Untitled Document
Sign Up | Login    
ಹಳೆ ನೋಟನ್ನು ಹೊಸ ನೋಟಿಗೆ ಬದಲಾಯಿಸಿ !

ನೋಟಿನ ಹಿಂಭಾಗದಲ್ಲಿ ಗುರುತು ಹಾಕಿರುವಲ್ಲಿ ಯಾವುದೇ ಇಸವಿ ನಮೂದಿಸಿಲ್ಲ.

ಕೆಲವು ತಿಂಗಳ ಹಿಂದೆ ಗೀಚಿದ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧಿಸಲಿದೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಜನಸಾಮಾನ್ಯರ ನಡುವೆ ಚರ್ಚೆಯೂ ಆಗಿತ್ತು. ಆದರೆ, ಇದೀಗ ಹೊಸದೊಂದು ಪ್ರಕಟಣೆ ಹೊರಡಿಸಿದೆ. ಈ ವರ್ಷ ಮಾರ್ಚ್ 31ರ ನಂತರ 2005ಕ್ಕೂ ಮೊದಲು ಬಳಕೆಗೆ ಬಂದ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ ಎಂಬ ಒಕ್ಕಣೆ ಆ ಪತ್ರದಲ್ಲಿತ್ತು. ಈಗಾಗಲೇ ಹಳೆ ನೋಟು ಬದಲಾಯಿಸುವ ಕೆಲಸಕ್ಕೂ ಅದು ಚಾಲನೆ ನೀಡಿದೆ.

ಹಳೆ ನೋಟುಗಳಲ್ಲಿ ದೇಶದ ಆರ್ಥಿಕ ಭದ್ರತೆ ಕಾಪಾಡುವ ಅಂಶಗಳು ಕಡಿಮೆ ಇವೆ. ಹೀಗಾಗಿ ಯಥೇಚ್ಛವಾಗಿ ಕಳ್ಳನೋಟುಗಳು ಚಲಾವಣೆಗೆ ಬಂದಿವೆ. ಹೀಗಾಗಿ ಹಳೆ ನೋಟುಗಳನ್ನು ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ಆರ್ ಬಿಐ ಹೇಳಿಕೊಂಡಿದೆ. ಆದರೆ, ಹಳೆ ನೋಟು ವಾಪಸ್ ಪಡೆಯುವ ಪ್ರಕ್ರಿಯೆಗೆ ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಹೀಗಾಗಿ ಅವುಗಳು ಮಾರ್ಚ್ 31ರ ನಂತರ ಮಾನ್ಯತೆ ಕಳೆದುಕೊಳ್ಳುವುದಿಲ್ಲ. ಆದರೆ, ಮುಂದೆ ಅವುಗಳ ಮಾನ್ಯತೆಯನ್ನು ರದ್ದುಗೊಳಿಸುವ ಸಾಧ್ಯತೆ ದಟ್ಟವಾಗಿದೆ.

ನೋಟಿನ ಹಿಂಭಾಗದಲ್ಲಿ ಕೆಳಗೆ ಇಸವಿ ಇರುವ ನೋಟು 2005ರ ನಂತರದ್ದು..
ಆರ್ ಬಿಐ ನೀಡಿರುವ ಲೆಕ್ಕಾಚಾರದ ಪ್ರಕಾರ, 2013ರ ಮಾರ್ಚ್ 31ರ ಅವಧಿಯಲ್ಲಿ ದೇಶದಲ್ಲಿ 7351 ಕೋಟಿ ಹಳೆ ನೋಟುಗಳು ಚಲಾವಣೆಯಲ್ಲಿದ್ದವು. ಇವುಗಳ ಪೈಕಿ 500 ರೂ. ನೋಟುಗಳ ಪಾಲು 14.6%. 1000 ರೂ. ನೋಟುಗಳ ಪಾಲು 5.9%. ಇನ್ನೊಂದು ಅಂಕಿ ಅಂಶ ಪ್ರಕಾರ, 2005ರ ಡಿಸೆಂಬರ್ ವೇಳೆಗೆ ದೇಶದಲ್ಲಿದ್ದ ಹಳೆ ನೋಟುಗಳ ಸಂಖ್ಯೆ 3785 ಕೋಟಿ. ಇವುಗಳ ಮೌಲ್ಯ ಬರೊಬ್ಬರಿ 4 ಲಕ್ಷ ಕೋಟಿ ರೂ. ಒಂದೊಮ್ಮೆ ಇದರಲ್ಲಿ ಶೇಕಡ 10ರಷ್ಟು ಕಳ್ಳ ನೋಟು ಎಂದು ಹೇಳಿದರೂ, ಅದರ ಮೌಲ್ಯ 40 ಸಾವಿರ ಕೋಟಿ ಆಗುತ್ತದೆ.

ಎಷ್ಟಿದ್ದರೂ ಬದಲಾಯಿಸಿ: ನಾಗರಿಕರು ತಮ್ಮ ಬಳಿ ಎಷ್ಟೇ ಹಳೇ ನೋಟುಗಳಿದ್ದರೂ ಅವುಗಳನ್ನು ಹೊಸ ನೋಟಿಗೆ ಬದಲಾಯಿಸಿಕೊಳ್ಳಬಹುದು. 50000 ರೂ.ಮೌಲ್ಯಕ್ಕಿಂತ ಹೆಚ್ಚಿನ ನೋಟುಗಳನ್ನು ಬದಲಾಯಿಸುವಾಗ ಪ್ಯಾನ್ ನಂಬರ್ ಒದಗಿಸಬೇಕಾಗುತ್ತದೆ. ಜುಲೈ 1ರ ನಂತರ 500 ಮತ್ತು 1000 ರೂಗಳ 10ಕ್ಕಿಂತ ಹೆಚ್ಚು ನೋಟುಗಳನ್ನು ಬದಲಾಯಿಸುವುದಕ್ಕೆ ಗ್ರಾಹಕರು ತಮ್ಮ ಗುರುತಿನ ಚೀಟಿ, ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕ್ ಗೆ ಒದಗಿಸಬೇಕಾಗುತ್ತದೆ.

 

Author : ಚಿನ್ಮಯ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited