Untitled Document
Sign Up | Login    
ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲ ಉತ್ಪಾದನೆ

ಸಾಂದರ್ಭಿಕ ಚಿತ್ರ

ಪ್ಲಾಸ್ಟಿಕ್ ನಿಂದ ಪರಿಸರ ಹಾಳುಗತ್ತದೆ ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಕೂಡ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಪರಿಸರ ನಾಶಕ್ಕೆ ಕಾರಣವಾಗುತ್ತದೆ ಎಂಬ ಕೂಗು ಒಂದೆಡೆ ಕೇಳಿಬರುತ್ತಿದೆ. ಇಂತಹ ಆತಂಕಕ್ಕೆ ಇಲ್ಲೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಪರಿಹಾರವೊಂದನ್ನು ಕಂಡು ಹಿಡಿದಿದ್ದಾನೆ.

ಪ್ಲಾಸ್ಟಿಕ್ ತ್ಯಾಜ್ಯದಿಂದ ಕಚ್ಚಾ ತೈಲವನ್ನು ತಯಾರಿಸಬಹುದು ಎಂಬುದನ್ನು ಹುಲಕೋಟಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಅತೀಕ್ ಸಾಧಿಸಿ ತೋರಿಸಿದ್ದಾನೆ. ರಾಯಚೂರು ಮೂಲದವರಾದ ಮೊಹಮ್ಮದ್ ಅತಿಕ್, ಗದಗ ಜಿಲ್ಲೆಯ ಹುಲಕೋಟೆಯ ಗ್ರಾಮೀಣ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ಕಚ್ಚಾ ತೈಲದಿಂದ ಪೆಟ್ರೋಲಿಯಂ ಉತ್ಪನ್ನಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸಿದ್ಧಪಡಿಸಬಹುದು ಎಂದು ಮುಹಮ್ಮದ್ ಪ್ರತಿಪಾದಿಸುತ್ತಾರೆ.

ಬಳಕೆ ಮಾಡಿದ ತ್ಯಾಜ್ಯ ರೂಪದ ಪ್ಲಾಸ್ಟಿಕ್ ನ್ನು ಸಂಗ್ರಹಿಸಿ, ಅದರಲ್ಲಿ ಮಣ್ಣು ಹಾಗೂ ಮರಳು ಇರದಂತೆ ಸ್ವಚ್ಛಗೊಳಿಸಬೇಕು. ಪ್ಲಾಸ್ಟಿಕ್ ನಲ್ಲಿರುವ ತೇವಾಂಶ ತೆಗೆಯಲು ಕಾಸ್ಟಿಕ್ ಸೋಡಾ/ಸೋಡಿಯಂ ಹೈಡ್ರಾಕ್ಸೈಡ್ (ಎನ್ ಎಒಹೆಚ್) ಬಳಸಲಾಗುತ್ತದೆ.
ಬಳಿಕ ಪ್ಲಾಸ್ಟಿಕ್ ನಲ್ಲಿರುವ ಹೈಡ್ರೋಕಾರ್ಬನ್ ನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಉಷ್ಣವಿಭಜನೆ ಚೇಂಬರ್ ನಲ್ಲಿ ವೇಗವರ್ಧಕ(ಕ್ಯಾಟಲಿಸ್ಟ್) ಅಂಶಗಳಾದ ಕ್ಯಾಲ್ಸಿಯಂ ಡೈ ಹೈಡ್ರಾಕ್ಸೈಡ್, ಖನಿಜ ಅಂಶಗಳೊಂದಿಗೆ ಸುಮಾರು 800 ಡಿಗ್ರಿ ಸೆಲ್ಸಿಯಸ್ ನಲ್ಲಿ ಕುಡಿಸಬೇಕು. ಪ್ಲಾಸ್ಟಿಕ್ ಹಾಗೂ ಕ್ಯಾಟಲಿಸ್ಟ್ ನ್ನು 4:1ರ ಅನುಪಾತದಲ್ಲಿ ಸೇರಿಸಬೇಕು.

ಉಷ್ಣಾಂಶ ಹೆಚ್ಚಿದಂತೆಲ್ಲ ಪ್ಲಾಸ್ಟಿಕ್ ನಲ್ಲಿರುವ ಹೈಡ್ರೋಕಾರ್ಬನ್ ಸರಳೀಕರಣಗೊಂದು ಕಚ್ಚಾತೈಲ ರೂಪದಲ್ಲಿ ತಂಪಾಗಿಸುವ ಚೇಂಬರ್ ನಲ್ಲಿ ಶೇಖರಣೆಗೊಳ್ಳತ್ತದೆ. ನಂತರ ಈ ಕಚ್ಚಾ ತೈಲವನ್ನು ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಇನ್ನಿತರ ಪೆಟ್ರೋಲಿಯಂ ಉತ್ಪನ್ನಗಳನ್ನಾಗಿ ಪರಿವರ್ತಿಸಬೇಕು.

ಸುಮಾರು 200ಗ್ರಾಮ್ ನಷ್ಟು ಪ್ಲಾಸ್ಟಿಕ್ ನ್ನು ಬಳಸಿ ಕಚ್ಚಾತೈಲ ತಯಾರಿಕೆಗೆ ಮುಂದಾದರೆ ಸುಮಾರು 40ಎಂ ಎಲ್ ನಷ್ಟು ಕಚ್ಚಾತೈಲ ದೊರೆಯಲಿದೆ. 200ಗ್ರಾಮ್ ನಷ್ಟು ಪ್ಲಾಸ್ಟಿಕ್ ನ್ನು ಕಚ್ಚಾ ತೈಲವಾಗಿ ಪರಿವರ್ತಿಸಿದ ನಂತರವೂ ಸುಮಾರು 50 ಗ್ರಾಂ ನಷ್ಟು ಅಂತಿಮ ಪ್ಲಾಸ್ಟಿಕ್ ತ್ಯಾಜ್ಯ ಉಳಿಯಲಿದೆ. ಇದನ್ನು ಇಟ್ಟಿಗೆ ಮತ್ತು ಹೆಂಚುಗಳನ್ನು ತಯಾರಿಸಲು ಉಪಯೋಗಿಸಬಹುದಾಗಿದೆಯಂತೆ. ಕೇವಲ 2,500 ರೂ ವೆಚ್ಚದಲ್ಲಿ ಅತಿಕ್ ಈ ಮಾದರಿ ರೂಪಿಸಿದ್ದಾರೆ.

ಇದೊಂದು ಪರಿಸರ ಸ್ನೆಹಿ ಸಂಶೋಧನೆಯಾಗಿದ್ದು, ವಿದ್ಯಾರ್ಥಿಯ ಯತ್ನಕ್ಕೆ ಪೂರಕ ಸಹಕಾರ ದೊರೆತಲ್ಲಿ ಇದೊಂದು ಉತ್ತಮ ಸಂಶೋಧನೆಯಾಗುವುದು ಸುಳ್ಳಲ್ಲ.

 

Author : ಸಂಗ್ರಹ ಲತಾ.ಬಿ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited