Untitled Document
Sign Up | Login    
ಸರ್ಕಾರದಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ !

ಭಾರತೀಯ ಮಹಿಳಾ ಬ್ಯಾಂಕ್‌ ಲೋಗೊ

ಹೌದು.. ಇದು ಸರ್ಕಾರಿ ಸ್ವಾಮ್ಯದ ಮೊದಲ ಮಹಿಳಾ ಬ್ಯಾಂಕ್. ಭಾರತೀಯ ಮಹಿಳಾ ಬ್ಯಾಂಕ್ ನ.19ರಿಂದ ತನ್ನ ವಹಿವಾಟು ಆರಂಭಿಸಿದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ದೇಶದ ಏಳು ಮಹಾನಗರಗಳಲ್ಲಿ ಇದು ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕ್ ಕೇವಲ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿದೆ. ಹೀಗಾಗಿ ಮಹಿಳಾ ಬ್ಯಾಂಕ್ ಕಾರ್ಯಾಚರಣೆ ಬಹಳ ಕುತೂಹಲ ಹುಟ್ಟಿಸಿದೆ.

ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಂಕ್‌ಗಳ ಪಟ್ಟಿಗೆ ಹೊಸ ಬ್ಯಾಂಕ್ ಸೇರ್ಪಡೆ ಎಂದು ಹೇಳಬಹುದಾದರೂ, ಇದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಹೊಸ ಅಧ್ಯಾಯ ಎಂದೇ ಹೇಳಬಹುದು. ದೇಶಾದ್ಯಂತ ಸಂಚಲನ ಮೂಡಿಸಿದ್ದ ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಬಳಿಕ ಮಹಿಳಾ ಸಬಲೀಕರಣದ ವಿಚಾರ ತೀವ್ರ ಚರ್ಚೆಯಲ್ಲಿದೆ. ಇದೇ ಅವಧಿಯಲ್ಲಿ ಅಂದರೆ ಈ ಹಣಕಾಸು ವರ್ಷದ ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರ ಈ ಹೊಸ ಬ್ಯಾಂಕ್ ಸ್ಥಾಪನೆ ವಿಷಯ ಘೋಷಿಸಿತ್ತು. ಆರಂಭಿಕ ಬಂಡವಾಳಕ್ಕಾಗಿ ೧೦೦೦ ಕೋಟಿ ರೂ.ಗಳ ಅನುದಾನವನ್ನೂ ಘೋಷಿಸಿತ್ತು.
ಹೀಗೆ ಅಂದು ಘೋಷಣೆ ಹೊರಬಿದ್ದ ಬೆನ್ನಲ್ಲೇ ತ್ವರಿತಗತಿಯಲ್ಲಿ ಬ್ಯಾಂಕ್ ಸ್ಥಾಪನೆಗೆ ಸರ್ಕಾರ ಕ್ರಮವನ್ನೂ ಕೈಗೊಂಡಿತ್ತು. ಇದರಂತೆ, ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಜಯಂತಿ ಆಚರಣೆ ದಿನವಾದ ಮಂಗಳವಾರದಿಂದ (೧೯ನವೆಂಬರ್ ೨೦೧೩) ಬೆಂಗಳೂರು, ಮುಂಬೈ, ಕೋಲ್ಕತ ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ಈ ಬ್ಯಾಂಕ್ ತನ್ನ ಕೆಲಸ ಆರಂಭಿಸಿದೆ. ಈ ಹೊಸ ಬ್ಯಾಂಕ್‌ನ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಉಷಾ ಅನಂತಸುಬ್ರಮಣಿಯನ್ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯವ್ಯಾಪ್ತಿ
ಬಿಎಂಬಿ ತನ್ನ ವ್ಯವಹಾರ ಆರಂಭಿಸಿದ ದಿನದಿಂದಲೇ ಠೇವಣಿ ಸಂಗ್ರಹ ಮತ್ತು ಸಾಲ ನೀಡಿಕೆ ಕಾರ್ಯಕ್ಕೂ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಮುಂಬೈ, ಬೆಂಗಳೂರು, ಕೋಲ್ಕತ, ಚೆನ್ನೈ, ಗುವಾಹಟಿ, ಅಹಮದಾಬಾದ್ ಸೇರಿದಂತೆ ಏಳು ನಗರಗಳಲ್ಲಿ ತನ್ನ ಶಾಖೆಯನ್ನು ತೆರೆದಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮುಂಬೈನಲ್ಲಿ ಬ್ಯಾಂಕ್‌ನ ಮೊದಲ ಶಾಖೆಯನ್ನು ಕಳೆದ ವಾರ ಉದ್ಘಾಟಿಸಿದ್ದಾರೆ. ಆರ್‌ಬಿಐ ನಿಯಮಗಳಂತೆ ಹಿಂದುಳಿದ ಪ್ರದೇಶದಲ್ಲಿ ಶೇ.೨೫ರಷ್ಟು ಶಾಖೆಗಳನ್ನು ತೆರೆಯಲು ಬ್ಯಾಂಕ್ ನಿರ್ಧರಿಸಿದೆ. ಈ ಹಣಕಾಸು ವರ್ಷಾಂತ್ಯದೊಳಗೆ ಗ್ರಾಮೀಣ ಪ್ರದೇಶದಲ್ಲೂ ಬ್ಯಾಂಕ್ ಶಾಖೆ ಆರಂಭವಾಗಲಿದೆ. ಮುಂದಿನ ಮಾರ್ಚ್ ತಿಂಗಳೊಳಗಾಗಿ ಒಟ್ಟು ೨೫ ಶಾಖೆಗಳನ್ನು ತೆರೆಯುವುದಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಮುಂದಿನ ನವೆಂಬರ್ ತಿಂಗಳ ಒಳಗಾಗಿ 39 ಶಾಖೆ, 127 ಎಟಿಎಂ ಯಂತ್ರ ಸ್ಥಾಪನೆ ಮತ್ತು 33 ಸಾವಿರಕ್ಕೂ ಅಧಿಕ ಗ್ರಾಹಕರ ಖಾತೆ ತೆರೆಯುವ ಇರಾದೆ ಬ್ಯಾಂಕ್‌ನದ್ದು. ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು ೭೫ ಶಾಖೆ ತೆರೆಯುವ ಗುರಿ ಹೊಂದಿದ್ದು, ಇದೇ ರೀತಿ ಒಟ್ಟು ಏಳು ವರ್ಷಗಳ ಅವಧಿಯಲ್ಲಿ 771 ಶಾಖೆಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ. ೨೦೨೦ರ ವೇಳೆಗೆ ೬೦ಸಾವಿರ ಕೋಟಿ ರ್ವಾಕ ವ"ವಾಟು ನಡೆಸುವ ಗುರಿ ಹಾಕಿಕೊಂಡಿದೆ.
ಉದ್ದೇಶ: ಪ್ರಮುಖವಾಗಿ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವುದು ಮತ್ತು ಮಹಿಳಾ ಚಟುವಟಿಕೆಗಳು ಮತ್ತು ಅವರಿಗೆ ಸಂಬಂಧಿಸಿದ ಉತ್ಪನ್ನಗಳ ಬಗ್ಗೆ ಗಮನಹರಿಸುವ ಕಂಪನಿಗಳಿಗೆ ಸಾಲ ನೀಡುವುದು ಬ್ಯಾಂಕಿನ ಆದ್ಯತೆಯ ವಿಚಾರ. ಆದರೆ, ಪುರುಷರಿಂದ ಠೇವಣಿ ಸಂಗ್ರಹ ಮಾಡುವುದರ ಮೇಲೇನೂ ನಿರ್ಬಂಧಗಳಿಲ್ಲ.ಪ್ರಸ್ತುತ ನಿಯಮಾವಳಿ ಪ್ರಕಾರ, ಸಾಲ ನಿಧಿಯಿಂದ 60:40ರ ಅನುಪಾತದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸಾಲ ವಿತರಿಸಲು ಬ್ಯಾಂಕ್ ತೀರ್ಮಾನಿಸಿದೆ.

ಬಂಡವಾಳ ಕ್ರೂಢೀಕರಣ: ಮೂಲಬಂಡವಾಳವಾಗಿ ಕೇಂದ್ರ ಸರ್ಕಾರ ಬ್ಯಾಂಕ್‌ಗೆ 1000 ಕೋಟಿ ರೂ.ಗಳ ನೆರವು ನೀಡಿದ್ದು, ಈಗ ಕಾರ್ಯಾಚರಣೆ ಆರಂಭಿಸಿರುವ ಬ್ಯಾಂಕ್ ತನ್ನ ಬಂಡವಾಳ ವೃದ್ಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳತೊಡಗಿದೆ. ಪರ್ಯಾಯ ಮಾರ್ಗಗಳ ಬಗ್ಗೆಯೂ ಚಿಂತನೆ ನಡೆಸಿದೆ. ಪ್ರಸ್ತುತ ಉಳಿತಾಯ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ತನಕ ಉಳಿತಾಯಕ್ಕೆ ರ್ವಾಕ ಶೇ.4.5ರಷ್ಟು ಮತ್ತು ಒಂದು ಲಕ್ಷ ರೂಪಾಯಿ ಮೇಲ್ಪಟ್ಟ ಉಳಿತಾಯದ ಖಾತೆಗೆ ಶೇ.೫ರಷ್ಟು ಬಡ್ಡಿ ನೀಡಲಾಗುವುದು. ಇದರಿಂದ ಮಹಿಳೆಯರಲ್ಲಿ ಉಳಿತಾಯದ ಮನೋಭಾವ ಹೆಚ್ಚಲಿದೆ ಎಂದು ಬ್ಯಾಂಕ್ ಅಧ್ಯಕ್ಷೆ ಉಷಾ ತಿಳಿಸಿದ್ದಾರೆ.
ಪ್ರಸ್ತುತ ಬ್ಯಾಂಕಿನ ಏಳು ಶಾಖೆಗಳಲ್ಲಾಗಿ 86 ಉದ್ಯೋಗಿಗಳಿದ್ದು, ಇವರಲ್ಲಿ ಶೇ.೩೬ರಷ್ಟು ಪುರುಷರಿದ್ದಾರೆ. 125 ಅಧಿಕಾರಿಗಳನ್ನು ನಿಯೋಜನೆ ಮೇಲೆ ಮಹಿಳಾ ಬ್ಯಾಂಕ್‌ಗೆ ಕಳು"ಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಇತರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆಡಳಿತ ಮಂಡಳಿಗೆ ಹೇಳಿದೆ. ಅವರನ್ನು ಒಂದು ಹಂತದ ಮೇಲಿನ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಆದರೆ, ಅವರ ಅನುಭವ ಇಲ್ಲಿನ ಬಡ್ತಿ ವಿಷಯದಲ್ಲಿ ಪರಿಗಣಿಸಲ್ಪಡುವುದಿಲ್ಲ ಎಂದು ಹೊಸ ಬ್ಯಾಂಕ್ ಆಡಳಿತ ಸ್ಪಷ್ಟಪಡಿಸಿದೆ.
ಬಿಎಂಬಿ ಅಧ್ಯಕ್ಷೆ ಉಷಾ ಅನಂತಸುಬ್ರಮಣಿಯನ್‌
ಆಡಳಿತ ಮಂಡಳಿ: ಸಿಎಂಡಿ ಉಷಾ ಹೊರತಾಗಿ ರಾಜಸ್ಥಾನದ ಸರಪಂಚ್ ಛವಿ ರಜಾವತ್, ದೇನಾ ಬ್ಯಾಂಕ್‌ನ ಮಾಜಿ ಸಿಎಂಡಿ ನೂಪುರ್ ಮಿತ್ರಾ, ಮಲ್ಟಿಪಲ್ಸ್ ಆಲ್ಟರ್‌ನೇಟ್ ಅಸೆಟ್ ಮ್ಯಾನೇಜ್‌ಮೆಂಟ್‌ನ ರೇಣುಕಾ ರಾಮ್‌ನಾಥ್, ಕೆನರಾಬ್ಯಾಂಕ್‌ನ ಮಾಜಿ ಸಿಎಂಡಿ ಎಂಬಿಎನ್ ರಾವ್, ಗೋದ್ರೆಜ್ ಗ್ರೂಪ್‌ನ ಮಾರುಕಟ್ಟೆ ವಿಭಾಗದ ಅಧ್ಯಕ್ಷೆ ತನ್ಯಾ ದುಬಾಶ್, ಕಮನಿ ಟ್ಯೂಬ್ಸ್‌ನ ಸಿಇಒ ಕಲ್ಪನಾ ಸರೋಜ್ ಮತ್ತು ಸರ್ಕಾರದ ನಾಮನಿರ್ದೇಶಿತ ಸದಸ್ಯೆ ಪ್ರಿಯಾ ಕುಮಾರ್.

 

Author : ದಿವ್ಯಶ್ರೀ ಬಿ. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited