ಯಕ್ಕೆ ಮತ್ತೊಂದಷ್ಟು ಹೊಸ ಆಯಾಮಗಳು ಸೇರ್ಪಡೆಯಾಗುತ್ತಲೇ ಇವೆ.

ಅದರಲ್ಲೂ ದೀಪಕ್ ಅವರ ಪತ್ನಿ ವಿದುಷಿ ಪ್ರೀತಿಕಲಾ ನೃತ್ಯ-ಸಂಗೀತಗಳೆರಡರಲ್ಲೂ ವಿದ್ವತ್ತನ್ನು ಪಡೆದ ಪ್ರತಿಭಾವಂತೆಯಾಗಿ; ಕರಾವಳಿಯ ಗೀತ ಮತ್ತು ನೃತ್ಯಕ್ಷೇತ್ರದ ಹಾಡುಗಾರಿಕೆಗೆ ಹೊಸ ಆಶಾಕಿರಣವಾಗಿ ಮೂಡಿಬರುತ್ತಲಿರುವವರು. ಅಷ್ಟೇ ಅಲ್ಲ, ದೀಪಕ್ ಕುಮಾರ್ ಮತ್ತು ಪ್ರೀತಿಕಲಾ- ಇವರೀರ್ವರ ಯುಗಳ ಸಾಂಗತ್ಯದಲ್ಲಿ ’ಕಲಾದೀಪ’ವೆಂಬ ಹೆಸರನ್ನು ತಾಳಿದ ನೃತ್ಯಾಭಿವ್ಯಕ್ತಿಯು ಕರಾವಳಿಯ ಪಾಲಿಗೆ ಅಪರೂಪವೆನಿಸುವ ಅಪೂರ್ವ ಪರಿಕಲ್ಪನೆಯಾಗಿದ್ದು; ಉಡುಪಿ, ಮಂಗಳೂರು, ಬೆಂಗಳೂರು ಆದ್ಯಂತವಾಗಿ ಕರ್ನಾಟಕದಲ್ಲಿ ಹೊಸ ನೃತ್ಯಭಿತ್ತಿಯನ್ನು ಮೂಡಿಸಿದೆ.

ಸಂಗೀತ ನೃತ್ಯಾಂತರಂಗ:

ಇತ್ತೀಚೆಗಷ್ಟೇ ಪುತ್ತೂರಿನಲ್ಲಿ ಕನ್ನಡಸಂಸ್ಕೃತಿ ಇಲಾಖೆ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿತವಾದ ಸಂಗೀತ ಕಛೇರಿಯಲ್ಲಿ ಪ್ರೀತಿಕಲಾ ಉತ್ತಮ ಮನೋಧರ್ಮ ನಿರ್ವಹಣೆ ತೋರಿ ತನ್ನ ಎರಡನೆಯ ಕಛೇರಿಗೆ ಅಪೂರ್ವವಾದ ಭಾವನಿರ್ಮಾಣವನ್ನು ಮಾಡಿದರು. ಸಂಗೀತ ಕಛೇರಿಗಳಲ್ಲಿ ನೃತ್ಯಾಭಿನಯವರ್ಣವೆಂಬ ಕಾರಣಕ್ಕೇ ಅಸಡ್ಡೆಗೆ ಗುರಿಯಾಗಿ ಅಷ್ಟಾಗಿ ಯಾರೂ ಕೈಗೆತ್ತಿಕೊಳ್ಳದೆ ಮೂಲೆಗುಂಪಾಗುತ್ತಿರುವ ಪದವರ್ಣವನ್ನೇ ಆರಿಸುವ ಮೂಲಕ ಪ್ರೀತಿಕಲಾ ನಾಟ್ಯ- ಸಂಗೀತದ ಸಾಂಗತ್ಯವನ್ನು ಏಕಕಾಲಕ್ಕೇ ಪ್ರಕಟಪಡಿಸಿದ್ದು ನಿಜಕ್ಕೂ ಶ್ಲಾಘನೀಯ ಮತ್ತು ಅನುಸರಣೀಯ. ನೃತ್ಯದ ಅನುಭವಪ್ರೀತಿಯೂ ನಾಟಕುರಂಜಿ ರಾಗದ ಪದವರ್ಣ ಪೋಷಣೆಗೆ ಹೆಚ್ಚಿನ ಸಹಕಾರವನ್ನಿತ್ತು ಕಛೇರಿಕ್ರಮಕ್ಕೆ ಹೊಸ ರಂಜನೆಯ ದಿಕ್ಕನ್ನೇ ನೀಡಿತು. ನಂತರಕ್ಕೆ ಗೌಳರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರಿಂದ ರಚಿತವಾದ ’ಶ್ರೀ ಮಹಾಗಣಪತಿಂ ರವತು ಮಾಂ’ ಕೃತಿಗೆ ಸರಳ ಆಲಾಪನೆಯ ಸೌಗಂಧ; ಪಾಲಿನಿ ರಾಗದ ’ಕಪಾಲಿನಿ’ ಕೃತಿಯಲ್ಲಿ ತ್ರಿಶ್ರನಡೆ ಆದಿತಾಳದ ಸವಾಲಿನ ನಿರ್ವಹಣೆಯಲ್ಲಿ ತಾಳದ ಬಿಗಿಯನ್ನು ಭಾವನಿರ್ಮಾಣಕ್ಕೆ ಸರಿದೂಗಿಸಿ ಹೊಂದಿಸುವ ಅಭಿವ್ಯಕ್ತಿ.

ಪ್ರೀತಿಕಲಾ ನಂತರ ಕೈಗೆತ್ತಿಕೊಂಡದ್ದು ಕಛೇರಿಯ ಮುಖ್ಯಧಾತುವಾದ ಸಿಂಹೇಂದ್ರಮಧ್ಯಮ ರಾಗ. ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ಹೆಸರಾಂತ ಕೃತಿ ’ಕಾಮಾಕ್ಷಿ ಕಾಮಕೋಟಿ’ಯನ್ನು ಪ್ರತಿಭಾಪೂರ್ಣವಾಗಿ ನಿರ್ವಹಿಸುತ್ತಾ; ನೆರವಲ್ ಸ್ವರಪ್ರಸ್ತಾರಗಳಲ್ಲಿಯೂ ಮನೋಧರ್ಮ ನಿರ್ವಹಣೆಯನ್ನು ಭಾವಾಶ್ರಿತವಾಗಿಸಿಕೊಂಡರು. ಮೃದಂಗದಲ್ಲಿ ಸಹಕರಿಸಿದ ನಿಕ್ಷಿತ್ ಪುತ್ತೂರು ಅವರ ತನಿಆವರ್ತನದ ವೈಶಿಷ್ಟ್ಯವೂ ತಾಳದ ಜಟಿಲತೆಯ ಜಾಣ್ಮೆಯನ್ನು ಎತ್ತಿಹಿಡಿದು ಯುವಕಲಾವಿದರ ಹಾದಿಯ ಭರವಸೆಯ ಬಲವನ್ನು ಇಮ್ಮಡಿಗೊಳಿಸಿತು.

ಇದಾದ ಬಳಿಕ ಹೆಸರಾಂತ ಕೃತಿ ಕಾಪಿರಾಗದ ’ಎನ್ನ ತವಂ ಶೈದನೈ’ ; ರಾಗಮಾಲಿಕೆಯಲ್ಲರಳಿದ ಕನಕದಾಸರ ರಚನೆ ’ಯಾದವರಾಯ’ವೂ ಮನೋಹರವಾಗಿ ವಿನ್ಯಾಸಗೊಂಡಿತು. ಬಸಂತ ಬಹಾರ್, ಸಿಂಧುಭೈರವಿ, ಶುದ್ಧಸಾವೇರಿಯ ರಾಗಸೂಕ್ಷ್ಮಗಳನ್ನು ಪ್ರಕಟಗೊಳಿಸಿದ ಪ್ರೀತಿಕಲಾ ನಂತರ ಬೇಹಾಗ್‌ರಾಗಕ್ಕೆ ಡಿವಿಜಿ ಅವರ ಅಂತಃಪುರ ಗೀತೆ ’ಏನೇ ಶುಕಭಾಷಿಣಿ’ಯ ಲಾಲಿತ್ಯಕ್ಕೆ ದನಿಗೂಡಿಸಿದರು. ಲಾಲ್‌ಗುಡಿ ಜಯರಾಮನ್ ರಚನೆಯ ಸಿಂಧುಭೈರವಿ ತಿಲ್ಲಾನದ ಸ್ವರ-ಸೊಲ್ಕಟ್ಟಿನ ನುಡಿಬಿಕ್ಕಟ್ಟುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಇವರಿಗೆ; ವಯೋಲಿನ್‌ನಲ್ಲಿ ಗಣರಾಜ ಕಾರ್ಲೆ ಕಾಸರಗೋಡು ಅವರೂ ಸೊಗಸಾಗಿ ಇಂಬಾದರು.

ಸಾಹಿತ್ಯಸ್ಪಷ್ಟತೆಯೆನ್ನುವುದು ಒಂದಿಂಚೂ ಮರೆಯಾಗದೆ ಮನವರಳಿಸಿದ ಪ್ರೀತಿಕಲಾ ಅವರಿಗೆ ತಮ್ಮ ಕೋಕಿಲ-ಹರಿತ ಧ್ವನಿಯನ್ನು ಸರಸಮಯವಾಗಿ ದುಡಿಸಿಕೊಳ್ಳುವುದು ತಿಳಿದಿದೆ. ಸ್ವತಃ ನೃತ್ಯಕಲಾವಿದೆಯಾದರೂ ನೃತ್ಯಕ್ಕೊಪ್ಪುವ ಮುಖಭಾವ ಚೇಷ್ಟೆಗಳ ಅಂದ-ಅತಿರೇಕ-ಅವಸರವನ್ನು ತೋರದೆ ಸಂಗೀತಕ್ಕೊಪ್ಪುವ ತನ್ಮಯ-ಶಾಂತ-ನಗುನಿಲುವಿನಲ್ಲಿ ಕಛೇರಿ ನಿರ್ವಹಿಸುವ ಔಚಿತ್ಯ ಸಿದ್ಧಿಸಿದೆ. ಒಟ್ಟಿನಲ್ಲಿ ನೃತ್ಯದ ಅಂತರಂಗವನ್ನು ತಮ್ಮ ಗಾಯನದಲ್ಲೇ ಬಗೆದು ಬಗೆಗಾಣಿಸಿದ ವಿದುಷಿ ಪ್ರೀತಿಕಲಾ ಅವರಿಗೆ ಮತ್ತಷ್ಟು ಅಭ್ಯಾಸದ ಬಲ, ಕಛೇರಿ ವಿಸ್ತರಣೆಯ ಅವಕಾಶ ದೊರೆತರೆ, ಅವರು ನಾಡು ನೆಚ್ಚುವ ಕಲಾವಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

ನೃತ್ಯ-ಸಂಗೀತ ಅನುಬಂಧ:

ಸತಿ ಸಂಗೀತದಲ್ಲಿ ನೃತ್ಯಾನುಸಂಧಾನ ಮಾಡಿದರೆ ಪತಿ ನೃತ್ಯದಲ್ಲಿ ಗೀತದ ಅನುಬಂಧ ಬೆಸೆದವರು. ’ನಾಟ್ಯಯೋಗ’ವೆಂಬ ಕಠಿಣ ಕರಣಾಂಗಹಾರಗಳ ಪರಿಕಲ್ಪನೆಯಲ್ಲಿ ಕರಾವಳಿಯಲ್ಲೇ ವಿನೂತನವಾದ ನೃತ್ಯಾಭಿವ್ಯಕ್ತಿಂiiನ್ನು ನಿರ್ವಹಿಸುತ್ತಾ ಬಂದ ದೀಪಕ್ ಕುಮಾರ್; ತಮ್ಮ ಅನೇಕಾನೇಕ ನೃತ್ಯಾಭಿವ್ಯಕ್ತಿಯಲ್ಲಿ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಬಂದಿದ್ದಾರೆ. ನೃತ್ಯಸಂಶೋಧನೆಯ ವಿವಿಧ ಪ್ರಾಯೋಗಿಕ ಅಭಿವ್ಯಕ್ತಿಗಳು ಚಟುವಟಿಕೆಗಳನ್ನು ನಿರ್ವಹಿಸಿದ ದೀಪಕ್ ಕುಮಾರ್; ಕಳೆದ ಆರು ತಿಂಗಳ ಹಿಂದಷ್ಟೇ ದೂರದರ್ಶನದಿಂದ ’ಎ’ ಗ್ರೇಡ್ ಮಾನ್ಯತೆ ಪಡೆದು ಕರಾವಳಿಯಲ್ಲಿಯೇ ಈ ಸ್ಥಾನ ಪಡೆದ ಎರಡನೆಯ ಮತ್ತು ಪುತ್ತೂರು ಪ್ರಾಂತದ ಪ್ರಥಮ ಕಲಾವಿದರೆನಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನ ಅಖಿಲ ಕರ್ನಾಟಕ ನೃತ್ಯಕಲಾಪರಿಷತ್‌ನಿಂದ ಭಾರತೀಯ ವಿದ್ಯಾಭವನದಲ್ಲಿ ಸಂಘಟನೆಗೊಂಡ ’ನಟರಾಜೋತ್ಸವ’ವೆಂಬ ಪುರುಷ ಕಲಾವಿದರಿಗೇ ಮೀಸಲಾದ ಪ್ರತಿಷ್ಠಿತ ನೃತ್ಯಕಾರ್ಯಕ್ರಮದಲ್ಲಿಯೂ ತನ್ನ ಗೆಜ್ಜೆಗಳ ಘಲಿರನ್ನು ಮೂಡಿಸಿದ್ದಾರೆ ದೀಪಕ್ ಕುಮಾರ್.

ಗಂಭೀರನಾಟರಾಗದಲ್ಲಿ ಪ್ರಥಮವಂದಿಸಿದ ದೀಪಕ್ ಕುಮಾರ್ ಗಂಭೀರರೂಪದ ಗಣನಾಯಕನನ್ನು ಮನೋಜ್ಞವಾಗಿ ನರ್ತಿಸಿದರು. ನಂತರದಲ್ಲಿ ಶಿವನ ಮಹಿಮೆಯನ್ನು ಕೊಂಡಾಡುವ ’ಮಹಾದೇವ ಶಿವ ಶಂಭೋ’ ಎಂಬ ರೇವತಿರಾಗದ ಕೃತಿಯ ಸಂಚಾರಿಯಲ್ಲಿ ರಾವಣನಿಗೆ ಕೈಲಾಸದಲ್ಲಾದ ಗರ್ವಭಂಗವನ್ನು ನಿರೂಪಿಸಿ ಭಕ್ತಿಯಸಾಮರ್ಥ್ಯದಲ್ಲಿ ಆತನ ಕರುಳಿನ ಮಾಲೆಯೇ ರುದ್ರವೀಣೆಯಾದ ಪ್ರಸಂಗವನ್ನೂ, ಗಂಗೆಯನ್ನು ಜಟಾಜೂಟದಲ್ಲಿ ಅಡಗಿಸಿ ಜಂಭವನ್ನಿಳಿಸಿ ಸಲಿಲಸುಂದರನಾದ ಕಥೆಯನ್ನು ಸೋದಾಹರಣವಾಗಿ ಅಭಿನಯಿಸಿದರು. ತದನಂತರ ’ಸರಿಯೇ ಈ ರೀತಿ ಎನ್ನೊಡತಿ’ ಎಂಬ ಡಿ.ವಿ.ಪ್ರಸನ್ನಕುಮಾರ್ ಅವರ ರಚನೆಯ ಸಾಹಿತ್ಯಕ್ಕೆ ಅಳವಡಿಸಿದ ಲತಾಂಗಿ ರಾಗದ ಭಾವಮರ್ಮವನ್ನು ಅರಿತ ಹೆಣೆದದ್ದೇ ಜಾವಳಿನೃತ್ಯಾಭಿನಯ. ನಾಯಕನ ಬರುವಿಕೆಯನ್ನು ಕಾಣದೆ ಕುಪಿತಳಾದ ಖಂಡಿತಾ ನಾಯಿಕೆಯನ್ನು ಮನವೊಲಿಸುವ ನಾಯಕ ತನ್ನ ನಿಷ್ಕಪಟ ಚಾರಿತ್ರ್ಯವನ್ನು ತನ್ನ ಪ್ರಿಯೆಯಲ್ಲಿ ನಿರೂಪಿಸಲು ತೊಡಗುತ್ತಾನೆ. ಅಲ್ಲಿ ಸವಾಲೆನಿಸುವ ತನ್ನ ನಿಯತ್ತಿನ ನಿರೂಪಣೆಯೇ ನಾಯಕನ ದೊಡ್ಡಪರೀಕ್ಷೆ. ಅದನ್ನು ಧೀರೋದಾತ್ತವೆಂಬ ನಿರ್ಮಲ ಮನಸ್ಸಿನ ನಾಯಕಾಭಿನಯದ ಕ್ಲಿಷ್ಟತೆಗೆ ಅನುನಯಿಸುವ ಸಾಹಸ ತೋರಿದವರು ದೀಪಕ್‌ಕುಮಾರ್. ನರ್ಮಪ್ರಸಾದಕವೆಂಬ ಶತಾವಧಾನಿ ಡಾ.ಆರ್.ಗಣೇಶ ಅವರ ಲಕ್ಷಣ ವಿಶ್ಲೇಷಣೆಗೆ ಒಪ್ಪಿದ ಈ ನಾಯಕಾಭಿವ್ಯಕ್ತಿಯನ್ನು ಪ್ರೌಢಿಮೆಯಿಂದ ನಿರ್ವಹಿಸಿದ್ದು ವಿಶೇಷವಾಗಿದ್ದಿತ್ತು.

ನೃತ್ಯ-ಸಂಗೀತ ಅನುಬಂಧ:

ಸತಿ ಸಂಗೀತದಲ್ಲಿ ನೃತ್ಯಾನುಸಂಧಾನ ಮಾಡಿದರೆ ಪತಿ ನೃತ್ಯದಲ್ಲಿ ಗೀತದ ಅನುಬಂಧ ಬೆಸೆದವರು. ’ನಾಟ್ಯಯೋಗ’ವೆಂಬ ಕಠಿಣ ಕರಣಾಂಗಹಾರಗಳ ಪರಿಕಲ್ಪನೆಯಲ್ಲಿ ಕರಾವಳಿಯಲ್ಲೇ ವಿನೂತನವಾದ ನೃತ್ಯಾಭಿವ್ಯಕ್ತಿಂiiನ್ನು ನಿರ್ವಹಿಸುತ್ತಾ ಬಂದ ದೀಪಕ್ ಕುಮಾರ್; ತಮ್ಮ ಅನೇಕಾನೇಕ ನೃತ್ಯಾಭಿವ್ಯಕ್ತಿಯಲ್ಲಿ ವಿಮರ್ಶಕರ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಲೇ ಬಂದಿದ್ದಾರೆ. ನೃತ್ಯಸಂಶೋಧನೆಯ ವಿವಿಧ ಪ್ರಾಯೋಗಿಕ ಅಭಿವ್ಯಕ್ತಿಗಳು ಚಟುವಟಿಕೆಗಳನ್ನು ನಿರ್ವಹಿಸಿದ ದೀಪಕ್ ಕುಮಾರ್; ಕಳೆದ ಆರು ತಿಂಗಳ ಹಿಂದಷ್ಟೇ ದೂರದರ್ಶನದಿಂದ ’ಎ’ ಗ್ರೇಡ್ ಮಾನ್ಯತೆ ಪಡೆದು ಕರಾವಳಿಯಲ್ಲಿಯೇ ಈ ಸ್ಥಾನ ಪಡೆದ ಎರಡನೆಯ ಮತ್ತು ಪುತ್ತೂರು ಪ್ರಾಂತದ ಪ್ರಥಮ ಕಲಾವಿದರೆನಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನ ಅಖಿಲ ಕರ್ನಾಟಕ ನೃತ್ಯಕಲಾಪರಿಷತ್‌ನಿಂದ ಭಾರತೀಯ ವಿದ್ಯಾಭವನದಲ್ಲಿ ಸಂಘಟನೆಗೊಂಡ ’ನಟರಾಜೋತ್ಸವ’ವೆಂಬ ಪುರುಷ ಕಲಾವಿದರಿಗೇ ಮೀಸಲಾದ ಪ್ರತಿಷ್ಠಿತ ನೃತ್ಯಕಾರ್ಯಕ್ರಮದಲ್ಲಿಯೂ ತನ್ನ ಗೆಜ್ಜೆಗಳ ಘಲಿರನ್ನು ಮೂಡಿಸಿದ್ದಾರೆ ದೀಪಕ್ ಕುಮಾರ್.

ಗಂಭೀರನಾಟರಾಗದಲ್ಲಿ ಪ್ರಥಮವಂದಿಸಿದ ದೀಪಕ್ ಕುಮಾರ್ ಗಂಭೀರರೂಪದ ಗಣನಾಯಕನನ್ನು ಮನೋಜ್ಞವಾಗಿ ನರ್ತಿಸಿದರು. ನಂತರದಲ್ಲಿ ಶಿವನ ಮಹಿಮೆಯನ್ನು ಕೊಂಡಾಡುವ ’ಮಹಾದೇವ ಶಿವ ಶಂಭೋ’ ಎಂಬ ರೇವತಿರಾಗದ ಕೃತಿಯ ಸಂಚಾರಿಯಲ್ಲಿ ರಾವಣನಿಗೆ ಕೈಲಾಸದಲ್ಲಾದ ಗರ್ವಭಂಗವನ್ನು ನಿರೂಪಿಸಿ ಭಕ್ತಿಯಸಾಮರ್ಥ್ಯದಲ್ಲಿ ಆತನ ಕರುಳಿನ ಮಾಲೆಯೇ ರುದ್ರವೀಣೆಯಾದ ಪ್ರಸಂಗವನ್ನೂ, ಗಂಗೆಯನ್ನು ಜಟಾಜೂಟದಲ್ಲಿ ಅಡಗಿಸಿ ಜಂಭವನ್ನಿಳಿಸಿ ಸಲಿಲಸುಂದರನಾದ ಕಥೆಯನ್ನು ಸೋದಾಹರಣವಾಗಿ ಅಭಿನಯಿಸಿದರು. ತದನಂತರ ’ಸರಿಯೇ ಈ ರೀತಿ ಎನ್ನೊಡತಿ’ ಎಂಬ ಡಿ.ವಿ.ಪ್ರಸನ್ನಕುಮಾರ್ ಅವರ ರಚನೆಯ ಸಾಹಿತ್ಯಕ್ಕೆ ಅಳವಡಿಸಿದ ಲತಾಂಗಿ ರಾಗದ ಭಾವಮರ್ಮವನ್ನು ಅರಿತ ಹೆಣೆದದ್ದೇ ಜಾವಳಿನೃತ್ಯಾಭಿನಯ. ನಾಯಕನ ಬರುವಿಕೆಯನ್ನು ಕಾಣದೆ ಕುಪಿತಳಾದ ಖಂಡಿತಾ ನಾಯಿಕೆಯನ್ನು ಮನವೊಲಿಸುವ ನಾಯಕ ತನ್ನ ನಿಷ್ಕಪಟ ಚಾರಿತ್ರ್ಯವನ್ನು ತನ್ನ ಪ್ರಿಯೆಯಲ್ಲಿ ನಿರೂಪಿಸಲು ತೊಡಗುತ್ತಾನೆ. ಅಲ್ಲಿ ಸವಾಲೆನಿಸುವ ತನ್ನ ನಿಯತ್ತಿನ ನಿರೂಪಣೆಯೇ ನಾಯಕನ ದೊಡ್ಡಪರೀಕ್ಷೆ. ಅದನ್ನು ಧೀರೋದಾತ್ತವೆಂಬ ನಿರ್ಮಲ ಮನಸ್ಸಿನ ನಾಯಕಾಭಿನಯದ ಕ್ಲಿಷ್ಟತೆಗೆ ಅನುನಯಿಸುವ ಸಾಹಸ ತೋರಿದವರು ದೀಪಕ್‌ಕುಮಾರ್. ನರ್ಮಪ್ರಸಾದಕವೆಂಬ ಶತಾವಧಾನಿ ಡಾ.ಆರ್. ಗಣೇಶ ಅವರ ಲಕ್ಷಣ ವಿಶ್ಲೇಷಣೆಗೆ ಒಪ್ಪಿದ ಈ ನಾಯಕಾಭಿವ್ಯಕ್ತಿಯನ್ನು ಪ್ರೌಢಿಮೆಯಿಂದ ನಿರ್ವಹಿಸಿದ್ದು ವಿಶೇಷವಾಗಿದ್ದಿತ್ತು.

ಈಗಾಗಲೇ ನೃತ್ಯಜಗತ್ತಿನ ಹಿರಿಯ ಗುರುಗಳ ಶಿಷ್ಯತ್ವದಲ್ಲಿ ಮಿಂದೆದ್ದ ದೀಪಕ್ ಅವರ ಕಲಾದೀವಿಗೆಗೆ ಅಂತರ್ರಾಷ್ಟ್ರೀಯ-ರಾಷ್ಟ್ರೀಯ ಮಾನ್ಯತೆಯ ಪ್ರಶಸ್ತಿ-ಪ್ರದರ್ಶನಗಳು-ಶೈಕ್ಷಣಿಕ ಮಾನ್ಯತೆ ಒಲಿದು ಬಂದಿರುವುದು ಅತಿಶಯವೇನಲ್ಲ. ಇದೀಗ ಪುತ್ತೂರು ಪ್ರಾಂತದ ಕಲಾದಿಗಂತದಲ್ಲಿ ನಟರಾಜೋತ್ಸವದ ನರ್ತನಾವಕಾಶವನ್ನು ಪ್ರಥಮಬಾರಿಗೆ ಪಡೆದ ನಟಶಿರೋಮಣಿಯಷ್ಟೇ ಅಲ್ಲದೆ; ಅಭಿನಯಚಿನ್ಮಯರೆನಿಸಿದ್ದಾರೆ.

ಒಟ್ಟಿನಲ್ಲಿ ಪ್ರೀತಿಕಲಾ ಮತ್ತು ದೀಪಕ್ ಕುಮಾರ್ ಇವರೀರ್ವರ ಜೋಡಿ ’ಕಲಾದೀಪ’ದ ನೃತ್ಯ-ಗೀತ ಕಾಯಕದ ಲತಾಹಂದರವು ಕಲಾನಂದನದ ಹೂಗಳನ್ನರಳಿಸಿ ಸುವಾಸನೆಯನ್ನು ಬೀರಿವೆ.

 

Author : ಬೆಂಗಳೂರು ವೇವ್ಸ್ .

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited