Untitled Document
Sign Up | Login    
ಕಪ್ ಕೇಕ್ ಎಟಿಎಂ !

ಕಪ್ ಕೇಕ್ ಎಟಿಎಂ

ಎಟಿಎಂ ಕೇಂದ್ರಕ್ಕೆ ಹೋಗಿ ಹಣ ಡ್ರಾ ಮಾಡಿದ ಅದೇ ಕ್ರಮದಲ್ಲಿ ಕಪ್ ಕೇಕ್ ಕೂಡ ಖರೀದಿಸಬಹುದು. ಅದಕ್ಕೂ ಒಂದು ಎಟಿಎಂ ಬಂದಿದೆ. ಆ ಎಟಿಎಂ ಎದುರು ನಿಂತು ಮೆನು ಆಯ್ಕೆ ಮಾಡಿದಾಗ ಅಲ್ಲಿ ವಿವಿಧ ಮಾದರಿಯ ಕಪ್ ಕೇಕ್ ಗಳ ಚಿತ್ರಣ ಕಂಡುಬರುತ್ತದೆ. ಅದರಲ್ಲಿ ನಿಮಗೆ ಯಾವ ಕೇಕ್ ಬೇಕೋ ಅದನ್ನು ಆಯ್ಕೆ ಮಾಡಿ ಖರೀದಿ ಪ್ರಕ್ರಿಯೆ ಮುಂದುವರಿಸಿದ ಬಳಿಕ, ನಿಮ್ಮ ಬಳಿ ಇರುವ ಕಪ್ ಕೇಕ್ ಎಟಿಎಂ ಕಾರ್ಡನ್ನು ಸ್ವೈಪ್ ಮಾಡಬೇಕು. ಕೆಲ ನಿಮಿಷದಲ್ಲೇ ಚಂದದ ಬಾಕ್ಸ್ ನಲ್ಲಿ ಸುತ್ತಲ್ಪಟ್ಟ ಕಪ್ ಕೇಕ್ ಆ ಎಟಿಎಂ ಯಂತ್ರದಿಂದ ಹೊರಬಂದು ನಿಮ್ಮ ಕೈ ಸೇರುತ್ತದೆ !

ಇದಕ್ಕಿಂತ ಖುಷಿ ಬೇರೇನು ಬೇಕು ಹೇಳಿ.. ಅಂದ ಹಾಗೆ ಈ ವಿಶೇಷ ಅನುಭವ ಪಡೆಯಬೇಕಾದರೆ ನೀವು ಅಮೆರಿಕದ ಲಾಸ್ ಏಂಜಲಿಸ್ ನ ಬೆವರ್ಲೇ ಹಿಲ್ ಗೆ ಹೋಗಬೇಕು. ಹೌದು.. ಸ್ಪ್ರಿಂಕ್ಲರ್ಸ್ ಕಪ್ ಕೇಕ್ಸ್ ಎಂಬ ಸಂಸ್ಥೆ 2012ರ ಮಾರ್ಚ್ 6ರಂದು ಜಗತ್ತಿನ ಮೊಟ್ಟ ಮೊದಲ ಕಪ್ ಕೇಕ್ ಮಾರಾಟ ಮಾಡುವ ಎಟಿಎಂ ಯಂತ್ರವನ್ನು ಗ್ರಾಹಕರಿಗೆ ಪರಿಚಯಿಸಿದೆ. ಇದೀಗ ಅಮೆರಿಕದ ಹಲವೆಡೆ ಕಪ್ ಕೇಕ್ ಎಟಿಎಂ ಜನಪ್ರಿಯವಾಗಿದ್ದು, ಆರಂಭಿಕ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ಎಟಿಎಂನಲ್ಲಿ 600 ಕಪ್ ಕೇಕ್ ಮಾರಾಟವಾಗಿದೆಯಂತೆ. 24 ಗಂಟೆಯೂ ಕಾರ್ಯಾಚರಿಸುವ ಈ ಎಟಿಎಂನಲ್ಲಿ ಪ್ರಸ್ತುತ ದಿನಂಪ್ರತಿ 1000 ಕೇಕ್ ಮಾರಾಟವಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

 

Author : ನೆಟ್ ಸಂಚಾರಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited