Untitled Document
Sign Up | Login    
ಹಾರೋದಿಲ್ಲ ಈ ವಿಮಾನ !

ವಿಮಾನ ರೆಸ್ಟೋರೆಂಟ್

* ಕೋಸ್ಟರಿಕಾದಲ್ಲಿದೆ ಈ ವಿಮಾನ * ಇದು ವಿಲಾಸಿ ರೆಸ್ಟೋರೆಂಟ್ * ಬೋಯಿಂಗ್ 727 ಮಾದರಿ ವಿಮಾನ

ಹಳೆ ಸಾಮಗ್ರಿಗಳೆಲ್ಲ ಒಂದೋ ಸೆಕಂಡ್ಸ್ ಬಜಾರ್ ಗೆ ಇಲ್ಲಾಂದ್ರೆ ಗುಜರಿ ಸೇರುವುದು ವಾಡಿಕೆ. ಆದರೆ, ವಿಮಾನಗಳನ್ನೇನು ಮಾಡುತ್ತಾರೆ. ಹೀಗೊಂದು ಕುತೂಹಲದ ಪ್ರಶ್ನೆ ಮೂಡುವುದಕ್ಕೆ ಕಾರಣವೂ ಇಲ್ಲದಿಲ್ಲ. ಇತ್ತೀಚೆಗೆ ದೆಹಲಿ ಮೂಲದ ಕಂಪನಿಯೊಂದು ಹಳೆ ವಿಮಾನವೊಂದನ್ನು ಹರಾಜಿನಲ್ಲಿ ಖರೀದಿಸಿದ್ದು, ಅದನ್ನು ಇಂದೋರ್ ಕಡೆ ಸಾಗಿಸಿ ಅಲ್ಲಿ ವಿಮಾನ ರೆಸ್ಟೋರೆಂಟ್ ನಿರ್ಮಿಸುತ್ತಿದೆ!. ಇದು ಎಲ್ಲರ ಕುತೂಹಲ ಕೆರಳಿಸಿದೆ.

ವಿಮಾನ ರೆಸ್ಟೋರೆಂಟ್ ಭಾರತದ ಮಟ್ಟಿಗೆ ಹೊಸ ಕಲ್ಪನೆ. ಅಮೆರಿಕ, ಹಂಗೇರಿ, ನೆದರ್ ಲ್ಯಾಂಡ್, ನ್ಯೂಜಿಲೆಂಡ್ ಸೇರಿದಂತೆ ವಿದೇಶಗಳಲ್ಲಿ ಈಗಾಗಲೇ ವಿಮಾನ ರೆಸ್ಟೋರೆಂಟ್ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ. ಅಲ್ಲದೆ, ಕೆಲವು ಕಡೆ ಹಳೆ ವಿಮಾನವನ್ನು ಬೇಕರಿಯನ್ನಾಗಿ, ಮನೆಯನ್ನಾಗಿ ಪರಿವರ್ತಿಸಿದ ನಿದರ್ಶನವೂ ಇದೆ. ವಿಮಾನ ರೆಸ್ಟೋರೆಂಟ್ ಹೇಗಿರುತ್ತದೆ ಎಂದು ಕೇಳಿದರೆ ಅಮೆರಿಕದ ಕೋಸ್ಟರಿಕಾದಲ್ಲಿರುವ ವಿಲಾಸಿ ರೆಸ್ಟೋರೆಂಟ್ ಕಣ್ಣಮುಂದೆ ಬರುತ್ತದೆ.

1965ರ ಮಾದರಿಯ ಬೋಯಿಂಗ್ 727 ವಿಮಾನವನ್ನು ಭದ್ರ ಬುನಾದಿ ಮೇಲೆ ಕೂರಿಸಲಾಗಿದೆ. ಇನ್ನೇನು ಟೇಕ್ ಆಫ್ ಸ್ಥಿತಿಯಲ್ಲಿರುವಂತೆ ಕಾಣುವ ವಿಮಾನ ಆಗಸಕ್ಕೇರುವ ಪ್ರಯತ್ನದಲ್ಲಿದೆಯೋ ಎಂಬಂತೆ ಭಾಸವಾಗುತ್ತದೆ. ಆದರೆ, ಇದನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದು, ಇದು ಪ್ರವಾಸಿಗರ ಮನ ಸೆಳೆದಿದೆ. ಸ್ಯಾನ್ ಜೋಸ್ ವಿಮಾನ ನಿಲ್ದಾಣದಲ್ಲಿ ತುಕ್ಕು ಹಿಡಿಯುತ್ತಾ ಬಿದ್ದಿದ್ದ ವಿಮಾನವನ್ನು ಐದು ಬೃಹತ್ ಟ್ರಕ್ ಗಳ ಮೂಲಕ ಸಾಗಿಸಿ ಮಾನುವೆಲ್ ಅಂಟಾನಿಯೋದ ಅರಣ್ಯ ಪ್ರದೇಶಕ್ಕೆ ಸಾಗಿಸಿದ್ದು ಅಲ್ಲಿ ಬೃಹತ್ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಇದರೊಳಗೆ ಪ್ರವೇಶಿಸಬೇಕಾದರೆ ಬರೋಬ್ಬರಿ 50 ಮೆಟ್ಟಿಲೇರಬೇಕು.

ಇನ್ನು ಒಳಪ್ರವೇಶಿಸಿದರೆ ಅಲ್ಲಿಂದ ಕಾಣುವ ದೃಶ್ಯಗಳು ನಿಜಕ್ಕೂ ನಯನ ಮನೋಹರ. ಒಂದೆಡೆ ವಿಶಾಲ ಸಮುದ್ರದ ದೃಶ್ಯಾವಳಿಯಾದರೆ, ಇನ್ನೊಂದೆಡೆ ಅರಣ್ಯದ ಸಸ್ಯಕಾಶಿಯ ವೈಭವ. ಈ ಸೊಬಗು ನೋಡುವುದಕ್ಕಾಗಿಯೇ ವಿಮಾನದ ಬಲಬದಿಯ ರೆಕ್ಕೆಯ ಮೇಲೆ ಮರದ ಡೆಕ್(ಆವರಣ) ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ವಿಮಾನದೊಳಗೆ ಎರಡು ಹವಾನಿಯಂತ್ರಿತ ಹಾಗೂ ಸುಸಜ್ಜಿತ ಬೆಡ್ ರೂಂಗಳಿವೆ. ಒಟ್ಟಿನಲ್ಲಿ ನಿವೃತ್ತಿ ನಂತರ ಮುಂದೇನು ಎಂಬ ಪ್ರಶ್ನೆಗೆ ವಿಮಾನಗಳಿಗೂ ಒಂದು ಬದುಕಿದೆ ಎಂಬುದು ಇದೀಗ ನಿಜವಾಗತೊಡಗಿದೆ !

 

Author : ನೆಟ್ ಸಂಚಾರಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited