Untitled Document
Sign Up | Login    
ಭಾವ ಜಗತ್ತಿನಲ್ಲಿ ಚಿತ್ರವೇ ಮಾತು

Boy with Peacock

ಅವರು ಮಾತನಾಡುವುದಿಲ್ಲ. ಆದರೆ ಅವರ ಚಿತ್ರಗಳು ಮಾತನಾಡುತ್ತವೆ.ಭಾವನೆಗಳನ್ನೂ ವ್ಯಕ್ತಪಡಿಸುತ್ತವೆ. ಇಂಥ ಅಪರೂಪದ ಕಲಾವಿದೆ ಬೆಂಗಳೂರಿನ ಸುಪ್ರಿಯಾ.  ಚಿತ್ರಗಳೇ ಅವರಿಗೆ ಸಂವಹನ ಮಾಧ್ಯಮ ! ಇದುವರೆಗೂ ನೂರಾರು ಚಿತ್ರಗಳನ್ನು ಬಿಡಿಸಿರುವ ಅವರು, ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿ, ಆಶೋಕ ಹೋಟಲ್, ನ್ಯಾಶನಲ್ ಕಾಲೇಜ್ ಮೈದಾನ, ಹೋಟಲ್ ಚಾನ್ಸರಿ ಹಾಗೂ ಇನ್ನಿತರ ಸ್ಥಳಗಳಲ್ಲಿ  ನಡೆದ ಚಿತ್ರಕಲಾ ಪ್ರದರ್ಶನಗಳಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

Face Butterfly

ಆಯಿಲ್, ಆಕ್ರೋಲಿಕ್, ಜಲ ವರ್ಣದ ಮೂಲಕ  ಹಲವಾರು ಚಿತ್ರಗಳನ್ನು ಬಿಡಿಸಿರುವ ಇವರಿಗೆ ಬೆಂಗಳೂರು ಯುವ ಕಲಾ ಕೇಂದ್ರದಿಂದ  ಕಲಾ ವಿಭೂಷಣೆ ಪ್ರಶಸ್ತಿ (೨೦೦೨) , ಹೈದ್ರಾಬಾದ್‌ನ  ವಿಜಯ ಇನ್‌ರ್ಫಾಮೇಷನ್ ಆರ್ಟ್ ಅಕಾಡೆಮಿ ವತಿಯಿಂದ  ರಾಷ್ಟ್ರೀಯ ಪ್ರಶಸ್ತಿ (೨೦೦೪),  ಹರಿಯಾಣದ ಕ್ಷಿತಿಜ ಸಾಂಸ್ಕತಿಕ ಸಂಸ್ಥೆ ನಡೆಸಿದ ಅಖಿಲ ಭಾರತ ಮಕ್ಕಳ ಕಲಾ ಪ್ರದರ್ಶನದಲ್ಲಿ ಚಿನ್ನದ ಪದಕ (೨೦೦೬), ಗದಗದ ಕಲಾ ವಿಕಾಸ ಪರಿಷತ್‌ನಿಂದ ಯುವ ಸಿರಿ ಪ್ರಶಸ್ತಿ  (೨೦೦೬), ಬೆಂಗಳೂರಿನ ಸುರ್ವೆ ಸಾಂಸ್ಕತಿಕ ಅಕಾಡೆಮಿಯಿಂದ ಮಯೂರ ಪ್ರಶಸ್ತಿ (೨೦೦೬), ಬೆಂಗಳೂರಿನ ಶ್ರವಣಮಾಂದ್ಯರ ಕಲಾ ಮತ್ತು ಸಾಂಸ್ಕತಿಕ ಪ್ರತಿಷ್ಠಾನದಿಂದ ವರ್ಷದ ಮಹಿಳೆ ಪ್ರಶಸ್ತಿ  (೨೦೦೬) ಲಭಿಸಿವೆ.
Peacock
ಬೆಂಗಳೂರಿನ ತ್ಯಾಗರಾಜನಗರದ ನಿವಾಸಿ ಸುಪ್ರಿಯಾ ಅವರಿಗೆ  ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದರಲ್ಲಿ ಆಸಕ್ತಿ. ಇದನ್ನು ಗಮನಿಸಿದ ಪೋಷಕರು ಮಗಳನ್ನು ಅದರಲ್ಲಿ ಮುಂದುವರಿಯುವಂತೆ ಪ್ರೋತ್ಸಾಹಿಸಿದರು.
Boy and Tree
ಕೆನ್ ಕಲಾಶಾಲೆಯಲ್ಲಿ ೫ ವರ್ಷ ಕಲಾಭ್ಯಾಸ ಮಾಡಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ  ಲಲಿತಕಲೆಯಲ್ಲಿ  ೨ ವರ್ಷದ ಪಿ.ಜಿ. ಡಿಪ್ಲೋಮಾವನ್ನು ಮಾಡಿರುವ ಸುಪ್ರಿಯಾ ಸದ್ಯ ಕಲಾಶಾಲೆಯೊಂದರಲ್ಲಿ ಚಿತ್ರಕಲೆ ಕಲಿಸುತ್ತಿದ್ದಾರೆ. ಇವರಿಗೆ ನೃತ್ಯ ಮತ್ತು ಛಾಯಾಗ್ರಹಣದಲ್ಲೂ ಆಸಕ್ತಿ . 

 ಬಾಳಸಂಗಾತಿ ಗಿರಿಧರ್,ಸುಪ್ರಿಯಾಳ ಚಿತ್ರಕಲೆಗೆ ನೆರವಾಗುತ್ತಾ, ಅವರ ಸಾಧನೆಗೆ ಬೆಂಬಲ ನೀಡುತ್ತಿದ್ದಾರೆ.
ಇದೇ 17ರ ಭಾನುವಾರ ಭಾರತೀಯ ವಿದ್ಯಾ ಭವನದ ಇಎಸ್‌ವಿ ಸಭಾಂಗಣದಲ್ಲಿ  (ಹನುಮಂತರಾವ್ ಆರ್ಟ್ ಗ್ಯಾಲರಿ) ಸುಪ್ರಿಯಾ ಅವರ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಚಿತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಗಿರಿಧರ್ ಅವರನ್ನು 9741060002 ಮೂಲಕ ಸಂಪರ್ಕಿಸಬಹುದು. (ಇ-ಮೇಲ್ : hngiridhara@gmail.com)

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited