Untitled Document
Sign Up | Login    
ಮಕ್ಕಳು, ಹೆಂಗಸರ ರಕ್ಷಣೆಗೆ ಆರ್.ಎಂ ವಿ ತಂತ್ರಜ್ನಾನ ಸಿದ್ಧ

ಸಾಂದರ್ಭಿಕ ಚಿತ್ರ

ಇನ್ನು ಮುಂದೆ ಮಕ್ಕಳು ಶಾಲೆಯಿಂದ ಮನೆಗೆ ಬರಲು ತಡವಾದಲ್ಲಿ ಪಾಲಕರು ಹೆದರಬೇಕಾಗಿಲ್ಲ.. ಅಷ್ಟೇ ಏಕೆ ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರೂ ಮನೆಗೆ ಬರಲು ಲೇಟ್ ಆದ್ರೂ ಮನೆ ಮಂದಿ ಆತಂಕಪಡುವ ಅಗತ್ಯವೂ ಇಲ್ಲ.. ಇದೇನಿದು ಹೀಗೆ ಹೇಳ್ತಿದಾರೆ.. ಅಂತ ಗಲಿಬಿಲಿಗೊಳ್ತಿದಿರಾ.....?

ಹೌದು..ಶಾಲಾ ಮಕ್ಕಳು ಹಾಗೂ ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರು ಮನೆಗೆ ಬರಲು ತಡವಾದರೆ ಭಯಪಡಬೇಕಾಗಿಲ್ಲ. ಇದಕ್ಕಾಗಿ ಬೆಂಗಳೂರಿನ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು 'ರಿಯಲ್ ಟೈಮ್ ಮಾನಿಟರಿಂಗ್ ಆಫ್ ವೆಹಿಕಲ್'(ಆರ್.ಎಂ.ವಿ) ಎಂಬ ನೂತನ ತಂತ್ರಜ್ನಾನವನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಪೋಷಕರ ಹಾಗೂ ಕುಟುಂಬದ ಜನರ ಆತಂಕ ದೂರ ಮಾಡಲು ಮುಂದಾಗಿದ್ದಾರೆ.

ಈ ರಿಯಲ್ ಟೈಮ್ ಮಾನಿಟರಿಂಗ್ ಆಫ್ ವೆಹಿಕಲ್ ನ್ನು ಶಾಲಾ ಮಕ್ಕಳನ್ನು ಕರೆತರುವ ಹಾಗೂ ರಾತ್ರಿ ಪಾಲಿಯಲ್ಲಿ ಕೆಲಸಮಾಡುವ ಮಹಿಳೆಯರನ್ನು ಕರೆತರುವ ವಾಹನಗಳಿಗೆ ಅಳವಡಿಸಿರೆ ಮನೆಯಿಂದಲೇ ಇಂಟರ್ ನೆಟ್ ಅಥವಾ ಮೊಬೈಲ್ ಮೂಲಕ ಮಕ್ಕಳ ಚಲನವಲನಗಳನ್ನು ವೀಕ್ಷಿಸಬಹುದು.

ಅಲ್ಲದೇ ಅತಿ ವೇಗವಾಗಿ ವಾಹನ ಚಾಲನೆ ಮಾಡುವಂತವರಿಗೆ ಎಚ್ಚರಿಕೆಯನ್ನು ಇದು ನೀಡುತ್ತದೆ. ಅತಿ ವೇಗದಲ್ಲಿ ಚಾಲನೆ ಮಾಡಿದರೆ ವಾಹನ ಮಾಲೀಕರಿಗೆ ಸಿಗ್ನಲ್ ನೀಡಿ ಎಚ್ಚರಿಸುತ್ತದೆ. ಜೊತೆಗೆ ಪೊಲೀಸರಿಗೂ ಸಹಕಾರಿಯಾಗಿದೆ. ಪ್ರತಿ ವಾಹನ ಈ ತಂತ್ರಜ್ನಾನವನ್ನು ಅಳವಡಿಸಿಕೊಂಡರೆ ಅಪರಾಧ ಪ್ರಕರಣಗಳ ಸಂಖ್ಯೆ ಕೂಡ ಕಡಿಮೆಯಾಗಲಿದೆ.

ಇತ್ತೀಚಿನ ದಿನಗಳಲ್ಲಿ ಎಂ ಎನ್ ಸಿ, ಬಿಪಿಓ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳನ್ನು ಡ್ರಾಪ್ ಮಾಡುವ ವಾಹನ ಚಾಲಕರಿಂದ ಕಿರುಕುಳ ಉಂಟಾಗುತ್ತಿದ್ದು, ಹೆಣ್ಣು ಮಕ್ಕಳು ಆತಂಕದಲ್ಲಿ ದುಡಿಯಬೇಕಾದ ಸಂದರ್ಭ ಹೆಚ್ಚಾಗಿದೆ. ಈ ತಂತ್ರಜ್ನಾನವನು ವಾಹನಕ್ಕೆ ಅಳವಡಿಸಿದಲ್ಲಿ ಪೊಲೀಸರಿಗೆ ಮಾಹಿತಿರವಾನೆಯಾಗುತ್ತಿರುವುದರಿಂದ ಚಾಲಕರಲ್ಲಿಯೂ ಭಯವಿರುತ್ತದೆ. ಜೊತೆಗೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತದೆ.
ಇಷ್ಟೇ ಅಲ್ಲ ರಸ್ತೆಯ ನಿಗದಿತ ಸ್ಥಳದಲ್ಲಿ ಆರ್.ಎಂ.ವಿ ಬಳಸಿದಲ್ಲಿ ರಸ್ತೆ ಸುರಕ್ಷತಾ ನಿಯಮ ಮೀರಿ ವೇಗದ ಚಾಲನೆ ಮಾಡುವ ಯಾವುದೇ ವಾಹನ ಮೂರು ಬಾರಿ ನಿಯಮ ಉಲ್ಲಂಘಿಸಿದರೆ ತಕ್ಷಣ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಇದರಿಂದ ಅಪಘಾತದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ನೂತನವಾಗಿ ಈ ತಂತ್ರಜ್ನಾವನ್ನು ಅವಿಷ್ಕರಿಸಿರುವುದರಿಂದ ಆರ್.ಎಂ.ವಿ ಬಾಕ್ಸ್ ಗೆ 4,000ರೂ ಆಗಲಿದ್ದು, ಇದರ ಬಳಕೆ ಹೆಚ್ಚಾದಂತೆ ಕೈಗೆಟುಕುವ ದರದಲ್ಲಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಧ್ವನಿ ಮೂಲಕ ಎಚ್ಚರಿಸುವ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸುತ್ತಾರೆ.

ರಿಯಲ್ ಟೈಮ್ ಮಾನಿಟರಿಂಗ್ ಆಫ್ ವೆಹಿಕಲ್ ನ್ನು ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ ಸತೀಶ್ ಹಾಗೂ ಪ್ರೊ.ಎಲ್.ಜೆ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅನುದೀಪ್, ಎಸ್.ಮಲ್ಲೇಶ್, ಸಂದೀಪ್, ರವೀಶ್, ಶಿವಕುಮಾರ್ ವಿ.ಬಿರಾದಾರ್ ಆವಿಷ್ಕರಿಸಿದ್ದಾರೆ. ಈ ತಂತ್ರಜ್ನಾನಕ್ಕೆ ಶೀಘ್ರದಲ್ಲಿ ಪೇಟೆಂಟ್ ಪಡೆದು ಸಾರ್ವಜನಿಕ ಹಾಗೂ ಎಲ್ಲಾ ವಾಹನಗಳಲ್ಲೂ ಅಳವಡಿಸಲು ಮುಂದಾಗಲು ಕಾಲೆಜು ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ಇನ್ನು ಆರ್.ಎಂ.ವಿ ಬಗ್ಗೆ ಚಿಕ್ಕದಾಗಿ ಹೇಳಬೇಕೆಂದರೆ ಶಾಲಾ ಮಕ್ಕಳನ್ನು ಹಾಗೂ ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರನ್ನು ಡ್ರಾಪ್ ಮಾಡುವ ವಾಹನಗಲಿಗೆ ಇದನ್ನು ಅಳವಡಿಸಿದರೆ ದಿನದ 24ಗಂಟೆ ಸಂಸ್ಥೆಯ ವೆಬ್ ಸೈಟ್ www.ramts.webs.com ಮೂಲಕ ಹಾಗೂ ಸೆಲ್ ಫೋನ್ ಮೂಲಕ ಮನೆಯಿಂದಲೇ ಪೊಷಕರು ನೋಡಬಹುದು.

ಮಾತ್ರವಲ್ಲ ಪ್ರತಿ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಸರ್ವರ್ ಗೆ ಕಳುಹಿಸುವ ವ್ಯವಸ್ಥೆ ಇದರಲ್ಲಿರುವುದರಿಂದ ಸುರಕ್ಷತಾ ದೃಷ್ಠಿಯಿಂದ ಇದೊಂದು ಉತ್ತಮ ಸಾಧನವಾಗಿದೆ.

 

Author : ಸಿ.ಲೇಖಾ ಆರ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited