Untitled Document
Sign Up | Login    
ಬೆಂಗಳೂರಿಗರ ಮನ ತಣಿಸುವ ಜೆ.ಪಿ.ಪಾರ್ಕ್

JP PARK

ಬೆಂಗಳೂರಿನಲ್ಲಿ ಜನರ ತನು ಮನ ತಣಿಸುವ ಪಾರ್ಕ್ ಗಳ ಪೈಕಿ ಮುಂಚೂಣಿಯಲ್ಲಿರುವ ಮತ್ತಿಕೆರೆಯ ಜೆ.ಪಿ. ಪಾರ್ಕ್ ಕೂಡ ಒಂದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಅತಿದೊಡ್ಡ ಪಾರ್ಕ್ ಇದು.

ಜಾಲಹಳ್ಳಿ ಮತ್ತು ಮತ್ತಿಕೆರೆ ಜಂಕ್ಷನ್ ನಡುವೆ ಇರುವ ಈ ಪಾರ್ಕನ್ನು 2006ರಲ್ಲಿ ಬಿಬಿಎಂಪಿ ಸ್ಥಾಪಿಸಿದೆ. ಬೆಳ್ಳಂ ಬೆಳಗ್ಗೆ ಮತ್ತು ಸಂಜೆ ವಾಕಿಂಗ್, ವಾಯು ವಿಹಾರಕ್ಕಿದು ಹೇಳಿ ಮಾಡಿಸಿದ್ದು, ಈ ಪಾರ್ಕಿನ ಒಳಗೆ ಪ್ರವೇಶಿಸುತ್ತಿದ್ದಂತೆ ಕಾಂಕ್ರೀಟ್ ಕಾಲುದಾರಿ ನಿಮ್ಮನ್ನು ಮುಂದಕ್ಕೆ ಕರೆದೊಯ್ಯುತ್ತದೆ. ಗ್ರಾಮ ಜೀವನವನ್ನು ಪ್ರತಿಬಿಂಬಿಸುವ ಚಿತ್ರಣ ನಿಮ್ಮ ಮುಂದೆ ಅನಾವರಣಗೊಳ್ಳುತ್ತದೆ. ಬೆಳ್ಳಂ ಬೆಳಗ್ಗೆ ಮಂಜು ಮುಸುಕಿದ ವಾತಾವರಣ ಇದ್ದರಂತೂ ಕೇಳುವುದೇ ಬೇಡ.. ಕಾಡು ಪ್ರಾಣಿಗಳ ಪ್ರತಿಕೃತಿಯೂ ಇಲ್ಲಿದ್ದು, ಮುಸ್ಸಂಜೆ ಮಂದ ಬೆಳಕಿನ ವಾತಾವರಣದಲ್ಲಿ ನೋಡಬೇಕು ಅದರ ಸೊಬಗನ್ನು.. ಸುಮಾರು 85 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ ಈ ಪಾರ್ಕ್.

ಜೆಪಿ ಪಾರ್ಕಿನ ಒಳಗಿನ ಒಂದು ದೃಶ್ಯ...
ಜಾಗಿಂಗ್ ಮಾಡಲೆಂದೇ ಅಳವಡಿಸಲಾಗಿರುವ 4.5 ಕಿ.ಮೀ. ಉದ್ದದ ಟ್ರ್ಯಾಕಿನಲ್ಲಿ ಬೆಳಗ್ಗೆ ಮತ್ತು ಸಂಜೆ ಜನ ಸಂದಣಿ ಹೆಚ್ಚಾಗಿರುತ್ತದೆ. ಪಾರ್ಕಿನ ಮೂಲೆ ಮೂಲೆಗಳಲ್ಲಿ ಕೆಲವು ಮಂಟಪಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕೆಲವರು ಯೋಗಾಭ್ಯಾಸ, ಲಾಫ್ಟರ್ ಕ್ಲಬ್ ಸದಸ್ಯರ ನಗುವಿನ ಕ್ಲಾಸ್ ಮತ್ತು ಇತರೆ ಚಟುವಟಿಕೆಗಳು ನಡೆಯುತ್ತವೆ. ಪಾರ್ಕಿನ ಮ್ಯೂಸಿಕಲ್ ಫೌಂಟೇನ್ ಹತ್ತಿರ ಬೆಳಗ್ಗೆ 6 ಗಂಟೆಯಿಂದ ಮಕ್ಕಳ ಗುಂಪೊಂದು ಇಲ್ಲಿ ಟೇಕ್ವಾಂಡೊ ತರಬೇತಿ ಪಡೆಯುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7ರ ನಂತರ ಮ್ಯೂಸಿಕಲ್ ಫೌಂಟೇನ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

"ಈ ಪಾರ್ಕ್ ಬೆಂಗಳೂರಿನ ಜಂಜಡದ ಬದುಕಿನ ನಡುವೆ ಜನರಿಗೆ ಉತ್ತಮ ಆರೋಗ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ. ಇಲ್ಲಿ, ಜಾಗಿಂಗ್ ಆದ್ರೂ ಮಾಡಬಹುದು, ಯೋಗಾಭ್ಯಾಸವಾದ್ರೂ ಮಾಡಬಹುದು. ವಾಕಿಂಗ್ ಅಥವಾ ಇನ್ನಾವುದೇ ರೀತಿಯ ಶಾರೀರಿಕ ವ್ಯಾಯಾಮ ನಡೆಸುವುದಕ್ಕೆ ಅವಕಾಶವಿದೆ. ಇಂತಹ ಪಾರ್ಕ್ ಸೌಲಭ್ಯ ಎಲ್ಲೆಡೆ ಇದ್ದರೆ ಇನ್ನೂ ಉತ್ತಮ'' ಎನ್ನುತ್ತಾರೆ ಮಲ್ಲೇಶ್ವರಂ ನಿವಾಸಿ ರಾಧಾಕೃಷ್ಣ.
ಬಹಳ ಜನರನ್ನು ತನ್ನತ್ತ ಸೆಳೆಯುತ್ತಿರುವ ಈ ಪಾರ್ಕ್ ಚಟುವಟಿಕೆ ಅಷ್ಟಕ್ಕೇ ಸೀಮಿತವಾಗಿಲ್ಲ. ಇಲ್ಲಿ, ರಕ್ತದಾನ, ನೇತ್ರ ಚಿಕಿತ್ಸಾ ಶಿಬಿರ, ಮಧುಮೇಹ ಕ್ಯಾಂಪ್ ಹೀಗೆ ಆರೋಗ್ಯ ತಪಾಸಣಾ ಶಿಬಿರಗಳೂ ನಡೆಯುತ್ತಿರುತ್ತವೆ ಎಂಬುದು ಕೂಡಾ ಮೆಚ್ಚತಕ್ಕ ವಿಚಾರ.

 

Author : ಬೆಂ.ಸ. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited