Untitled Document
Sign Up | Login    
ಮೋದಿ ಕಂಡರೆ ಅಷ್ಟೊಂದು ಭಯಾನಾ, ಶ್ರೀಮಾನ್ ಮೂರ್ತಿಗಳೆ?..


ಸತ್ವಯುತ ಬರವಣಿಗೆಗಿಂತ ಇತರ ಕಾರಣಗಳಿಗಾಗಿಯೇ ಪ್ರಸಿದ್ಧಿ, ಪ್ರಚಾರ ಪಡೆದುಕೊಂಡ ಕರ್ನಾಟಕದ ಜ್ನಾನಪೀಠಿಗಳಿಬ್ಬರಲ್ಲಿ ಹೆಚ್ಚಿನ ಪ್ರಚಾರಕ್ಕಾಗಿ ಸಾಕಷ್ಟು ಪೈಪೋಟಿ ಇರುವುದು ಗೊತ್ತಿರುವ ವಿಚಾರ. ಅದರಲ್ಲೂ ಕರುನಾಡು ಇತಿಹಾಸದಲ್ಲೇ ಕಂಡ ಮಹಾನ್ ಸಾಹಿತಿ ಅನಂತಮೂರ್ತಿಗಳಂತೂ ತಮ್ಮ 81ರ 'ಯುವಾ'ವಸ್ಥೆಯಲ್ಲೂ ವ್ಯವಸ್ಥೆಯ ವಿರುದ್ಧ ಹೋರಾಡುವ ಅವಸ್ಥೆ ಕಂಡರೆ ಯಾರಿಗಾದರೂ ಅಯ್ಯೋ ಅನ್ನಿಸದಿರದು.

6೦ಕ್ಕೆ ಅರಳು ಮರಳು ಅಂದರೆ, ಈಯಪ್ಪ 80 ದಾಟಿ ಪೂರ್ತಿ ಮರುಳೇ ಅರಳಿದಂತೆ ಮಾತನಾಡುವುದು ಗಮನಿಸಿದರೆ ಕನ್ನಡಿಗರು ಇನ್ನೆಷ್ಟು ದಿನ ಇಂಥ ಘನಘೋರ ಸಾಹಿತಿಯನ್ನು ಸಹಿಸಿಕೊಳ್ಳಬೇಕಾಗುತ್ತದೋ, ಪಾಪ. ತಮ್ಮ ಕನಸಿನ ನೋಬೆಲ್ ಸಿಗುವವರೆಗೂ ಸಾಯೇಬ್ರು ಪಟ್ಟುಬಿಡುವಂತೆ ಕಾಣಿಸುತ್ತಿಲ್ಲ. ಅದರಲ್ಲೂ ಬುಕರ್ ಪ್ರಶಸ್ತಿ ಕೈತಪ್ಪಿಹೋದ (ನಮ್ಮ ದೇಶದ ಹಾಗೆ ಬೇರೆ ದೇಶದಲ್ಲೂ ಬರೀ ಬಕೆಟ್ ಹಿಡಿದರೆ ಪ್ರಶಸ್ತಿ ಸಿಗುತ್ತಾ?) ಈ ದುರದೃಷ್ಟವಂತ ಸಾಹಿತಿಗೆ ಗಟ್ಟಿಯಾಗಿ ಬರೆಯುವುದಕ್ಕೇನು ತೋಚದಿರುವುದರಿಂದ ಈ ಮುದಿ ವಯಸ್ಸಿನಲ್ಲೂ ಒಂದಷ್ಟು ಬಿಟ್ಟಿ ಪ್ರಚಾರ ಸಿಗಬೇಕೆಂಬ ಬಯಕೆ. ಕೆಲವು ಪುಸ್ತಕ ಬಿಡುಗಡೆ ಸಮಾರಂಭ ಬಿಟ್ಟರೆ ಬೇರೇನೂ ಕಾರ್ಯಕ್ರಮಗಳಿಗೆ ಅಹ್ವಾನ ಸಿಗದಿರುವುದೂ ಇವರ ಹತಾಶೆಗೆ ಕಾರಣ ಅಂತಾರೆ ತಿಳಿದವರು. ಅದೂ ಅಲ್ಲದೆ, ಭೈರಪ್ಪನವರು ಎರಡು ವರ್ಷಗಳಿಗೊಮ್ಮೆ ಪುಸ್ತಕ ಬರೆದರೆ ಅವರನ್ನು ತೆಗಳುತ್ತಲೇ ಇರಲು ಅವಕಾಶವಾದರೂ ಎಲ್ಲಿ, ಅಲ್ವೇ?..

ಭರತವರ್ಷದಲ್ಲಿ ಬಿಟ್ಟಿ ಪ್ರಚಾರ ಸಿಗಲು ಇತ್ತೀಚಿನ ಟ್ರೆಂಡ್ ಅಂದರೆ ಹಿಂದೂಗಳ ವಿರುದ್ಧ ಬರೆಯುವುದು, ಹೇಳಿಕೆ ಕೊಡುವುದು ಮತ್ತು ಹಿಂದೂ ದೇವರುಗಳನ್ನು ನಗ್ನವಾಗಿ, ಅಸಹ್ಯವಾಗಿ ಚಿತ್ರಿಸುವುದು. ಇನ್ನಷ್ಟು ಹೆಚ್ಚಿನ, ನ್ಯಾಷನಲ್ ಲೆವೆಲ್ ಪ್ರಚಾರ ಬೇಕೆಂದರೆ ನರೇಂದ್ರ ಮೋದಿಯನ್ನು ತೆಗಳುವುದು. ಡಾ.ಅನಂತಮೂರ್ತಿ ಸಾಹೇಬರು ಮಹಾನ್ ಬುದ್ಧಿವಂತ, ಚಾಣಾಕ್ಷ, ಕುಶಾಗ್ರಮತಿ, ಎಲ್ಲದರಿಂದ ಹೆಚ್ಚಾಗಿ ಎಕ್ಪರ್ಟ್ ಬಕೆಟ್ ಹಿಡಿಯುವಾತ. (ಇಲ್ಲದಿದ್ದರೆ ಅವರ ಬರವಣಿಗೆಗಳಿಗೆ ಪ್ರಶಸ್ತಿ, ಅದರಲ್ಲೂ ಜ್ನಾನಪೀಠ ಸಿಗುತ್ತಿತ್ತೇ?).. ಯಾರ ಬಾಲ, ಅಲ್ಲ.. ಧೋತಿ ಹಿಡಿದರೆ ಯಾವ ಪ್ರಶಸ್ತಿ, ಹುದ್ದೆ ಸಿಗುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲವರು ಮತ್ತು ಆ ದಿವ್ಯ ಕಲೆಯಲ್ಲಿ ಅತ್ಯಂತ ಪರಿಣತಿಯನ್ನು ಹೊಂದಿದವರು.

ಏನೇ ಇರಲಿ, ಇಂಥ ಮಹಾನ್ ಚೇತನ ನಮ್ಮ ನಡುವೆ ಇದ್ದಾರೆ ಎಂಬುದೇ ಹೆಮ್ಮೆಯ ವಿಷಯ. ಇತ್ತೀಚೆಗೆ, ಯಾರೂ ಕಂಡು ಕೇಳರಿಯದಿದ್ದ ವ್ಯಕ್ತಿಯೊಬ್ಬ ತಾನು ತೋಚಿದ್ದೆಲ್ಲಾ ಗೀಚಿದ ಡುಂಢಿ ಎಂಬ 'ಸಂಶೋಧನಾ' ಕಾದಂಬರಿಯನ್ನು ಬಿಡುಗಡೆ ಮಾಡಿಬಿಟ್ಟ. ಅದರಲ್ಲಿ ಕೋಟ್ಯಾಂತರ ಹಿಂದೂಗಳು ಭಕ್ತಿ ಶ್ರದ್ಧೆಯಿಂದ ಪೂಜಿಸುವ ಗಣಪತಿ, ಪಾರ್ವತಿಯರನ್ನು ಮನಬಂದಂತೆ ವಿಕೃತವಾಗಿ ಚಿತ್ರಿಸಿ ನಾಡಿನಾದ್ಯಂತ ಸಾರ್ವಜನಿಕವಾಗಿ ಛೀಮಾರಿ ಹಾಕಿಸಿಕೊಂಡು ತೃಪ್ತನಾದ.

ಅಂಥ ವಿಕೃತ ಮನಸ್ಸಿನ 'ಲೇಖಕ' ಬರೆದ 'ಮಹಾನ್ ಗ್ರಂಥ'ವನ್ನು ನಮ್ಮ ಘನತೆವೆತ್ತ ಇನ್ನೊಬ್ಬ ಜ್ನಾನಪೀಠಿ ಕಾರ್ನಾಡ್ ಸಾಹೇಬ್ರು ಹೊಗಳಿ, 'ಬರೆಯುವುದು ಸಾಹಿತಿಗಳ ಕೆಲಸ, ಬರೆದದ್ದು ಓದಿ ಮನಸ್ಸಿಗೆ ನೋವಾದರೆ ಅದು ಓದುವವರ ಹಣೆಬರಹ' ಎಂದು ಅಪ್ಪಣೆ ಕೊಡಿಸಿ ತಾನು ಇನ್ನೂ ಸುದ್ಧಿಯಲ್ಲಿರುವ ಬುದ್ಧಿಜೀವಿ ಎಂಬುದನ್ನು ಸಾಬೀತುಪಡಿಸಿದರು. ನಿರೀಕ್ಷೆಯಂತೆ ಕರ್ನಾಟಕದ ಜನರಿಂದ ಒಂದಷ್ಟು ಉಗಿಸಿಕೊಂಡರು ಕೂಡಾ.

ಅಷ್ಟರಲ್ಲಿ ಎಚ್ಚೆತ್ತುಕೊಂಡ ನಮ್ಮ ಮೂರ್ತಿವರ್ಯರು, ಅರೇ, ತಾನೂ ಏನಾದ್ರೂ ಹೇಳಿಕೆ ಕೊಟ್ಟು ಬರೀ ಸ್ಟೇಟ್ ಅಲ್ಲ, ನ್ಯಾಷನಲ್ ನ್ಯೂಸ್ ಮಾಡ್ಬೇಕು ಅಂತ ಸ್ಕೆಚ್ ಹಾಕ್ತಾ ಇದ್ದಾಗ ಈ ದಿವ್ಯಜ್ನಾನಿಗೆ ಹೊಳೆದದ್ದು ನರೇಂದ್ರ ಮೋದಿ ಹೆಸರು!. ತಗೋ, ಕೊಟ್ಟೇ ಬಿಟ್ರು, ಹೇಳಿಕೆ. ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ತೊಲಗುವೆ, ಗಾಂಧಿ, ನೆಹರು ಇದ್ದ ದೇಶದಲ್ಲಿ ಮೋದಿ ಆಳ್ವಿಕೆ ಸಹಿಸಲಾರೆ ಅಂತೆಲ್ಲ ಮೈಕ್ ಮುಂದೆ ಹೇಳೇಬಿಟ್ರು!. ಅಲ್ಲಿಗೆ ನೋಡಿ ಅವರ ಇಚ್ಚೆ ನೆರವೇರಿದಂತೆ ಆಯ್ತು. ಬಹುದಿನಗಳ ನಂತರ ಇದೀಗ ನಮ್ಮ ಜ್ನಾನಪೀಠಿ ಸಾಯೇಬ್ರು ಇದ್ದಕ್ಕಿದ್ದ ಹಾಗೆ ನ್ಯಾಷನಲ್ ನ್ಯೂಸ್ ಆಗ್ಬಿಟ್ರು. ಎಲ್ಲಿ ನೋಡಿದರಲ್ಲಿ ಅವರ ಹೇಳಿಕೆಗೆ ಜನ ಎಲೆಅಡಿಕೆ, ಜರ್ದಾ, ಗುಟ್ಕಾ ಹಾಕ್ಕೊಂಡು ಉಗೀತಿದಾರೆ.

ಎಂಬಲ್ಲಿಗೆ ನಮ್ಮ ಮಹಾನ್ ಸಾಹಿತಿ, ಕನ್ನಡದ ಹೆಮ್ಮೆಯ ಕುವರ ಸ್ವಲ್ಪ ತೃಪ್ತರಾದಂತೆ ಕಂಡುಬಂದ್ರು ಅಂತಾರೆ ಅವರನ್ನು ರಾತ್ರಿ 7ರ ಮೊದಲು ನೋಡಿದ ಜನ!.

ಏನೇ ಇರಲಿ, ಮೋದಿ ವಿರುದ್ಧ ಅಷ್ಟೆಲ್ಲ ಮಾತಾನಾಡೋ ಇವರು, ಕಾಂಗ್ರೆಸ್ಸಿನ ಮೇಲೆ ಅದೇಕೆ ಅತೀವ ಮಮತೆ ಹೊಂದಿದ್ದಾರೆ ಅಂತ ರಸ್ತೆ ಬದಿಯಲ್ಲಿ ಜನ ಮಾತಾಡ್ತಾ ಇದ್ದಾರಂತೆ. ಈ ವಯಸ್ಸಲ್ಲೂ ನೋಬೆಲ್ ಬಿಟ್ಟು ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಇನ್ನೇನಾದ್ರೂ ಸಹಾಯ, ಯಾವುದಾದ್ರೂ ಅಕಾಡೆಮಿ ಹುದ್ದೆ ಅಲಂಕರಿಸುವ ಇರಾದೆ ಇದೆಯೆ? ಅಂತ ಗುಟ್ಟಾಗಿ ಜನ ಪಬ್ಲಿಕ್ಕಲ್ಲಿ ಎಲ್ರನ್ನೂ ಕೇಳ್ತಾ ಇದಾರಂತೆ. ಅಥವಾ, ಕೇವಲ ಪ್ರಚಾರ ಚಪಲತೆಯಿಂದ ಮಾತ್ರ ಈ ರೀತಿಯೆಲ್ಲ ಹೇಳ್ತಾ ಇದಾರೇನೋ ಅಂತ ಕೆಲವರಿಗೆ ಗುಮಾನಿ ಕೂಡಾ ಇದೆ ಅಂತ ಅನುಮಾನ.

ಈ ವಯಸ್ಸಲ್ಲೂ ಒಂದಷ್ಟು ಘನತೆಯಿಂದ, ತಾನು ಹೇಗೋ ಪಡೆದ ಪ್ರಶಸ್ತಿಯ ಅಳಿದುಳಿದ ಮರ್ಯಾದೆಯನ್ನಾದರೂ ಉಳಿಸಿಕೊಂಡು ರಾಮಾ ಕೃಷ್ಣಾ ಅಂತ ಬದುಕಬಾರದೇ ಎಂಬುದು ನಮ್ಮ ನೆರೆಮನೆಯ ಅಜ್ಜಿಯ ಅಭಿಪ್ರಾಯ. ಅದು ಹ್ಯಾಗೆ ಸಾಧ್ಯ, ಹುಟ್ಟುಗುಣ ಚಟ್ಟ ಹತ್ತಿದರೂ ಬಿಡದು ಅಂತ ಅಜ್ಜ ಗೊಣಗಿದರು ಅಂತ ಅವರ ಮೊಮ್ಮಗ ನಂಗೆ ಗುಟ್ಟಾಗಿ ಹೇಳ್ದ.

ಇರ್ಲಿ ಬಿಡಿ, ಒಬ್ಬೊಬ್ಬರಿಗೆ ಒಂದೊಂದು ಖಯಾಲಿ. ಸೆಕ್ಯುಲರ್ ವ್ಯಾಧಿಗಳಿಗೆ, ಪ್ರಚಾರಪ್ರಿಯರಿಗೆ, ಸುದ್ಧಿಜೀವಿಗಳಿಗೆ ತಮ್ಮ ತೀಟೆ ತೀರಿಸಲು ಮೋದಿ ಒಂದು ವಸ್ತುವಾದರೆ ಅವರ ಅಭಿಮಾನಿಗಳು ಯಾಕೆ ತಲೆಕೆಡಿಸಿಕೊಳ್ಳಬೇಕು, ಅಲ್ವೇ?..

ತಾಜಾ ಸುದ್ಧಿ: ದೇಶಬಿಟ್ಟು ಹೋಗಲಿರುವ ಮೂರ್ತಿಗಳಿಗೆ ಪಾಕಿಸ್ತಾನ, ಬಾಂಗ್ಲಾ, ಅಫ್ಘಾನಿಸ್ತಾನಗಳಿಂದ ಆಫರ್ ಗಳು ಬರುತ್ತಿವೆಯಂತೆ, ಅದೇ ಸಂತೋಷದ ವಿಚಾರ!. ಅಲ್ಲಾದ್ರೂ ಗಾಂಧಿ ನೆಹರೂ ನೀತಿಗಳನ್ನು ಪ್ರಚಾರ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಲಿ ಎಂಬುದು ಅವರ ಅಭಿಮಾನಗಳ ಹಾರೈಕೆ ಅಂತ ನಂಬಿದ್ದೇವೆ.

 

Author : ಲದ್ದಿಜೀವಿ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited