Untitled Document
Sign Up | Login    
ನನ್ನ ಮನಸ್ಸಿಗೆ ಲಗ್ಗೆ ಇಟ್ಟ ಬೇಕಲಕೋಟೆ


ಪರೀಕ್ಷೆಯ ಗಡಿಬಿಡಿಯಿಂದಾಗಿ ಗಣಿತದ ಪ್ರಮೇಯಗಳು, ವಿಜ್ಞಾನದ ವ್ಯಾಖ್ಯೆಗಳು, ಸಮಾಜದ ಯುದ್ಧಗಳು, ಮನಸ್ಸನ್ನು ನಿಶ್ಚಲ ಸ್ಥಿತಿಗೆ ತಂದು ಬಿಟ್ಟಿತ್ತು. ಪರೀಕ್ಷೆ ಮುಕ್ತಾಯಗೊಂಡ ಕೂಡಲೇ ತಲೆಯಿಂದ ಸಾವಿರ ಕೆ.ಜಿ. ಭಾರವೊಂದನ್ನು ಕೆಳಗಿಳಿಸಿದ ನಿರಾಳತೆ. ಆದರೆ 24 ಗಂಟೆ ಮನೆಯಲ್ಲಿಯೇ ಕುಳಿತುಕೊಂಡು ರಜೆಕಳೆಯುವುದು ಹೇಗೆಂಬ ತಲೆನೋವು ಶುರುವಾಯಿತು. ಆಗ ತಾನೆ ಅಪ್ಪ ತಮ್ಮ ಹುಟ್ಟೂರಾದ ಕಾಸರಗೋಡಿನಲ್ಲಿರುವ ಬೇಕಲಕೋಟೆಗೆ ಹೋಗೋಣವೆಂದು ಹೇಳಿದರು. ಅಬ್ಬಾ! ಸ್ವರ್ಗವೇ ಬಂದು ನನ್ನ ಮಡಿಲಿಗೆ ಬಿತ್ತು ಎಂಬಷ್ಟು ಖುಷಿ, ಎಲ್ಲೆ ಇಲ್ಲದ ಸಂಭ್ರಮ. ಇನ್ನೇನು ಹೊರಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡೆವು.

ಅಂದು ಅಕ್ಟೋಬರ್ 21,2011 ಬೆಳಗ್ಗೆ ಸುಮಾರು 4 ಗಂಟೆಗೆ ಕುಟುಂಬ ಸಮೇತರಾಗಿ ನಾವು ಮನೆಯಿಂದ ಹೊರಟೆವು. ಬೇಕಲಕೋಟೆಗೆ ಕಾಸರಗೋಡಿನಿಂದ ಚೆರ್ಕಳ ಮಾರ್ಗವಾಗಿ ಹೋಗಬೇಕು. ಅಲ್ಲಿಂದ ಚಟ್ಟಂಚಾರು ಎಂಬ ಪುಟ್ಟ ಊರಿನ ಮಡಿಲು ಸೇರಿದೆವು. ಇನ್ನು ಬೇಕಲಕೋಟೆಗೆ ಕೇವಲ 6 ಕಿ.ಮೀಗಳಷ್ಟೆ. ನಾವು ಮೊದಲ ಬಾರಿ ಬೇಕಲಕೋಟೆಗೆ ಭೇಟಿ ನೀಡಿದ್ದರಿಂದ ನಮಗೆ ರಸ್ತೆ ತಿಳಿಯುವುದು ಕಠಿಣವಾಯಿತು. ಅನೇಕರ ಬಳಿ ರಸ್ತೆ ಕೇಳಿಕೊಂಡು ಬೇಕಲಕೋಟೆಗೆ ತಲುಪಿದೆವು. ಕೋಟೆಯೊಳಕ್ಕೆ ಪ್ರವೇಶಿಸುತ್ತಿದ್ದಂತೆ ನನ್ನ ಮನಸ್ಸು ಯಾವುದೋ ಲೋಕದಲ್ಲಿ ವಿಹರಿಸುತ್ತಿದೆ ಎನಿಸಿಬಿಟ್ಟಿತು.
ತಂಪಾದ ಗಾಳಿ, ಹಸಿರು ಪರಿಸರ, ವ್ಯವಸ್ಥಿತವಾಗಿ ಕಟ್ಟಲಾಗಿದ್ದ ಕೋಟೆಗಳು ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಬೇಕಲಕೋಟೆಯ ಸುತ್ತಲೂ ಸಮುದ್ರ. ಇದು ಕೋಟೆಯ ಬೆರಗನ್ನು ಇನ್ನೂ ಹೆಚ್ಚಿಸಿತ್ತು. ಸಂಜೆಯ ವೇಳೆ ಸಮುದ್ರ ತೀರಕ್ಕೆ ಹೋದೆವು. ಅಲ್ಲಿ ಮನಬಂದಂತೆ ಆಟವಾಡಿದೆವು. ಬೇಕಲಕೋಟೆಯನ್ನು ಮಿನಿ ಚೈನಾಗೋಡೆ ಎಂದೇ ಹೇಳಬಹುದು.
ಸರಿಸುಮಾರು 6.45 ರ ವೇಳೆಗೆ ಸೂರ್ಯಾಸ್ತಮಾನವನ್ನು ವೀಕ್ಷಿಸಿದೆವು. ಮನೆಗೆ ಬರಲು ಮನಸ್ಸೇ ಆಗಲಿಲ್ಲ. ಆದರೆ ಮನೆಯವರ ಒತ್ತಾಯದ ಮೇರೆಗೆ ವಿಧಿಯಿಲ್ಲದೆ ಮನೆಗೆ ಬಂದೆನು. ರಜೆಯನ್ನು ಟಿ.ವಿ. ನೋಡುತ್ತಾ, ಮೆಸೇಜಿಂಗ್, ಚಾಟಿಂಗ್ ಮೂಲಕ ಕಳೆಯುವುದರ ಬದಲು ಇಂತಹ ಸುಂದರ ಸ್ಥಳಗಳಿಗೆ ಹೋಗಿ ಬನ್ನಿ. ಅದರ ಸಿಹಿಯಾದ ಅನುಭವಗಳನ್ನು ನಿಮ್ಮ ಮನಸ್ಸಿನ ಪುಟದಲ್ಲಿ ದಾಖಲು ಮಾಡಿ.

 

Author : ಸಾನಿಧ್ಯ ಶರ್ಮ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited