ರಾಜ್ಯದಲ್ಲಿ 7ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸಿಎಂ ಖುರ್ಚಿ ಏರಬೇಕೆಂಬ ಸಿದ್ದರಾಮಯ್ಯನವರ ದಶಕಗಳ ಕನಸು ನನಸಾಗಿದೆ. ಈ ಹುಮ್ಮಸ್ಸಿನಲ್ಲಿರುವ ಸಿಎಂ ಸಿದ್ದು’ಟೋನಿ’ ಚಿತ್ರದ ಸ್ಟೈಲಿನಲ್ಲಿ ಹಾಡುತ್ತಿದ್ದಾರೆ.
ಸಿಎಂ ಸಿದ್ದು ನಾನು, ರಾಜ್ಯ ಆಳುವೆನು
ಗೇಮು ನನ್ನದೇ, ರೂಲ್ಸು ನನ್ನದೇ
ನನ್ನ ಪಿಪಿಯನ್ನು ನಾನೇ ಊದುವೆನು
ಓಟು ನಿಮ್ಮದು ಕೆಲ್ಸ ನಮ್ಮದು
ಯಾರೇ ಬಂದರೂ ನೋಡಿ ಬಿಡೋಣೆ
5 ವರ್ಷಾ ನಾನೇ ಸುಲ್ತಾನಾ
ಸರಿಗಮಪ ಸಿದ್ದು... ....ಸರಿಗಮಪ ಸಿದ್ದು
ಪರ್ಮಿಶನ್ ಕೊಟ್ರೆ ನಾ ಎಲ್ಲಾ ಚೇಂಜ್ ಮಾಡ್ತಿನಿ
ದೊಡ್ ದೊಡ್ಡಾ ಖಾತೆ ನನ್ ಹತ್ರಾನೇ ಇಟ್ಕೋತೀನಿ
ತಪ್ಪುಗಳನ್ನೆಲ್ಲಾ ನಾ ಮೆಟ್ಟಿ ಇಂದು ನಿಲ್ತೀನಿ
ಕಹಿಯಾದ ಸತ್ಯಾ ನಾ ಹೆಂಗಂದ್ರಂಗೆ ಹೇಳ್ತೀನಿ
ಸರ್ಕಾರದ್ ಖಜಾನೆಲಿ ನಯಾ ಪೈಸೆ ಬ್ಯಾಲೆನ್ಸ್ ಇಲ್ಲಾ
ಪಾಲಿಟಿಕ್ಸ್ ಗಾಡಿಯಲ್ಲಿ ಸ್ವಲ್ಪಕೂಡ ಗಾಳಿಯಿಲ್ಲ
ಹೇಳೋಕೆ ಆಗದ ಕನಸೊಂದು ಉಂಟು ನಂಗೆ
ಮಾಡೋಕೆ ಆಗದ ಕೆಲಸಾನೆ ಬೇಕು ನಂಗೆ
5 ವರ್ಷಾ ನಾನೇ ಸುಲ್ತಾನಾ
ಸರಿಗಮಪ ಸಿದ್ದು... ....ಸರಿಗಮಪ ಸಿದ್ದು
ಕೇಳಪ್ಪ ಪರ್ಮು ನಿನ್ ಕೈಲಿ ಏನೂ ಆಗಲ್ಲ
ನೀ ನಂಗೆ ಸಿಕ್ರೆ ನಾನಂತೂ ಮಾತೇ ಆಡಲ್ಲ
ಸೂಪರ್೪ ಖುರ್ಚಿನಾ ಕೊಟ್ಟೆ ಕೂತ್ಕೊಳೋಕು ಟೈಂ ಇಲ್ಲಾ
ಕೂತ್ಕೊಂಡು ಬಿಟ್ರೆ ನಮ್ ಜನಾ ಓಟೇ ಹಾಕಲ್ಲ
ವಿಪಕ್ಷ ಲೀಡರ್ಸ್ ಗೆ ಮಾಡೋಕೆ ಕೆಲಸ ಇಲ್ಲಾ
ಅವರಿವರ ಮಾತ್ಕೇಳಿ ದಾಂಧಲೆ ಮಾಡ್ತಾರಲ್ಲ
5 ವರ್ಷಾ ನಾನೇ ಸುಲ್ತಾನಾ
ಸರಿಗಮಪ ಸಿದ್ದು... ....ಸರಿಗಮಪ ಸಿದ್ದು
ಸಿಎಂ ಸಿದ್ದು ನಾನು, ರಾಜ್ಯ ಆಳುವೆನು
ಖುರ್ಚಿ ನನ್ನದೇ, ರೂಲ್ಸು ನನ್ನದೇ
ಸರಿಗಮಪ ಸಿದ್ದು... ....ಸರಿಗಮಪ ಸಿದ್ದು