Untitled Document
Sign Up | Login    
ಕೆಂಪು ಪೇಪರ್‌ಕ್ಲಿಪ್ ಕೊಟ್ಟು ಮನೆ ಖರೀದಿಸಿದ!

Red Paper clip

ಅರೆ ಇದೇನಿದು ಜೋಕ್ ಎನ್ನಬೇಡಿ.. ಇದು ನೈಜ ಘಟನೆಯಾಗಿದ್ದು ನಡೆದ ಅವಧಿ 2005-06. ಕೆಂಪು ಪೇಪರ್‌ಕ್ಲಿಪ್‌ ಮಾರಾಟ ಮಾಡಿ ಮನೆ ಖರೀದಿಸಿದವನ ಹೆಸರು ಕೈಲ್‌ ಮೆಕ್‌ಡೊನಾಲ್ಡ್‌!

ಆತ ಕೆನಡಾದ ಬ್ಲಾಗರ್. ಅಂದು ಆತನ ಬಳಿ ಈ ಪ್ರಯೋಗ ಮಾಡಲು ಇದ್ದುದು ಕೇವಲ ಒಂದು ಪೇಪರ್‌ಕ್ಲಿಪ್‌. ಅದು ಕೆಂಪು ಬಣ್ಣದ್ದಾಗಿತ್ತು. ಆ ಕ್ಲಿಪ್ ಮಾರಾಟ ಮಾಡಿ ಒಂದು ವರ್ಷದ ಅವಧಿಯಲ್ಲಿ ಆತ ಒಂದು ಮನೆಯನ್ನೂ ಖರೀದಿಸಿದ. ಮೆಕ್‌ಡೊನಾಲ್ಡ್‌ ಸಾಧನೆ ವಿಶ್ವದ ಗಮನ ಸೆಳೆದಿದೆ ಎಂಬುದಕ್ಕೆ ಆತನ ವೆಬ್‌ಸೈಟ್ (http://www.redpaperclip.com/)ನಲ್ಲಿ ಇರುವ ಪ್ರೆಸ್ ವಿಭಾಗಕ್ಕೊಮೆ ಇಣುಕಿದರೆ ಸಾಕು.. ನಿಮ್ಮ ಹುಬ್ಬು ಮೇಲೇರದೆ ಇರದು.. ಅಷ್ಟೊಂದು ಪಬ್ಲಿಸಿಟಿ ಲಭಿಸಿದೆ. ಬಿಬಿಸಿ ಟಿವಿಗೆ ನೀಡಿದ ಸಂದರ್ಶನದಲ್ಲಿ,"ನಿನ್ನ ಈ ಸಾಧನೆ ಇಷ್ಟೊಂದು ಪಬ್ಲಿಸಿಟಿ ಪಡೆಯೋದು ಹೇಗೆ ಸಾಧ್ಯವಾಯಿತು ಎಂದು ಹಲವರು ಕೇಳುತ್ತಿದ್ದಾರೆ. "ನನಗೇನೂ ಗೊತ್ತಿಲ್ಲ" ಎಂಬುದಷ್ಟೇ ನನ್ನ ಸರಳ ಉತ್ತರ’ ಎಂದು ಮೆಕ್‌ಡೊನಾಲ್ಡ್‌ ಹೇಳಿದ್ದಾರೆ.
ಕೆಂಪು ಪೇಪರ್‌ಕ್ಲಿಪ್‌ನೊಂದಿಗೆ ಅವರು ಆರಂಭಿಸಿದ ವಹಿವಾಟು ನಿಜಕ್ಕೂ ಕುತೂಹಲಕರವಾದುದು. ಸರಳವಾಗಿ ಅವರ ವಹಿವಾಟನ್ನು ಹೀಗೆ ದಾಖಲಿಸಬಹುದಾಗಿದೆ. ಎಲ್ಲ ವಹಿವಾಟು ಕೂಡಾ ಬಾರ್ಟರ್‌ ಪದ್ಧತಿ(ಕೊಡು-ಕೊಳ್ಳು ವಹಿವಾಟು)ಮೂಲಕವೇ ನಡೆದಿದೆ.

ವಹಿವಾಟು ಆರಂಭಿಸಿದ ದಿನ ಅರ್ಥಾತ್ ಕೆಂಪು ಪೇಪರ್‌ ಕ್ಲಿಪ್‌ ಮಾರಾಟ ಮಾಡಿದ ದಿನ 2005ರ ಜುಲೈ14
ಸಸ್‌ಕಾಚ್‌ವನ್‌ ಕಿಪ್ಲಿಂಗ್‌ನಲ್ಲಿ ಫಾರ್ಮ್ ಹೌಸ್ ಖರೀದಿಸಿದ ದಿನ ಅರ್ಥಾತ್‌ ಕೊನೆಯ ವಹಿವಾಟು ನಡೆಸಿದ ದಿನ 2006 ಜುಲೈ 5.
ವಹಿವಾಟು ಆರಂಭಿಸಿದ ದಿನ ಅರ್ಥಾತ್ ಕೆಂಪು ಪೇಪರ್‌ ಕ್ಲಿಪ್‌ ಮಾರಾಟ ಮಾಡಿದ ದಿನ 2005ರ ಜುಲೈ14
ಸಸ್‌ಕಾಚ್‌ವನ್‌ ಕಿಪ್ಲಿಂಗ್‌ನಲ್ಲಿ ಫಾರ್ಮ್ ಹೌಸ್ ಖರೀದಿಸಿದ ದಿನ ಅರ್ಥಾತ್‌ ಕೊನೆಯ ವಹಿವಾಟು ನಡೆಸಿದ ದಿನ 2006 ಜುಲೈ 5.
2005 ಜುಲೈ14 - ಆತನ ವ್ಯಾನ್ಕೊವರ್‌ಗೆ ತೆರಳಿ ಅಲ್ಲಿ ತನ್ನ ಬಳಿ ಇದ್ದ ಕೆಂಪು ಪೇಪರ್‌ ಕ್ಲಿಪ್ ಅನ್ನು ಮೀನಿನ ಆಕಾರದ ಪೆನ್ ಜತೆ ಬದಲಾಯಿಸಿಕೊಂಡ.ಅದೇ ದಿನ ಆ ಪೆನ್ನನ್ನು ವಾಷಿಂಗ್ಟನ್‌ ಸೆಟ್ಟಲ್‌ನಲ್ಲಿ ಕೈಯಿಂದ ಮಾಡಿದ "ಬಾಗಿಲ ಹಿಡಿ"ಗೆ ಬದಲಾಯಿಸಿಕೊಂಡ. ಈ ಬಾಗಿಲ ಹಿಡಿಗೆ"Knob-T" ಎಂದು ಹೆಸರು.
2005 ಜುಲೈ25 ರಂದು ಆತನ ಮಸ್ಸಾಚುಸೆಟ್ಸ್ನ ಆಮ್ಹೆರಸ್ಟ್ ಕಡೆಗೆ ಪಯಣಿಸಿ ಅಲ್ಲಿ ತನ್ನ ಫ್ರೆಂಡ್‌ಗೆ "Knob-T" ಕೊಟ್ಟು ಆತನಲ್ಲಿದ್ದ ಕೋಲ್ಮನ್‌ ಕ್ಯಾಂಪ್ ಸ್ಟವ್(ಇಂಧನದೊಂದಿಗೆ) ಪಡೆದುಕೊಂಡ.
2005 ಸೆಪ್ಟೆಂಬರ್‌ 24 ರಂದು ಆತ ಕ್ಯಾಲಿಫೋರ್ನಿಯಕ್ಕೆ ತೆರಳಿ ಅಲ್ಲಿ ಆ ಸ್ಟವನ್ನು ಹೋಂಡಾ ಜನರೇಟರ್‌ ಜತೆ ಬದಲಾಯಿಸಿಕೊಂಡ.
2005 ನವೆಂಬರ್‌ 16 ರಂದು ಕ್ವೀನ್ಸ್‌ ಮಸ್ಪೆತ್‌ನಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿ "Instant Party-(an empty keg, an IOU for filling the keg with the beer of the holder’s choice, and a neon Budweiser sign.)"ಗೆ ಜನರೇಟರನ್ನು ಬದಲಾಯಿಸಿಕೊಂಡ.
2005 ಡಿಸೆಂಬರ್ 8 ರಂದು ಆ "Instant party"ಯನ್ನು ಮಿಚೆಲ್‌ ಬರಾಟ್ಟೆ ಎಂಬ ಕ್ಯುಬೆಕ್‌ ಹಾಸ್ಯಗಾರ, ರೇಡಿಯೋ ಸೆಲೆಬ್ರಿಟಿಯ ಸ್ಕಿ-ಡೂ ಸ್ನೋಮೊಬೈಲ್ ಜತೆ ಬದಲಾಯಿಸಿದ.
2006 ಜನವರಿ 7ರ ವೇಳೆಗೆ ಸ್ಕಿ- ಡೂ ಮೊಬೈಲನ್ನು ಯಾಕ್‌ ಟ್ರಿಪ್‌ಗೆ ಬದಲಾಯಿಸಿಕೊಂಡು, ಅದನ್ನು ಕ್ಯೂಬ್‌ ವ್ಯಾನ್‌ಗೆ ಬದಲಾಯಿಸಿದ.
2006 ಫೆಬ್ರವರಿ 22ರ ವೇಳೆಗೆ ಆ ಕ್ಯೂಬ್‌ ವ್ಯಾನನ್ನು ಒಂಟಾರಿಯೋದಲ್ಲಿ ರೆಕಾರ್ಡಿಂಗ್‌ ಕಾಂಟ್ರ್ಯಾಕ್ಟ್‌ಗೆ ನೀಡಿದ.
2006 ಏಪ್ರಿಲ್‌ 11ರ ವೇಳೆಗೆ ಅರಿಝೋನಾದಲ್ಲಿ ಜೋಡಿ ನಾಟ್‌ ಎಂಬಾತನಿಗೆ ಒಂದು ವರ್ಷದ ಬಾಡಿಗೆಗೆ ಅದನ್ನು ಕೊಟ್ಟ.
2006 ಏಪ್ರಿಲ್‌ 26ರ ವೇಳೆಗೆ ಆ ಒಂದು ವರ್ಷದ ಬಾಡಿಗೆ ಹಣವನ್ನು ಅರಿಝೋನಾದ ಅಲೈಸ್‌ ಕೂಪರ್‌ ಎಂಬಾತನಿಗೆ ಕೊಟ್ಟ.
2006 ಮೇ 26 ರ ವೇಳೆಗೆ ಅಂದರೆ ಒಂದು ತಿಂಗಳ ಬಳಿಕ ಅಲೈಸ್‌ ಕೂಪರ್ ಬಳಿ ಇದ್ದ ಕಿಸ್‌ ಮೋಟರೈಸಡ್ ಸ್ನೋ ಗ್ಲೋಬನ್ನು ಪಡೆದ.
2006 ಜೂನ್‌ 2 ರ ವೇಳೆಗೆ ಆ ಕಿಸ್‌ ಮೋಟರೈಸ್ಡ್‌ ಸ್ನೋ ಗ್ಲೋಬನ್ನು ಬೇಡಿಕೆ ಮೇರೆಗೆ ಕೊರ್ಬಿನ್‌ ಬರ್ನ್‌ಸೆನ್‌ ಸಿನಿಮಾದಲ್ಲಿ ಬಳಸುವುದಕ್ಕೆ ನೀಡಿದ.
2006 ಜುಲೈ 5 ರ ವೇಳೆಗೆ ಆ ಮೂವಿಯಲ್ಲಿ ಕಿಸ್‌ ಮೋಟರೈಸ್ಡ್‌ ಗ್ಲೋಬ್‌ ಬಳಸಿದ್ದಕ್ಕೆ ಪ್ರತಿಫಲವಾಗಿ ಸಸ್‌ಕಾಚ್‌ವನ್‌ ಕಿಪ್ಲಿಂಗ್‌ ಎಂಬಲ್ಲಿ ಇರುವ ಎರಡು ಮಹಡಿಯ

 

Author : ನೆಟ್ ಸಂಚಾರಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited