Untitled Document
Sign Up | Login    
ಅಮೆರಿಕದಲ್ಲಿ ಷರೀಫ್ ಜೊತೆ ಮನಮೋಹ(ಕ)ನ ಭೇಟಿ


ಕಾಶ್ಮೀರದಲ್ಲಿ ಪಾಕಿಸ್ತಾನಿ ಉಗ್ರರು ನಮ್ಮ ದೇಶದ 12 ಯೋಧರನ್ನು ಮತ್ತು ಪೊಲೀಸರನ್ನು ಅಮಾನುಶವಾಗಿ ಹತ್ಯೆಗೈದ ಹಿನ್ನಲೆಯಲ್ಲೇ ಅಮೆರಿಕಾ ಪ್ರವಾಸದಲ್ಲಿರುವ ನಮ್ಮ ನೆಚ್ಚಿನ ಮೌನಿ ಪ್ರಧಾನಿ ಮನಮೋಹನ್ ಸಿಂಗ್ ಮನಮೋಹಕವಾಗಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫರೊಂದಿಗೆ ಮಾತುಕತೆಗೆ ಸಿದ್ಧರಾಗುತ್ತಿದ್ದಾರೆ. ಅವರಿಬ್ಬರ ಮಧ್ಯೆ ನಡೆದಿದೆ ಎಂದು ಕಲ್ಪಿಸಲಾದ ಸಂಭಾಷಣೆಯನ್ನು ನೀವು ಕೂಡಾ ಸವಿಯಿರಿ :

ಮನಮೋಹನ ಸಿಂಗ್ : ಸಲಾಂ ಅಲೈಕ್ಕುಂ ನವಾಝ್ ಸಾಬ್.. ನೀವು ಹೇಗಿದ್ದೀರಿ ?..

ನವಾಝ್ ಶರೀಫ್ : ಅಸ್ಸಲೈಕ್ಕುಂ ಸಲಾಂ, ಸಿಂಗ್ ಜೀ.. ನಮ್ದೂಕಿ ಚೆನ್ನಾಗಿದೆ, ನಿಮ್ದೂಕಿ ಹಿಂದೂಸ್ತಾನ್ದಾಗೆ ಎಲ್ಲಾ ಹೇಗಿದೆ?..

ಸಿಂಗ್ : ಹೂಂ, ನಮ್ದೂಕಿ ಅಷ್ಟೇನೂ ಚೆನ್ನಾಗಿಲ್ಲ, ಎಲ್ಲಾ ಕಡೆ ಪ್ರಾಬ್ಲಂ ಷರೀಫ್ ಸಾಬ್..

ಶರೀಫ್ : ಯಾಕೆ ಏನಾಯ್ತು ?..

ಸಿಂಗ್ : ನೋಡಿ, ಈರುೞಿ ಬೆಲೆ, ನಿರುದ್ಯೋಗ, ಬೆಲೆ ಏರಿಕೆ, ಸ್ಕ್ಯಾಮ್, ಭ್ರಷ್ಟಾಚಾರ, ರುಪಾಯಿ ಬೆಲೆ ಇಳಿಕೆ.. ಏನು ಹೇಳಲಿ, ಒಟ್ನಾಗೆ ಎಲ್ಲಾ ಪ್ರಾಬ್ಲಂ.. ಅವೆಲ್ಲಾ ಸಾಲ್ದು ಅಂತ ನಮ್ಮ ಯುವರಾಜ ತುಂಬಾ ಗರಂ ಆಗಿದಾರೆ..

ಶರೀಫ್ : ಯಾಕೆ ಅವರ್ದೂಕಿ ಗರಂ ಆಗಿದೆ ? ಅವ್ರುದೂಕಿ ಯಾವಾಗ್ಲೂ ಕೂಲ್ ಆಗಿ ಇರ್ತಾದೆ ಅಲ್ವಾ?..

ಸಿಂಗ್ : ಹೌದು, ಆದ್ರೆ ನಾನು ದೇಶದಲ್ಲಿ ಇಲ್ದೆ ಇರೋ ಸಮಯದಲ್ಲೆ ಅವ್ರು ನಂ ಸರ್ಕಾರದ ವಿರುದ್ಧ ಗರಂ ಹೇಳಿಕೆ ಕೊಟ್ಟಿದಾರೆ, ದೇಶದ ಎಲ್ಲಾ ನ್ಯೂಸ್ ಚಾನಲ್ ಗಳೂ ಅದೇ ವಿಷಯದ ಬಗ್ಗೆ ಬೊಂಬ್ಡಿ ಹೊಡಿತಾ ಇವೆ ಅಂತ ಮೆಸೇಜ್ ಬಂದಿದೆ..

ಶರೀಫ್ : ಅಯ್ಯೋ, ನೀವು ಮಾತೇ ಆಡಲ್ಲ, ನಿಂ ಮಿನಿಷ್ಟರುಗಳು ಏನೇ ಮಾಡಿದ್ರೂ ಸುಮ್ನೇ ನೋಡ್ತಾ ಇರ್ತೀರಿ ಅಂತ ಎಲ್ರೂ ಹೇಳ್ತಾರಲ್ಲ?. ಹಾಗಿದ್ರೆ ಯುವರಾಜ ನಿಮ್ ಮೇಲೆ ಯಾಕೆ ಗರಂ ಆಗ್ಬೇಕು ಸಿಂಗ್ ಜೀ?..

ಸಿಂಗ್ : ಭ್ರಷ್ಟ ರಾಜಕಾರಣಿಗಳು ಚುನಾವಣೆಗೆ ನಿಲ್ಲೋ ಹಾಗಿಲ್ಲ ಅಂತ ನಂ ಸುಪ್ರೀಂ ಕೋರ್ಟ್ ಹೇಳಿತ್ತು, ಅದ್ರ ಪ್ರಕಾರ ನಂ ದೇಶದಲ್ಲಿ ಅರ್ಧಕ್ಕಿಂತ ಹೆಚ್ಚಿಗೆ ನೇತಾಗಳು ಮನೆಯಲ್ಲಿ ಅಥವಾ ಜೈಲಲ್ಲೇ ಕೂರ್ಬೇಕಾಗುತ್ತೆ.. ಅತಿರಥ ಮಹಾರಥ ನೇತಾಗಳು ಕಂಬಿ ಎಣಿಸಿಕೊಂದು ಇರ್ಬೇಕು, ಇಲ್ಲಾ, ಈವರೆಗೆ ಮಾಡಿದ ದುಡ್ದು ಎಣಿಸ್ತಾ ಇರ್ಬೇಕು. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ನಂ ಸರ್ಕಾರ ಸುಗ್ರೀವಾಜ್ನೆ ಹೊರಡಿಸಿದೆ, ಅದು ರಾಷ್ಟ್ರಪತಿ ಮುಂದೆ ಬರೀ ಒಂದು ಸೈನ್ ಗಾಗಿ ಕೂತಿದೆ. ಆದ್ರೆ ಅವ್ರು ಸೈನ್ ಮಾಡೋ ಹಾಗೆ ಕಾಣಿಸ್ತಾ ಇಲ್ಲ.. ಅದೂ ಅಲ್ದೆ, ಒಪೊಸಿಷನ್ ಪಕ್ಷಗಳು ಸೇರ್ಕೊಂಡು ಎಲ್ರೂ ಸರ್ಕಾರಾನ ಬೈತಾ ಇದಾರೆ..

ಶರೀಫ್ : ಒಹೋ.. ಅಂದ್ರೆ, ನಿಂ ಪ್ಲಾನು ನಿಮ್ಗೇ ಉಲ್ಟಾಹೊಡೀತಾ ಇದೆ ಅಂತ..

ಸಿಂಗ್ : ಅದು ನನ್ ಪ್ಲಾನ್ ಅಲ್ಲ.. ನಾನು ಹೇಳಿಕೇಳಿ ತುಂಬಾ ಅನೆಷ್ಟ್, ನಿಷ್ಟಾವಂತ ಪ್ರಧಾನಿ. ನಂ ಪಕ್ಷದ ನಾಯಕರೆಲ್ಲಾ ಸೇರಿ ನಿರ್ಣಯ ಮಾಡಿದ್ರು. ಅದ್ರಲ್ಲಿ ನನ್ ಅಭಿಪ್ರಾಯ ಯಾರೂ ಕೇಳ್ಲಿಲ್ಲ. ಈಗ ದೇಶದಲ್ಲೆಲ್ಲ ಇದ್ರ ವಿರುದ್ಧ ಚರ್ಚೆಯಾಗ್ತಿರೋದ್ರಿಂದ ನಂ ಬಾಸ್ ಗಳನ್ನ ರಕ್ಷಿಸಲು ನನ್ನ ಬಲಿಕೊಡ್ತಾ ಇದಾರೆ, ಏನ್ಮಾಡ್ಲಿ?.. ಈ ಮೊದ್ಲೂ ಏದ್ವಟ್ಟಾದಾಗಲೆಲ್ಲ ನನ್ ತಲೆಮೇಲೇ ಗೂಬೆ ಕೂರಿಸ್ತಿದ್ರು.. ಇದೇನೂ ಹೊಸದಲ್ಲ..

ಶರೀಫ್ : ಇರ್ಲಿ ಬಿಡಿ ಸಿಂಗ್ ಸಾಬ್, ಇಷ್ಟಕ್ಕೆಲ್ಲ ಬೇಜಾರ್ ಮಾಡ್ಕೊಂಡ್ರೆ ಹ್ಯಾಗೆ? ನಮ್ದೂಕಿ ಪಾಕಿಸ್ತಾನ್ದಾಗೆ ನಾನು ಹೆಸ್ರಿಗಷ್ಟೇ ಪ್ರಧಾನಿ, ಏನಿದ್ರೂ ಆರ್ಮಿ, ಐ.ಎಸ್.ಐ., ಎಲ್-ಇ-ಟಿ., ಅಲ್-ಖೈದಾ.. ಹೀಗೆ ಎಲ್ರ ಆರ್ಡರ್ರೂ ತಗೊಂಡೇ ಕೆಲಸ ಮಾಡ್ಬೇಕು ಗೊತ್ತಾ?.. ಇಲ್ದೇ ಹೋದ್ರೆ ಕುರ್ಚೀನೇ ಎತ್ತಿಬಿಡ್ತಾರೆ..

ಸಿಂಗ್ : ಹೂಂ, ನಂಗೊತ್ತು.. ಅದೇ, ನಿನ್ನೆ ತಾನೆ ಕಾಶ್ಮಿರದಲ್ಲಿ ನಿಮ್ಮ ದೇಶದ ಉಗ್ರರು ನಂ ದೇಶದ ಒಳಗೆ ನುಗ್ಗಿ ನಮ್ಮ ಸೈನಿಕರನ್ನ, ಪೊಲೀಸರನ್ನ ಸಾಯಿಸಿದ್ದಾರೆ.. ನಾನು ನಿಮ್ಮ ಜೊತೆಗೆ ಮಾತುಕತೆ ಮಾಡಬಾರದು ಅಂತ ದೇಶಕ್ಕೆ ದೇಶವೇ ಹೇಳ್ತಾ ಇದೆ, ಆದ್ರೂ ನನ್ನ ಸಂಕಟ ನಿಮಗೆ ಅರ್ಥ ಆಗಬಹುದು ಅಂತ ನಿಮ್ಮನ್ನ ಭೇಟಿಮಾಡಲೇಬೇಕು ಅಂತ ಯಾವಾಗ್ಲೋ ತೀರ್ಮಾನ ಮಾಡಿದ್ದೆ. ಅಂತೂ ನಿಮ್ಮ ಕಥೆ ಕೇಳಿ ನನ್ನ ಮನಸ್ಸು ಹಗುರ ಆಯ್ತು.

ಶರೀಫ್ : ಹೌದು ಸಿಂಗ್ ಜೀ.. ಉಗ್ರರ ಮೇಲೆ ಯಾಕೆ ನಮ್ಮ ಸೇನೆ ಮೇಲೇನೆ ನಂಗೆ ಹತೋಟಿ ಇಲ್ಲ.. ಹೆಚ್ಚು ಮಾತಾಡಿದ್ರೆ ನನ್ನೇ ತೆಗೆದುಬಿಟ್ಟಾರು.. ನಾವಿಬ್ರೂ ಸಮಾನ ದುಃಖಿಗಳು.. ಅವೆಲ್ಲ ಮರೆತು ಒಂದೆರಡು ದಿನಾವಾದ್ರೂ ಅಮೆರಿಕದಲ್ಲಿ ಆರಾಮವಾಗಿರೋಣ ಅಲ್ವಾ?.. ಯಾವಾಗ ನಮ್ಮ ಕುರ್ಚಿ ಹೋಗುತ್ತೋ ಗೊತ್ತಿಲ್ಲ..

ಸಿಂಗ್ : ಹೂಂ, ಹೌದು.. ನಮ್ ದೇಶದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಬರುತ್ತೆ.. ಈ ಸಲವೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ನಂಗೊಂದು ಛಾನ್ಸ್ ಸಿಗಬಹುದೇನೋ.. ಅಲ್ದೆ ದೇಶದಲ್ಲಿ ಮೋದಿ ಅಲೆ ಇದೆ ಅಂತ ರಿಪೋರ್ಟ್ ಬಂದಿದೆ.. ಈ ಬಿಜೆಪಿನವ್ರು ಅಡ್ವಾಣಿ ಮಾತು ಕೇಳ್ತಾ ಇಲ್ಲ.. ಕೇಳಿದ್ರೆ, ಕಾಂಗ್ರೆಸ್ ಸುಲಭವಾಗಿ ಇನ್ನೊಂದು ಐದು ವರ್ಷ ಅಧಿಕಾರಕ್ಕೆ ಬರಬಹುದು.. ಏನ್ಮಾಡೋದು.. ಎಲ್ಲ ಪಡಕೊಂಡು ಬಂದಷ್ಟೇ ದಕ್ಕೋದು ಅಲ್ವಾ?..

ಶರೀಫ್ : ಹೋಗ್ಲಿ ಬಿಡಿ ಸಿಂಗ್ ಜಿ.. ಹತ್ತು ವರ್ಷ ಈ ಭಾಗ್ಯ ಸಿಕ್ತಲ್ಲಾ.. ಈಗ ವಯಸ್ಸೂ ಆಯ್ತು.. ಸುಮ್ನೆ ಮನೇನಾಗೆ ಕೂತ್ಬಿಟ್ರೆ ಆಯ್ತು..

ಸಿಂಗ್ : ವಯಸ್ಸು ಅಷ್ಟೇನಾಗಿದೆ ನಂಗೆ? ಅಡ್ವಾಣಿ 86 ದಾಟಿದ್ರೂ ಪ್ರಧಾನಿ ಅಗೋ ಕನಸು ಕಾಣ್ತಾ ಇರೋವಾಗ ನಾನೂ ಯಾಕೆ ಒನ್ಸ್ ಮೋರ್ ಅನ್ಬಾರ್ದು?..

ಶರೀಫ್ : ಅದೂ ಸರಿ.. ನಿಮ್ ದೇಶ್ದಾಗೆ ಪ್ರಜಾತಂತ್ರ ಇದೆ ನೋಡಿ.. ನಂ ದೇಶ್ದಲ್ಲಿ ಬರೀ ತಂತ್ರ, ಕುತಂತ್ರ ಅಷ್ಟೆ ಇದೆ..

ಸಿಂಗ್ : ನೋಡೋಣ, ಮ್ಯಾಡಂ ಮನಸ್ಸು ಮಾಡಿದ್ರೆ ಯಾಕಾಗಬಾರದು?.. ಇರ್ಲಿ, ನಿಮ್ಮ ಜೊತೆ ಮಾತಾಡಿ ಮನಸ್ಸು ಹಗುರ ಆಯ್ತು.. ನಾನು ಇನ್ನೊಂದು ಸಲ ಪ್ರಧಾನಿ ಆದ್ರೆ ಮತ್ತೆ ಭೇಟಿಯಾಗೋಣ.. ಖುದಾ ಹಫೀಸ್..

ಶರೀಫ್ : ಓಕ್, ಸಿಂಗ್ ಜೀ.. ಖುದಾ ಹಫೀಸ್..

 

Author : ಸಮಚಿತ್ತ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited